ಅಶ್ವತ್ಥ ಎಲೆಯಲ್ಲಿ ಭಾವಚಿತ್ರಗಳನ್ನು ರಚಿಸುವ ಇಲ್ಲಿನ ಯುವಕಲಾವಿದ ಮಹೇಶ್ ಮರ್ಣೆ ಕಲಾನಿಪುಣತೆಗೆ ಪ್ರಧಾನಿ ನರೇಂದ್ರ ಮೋದಿ ಪತ್ರದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉಡುಪಿ: ಅಶ್ವತ್ಥ ಎಲೆಯಲ್ಲಿ ಭಾವಚಿತ್ರಗಳನ್ನು ರಚಿಸುವ ಇಲ್ಲಿನ ಯುವಕಲಾವಿದ ಮಹೇಶ್ ಮರ್ಣೆ ಕಲಾನಿಪುಣತೆಗೆ ಪ್ರಧಾನಿ ನರೇಂದ್ರ ಮೋದಿ ಪತ್ರದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪುತ್ತಿಗೆ ಮಠದ ವತಿಯಿಂದ ನಡೆದ ಲಕ್ಷ ಕಂಠ ಗೀತಾ ಪಾರಾಯಣಕ್ಕೆ ಉಡುಪಿಗೆ ಆಗಮಿಸಿದ್ದ ನರೇಂದ್ರ ಮೋದಿ ಅವರಿಗೆ ನೀಡುವುದಕ್ಕಾಗಿ ಮಹೇಶ್ ಅಶ್ವತ್ಥ ಎಲೆಯಲ್ಲಿ ಮೋದಿ ಭಾವಚಿತ್ರ ರಚಿಸಿ ತಂದಿದ್ದರು, ಆದರೆ ನೀಡಲು ಸಾಧ್ಯವಾಗಿರಲಿಲ್ಲ. ನಂತರ ಅದೇ ಕಲಾಕೃತಿಯನ್ನು ಮಹೇಶ್ ಅವರು ಅಂಚೆಯ ಮೂಲಕ ಮೋದಿ ಅವರಿಗೆ ಕಳುಹಿಸಿದ್ದರು.ಅದನ್ನು ಕಂಡು ಇದೀಗ ಪ್ರಧಾನಿ ಅವರಿಂದ ಮೆಚ್ಚುಗೆಯ ಪತ್ರ ಬಂದಿದ್ದು, ನಿಮ್ಮಂತಹ ಅಸಾಮಾನ್ಯ ಪ್ರತಿಭವಂತ ಯುವಕರು ವಿಕಸಿತ ಭಾರತದ ಹಿಂದಿರುವ ಶಕ್ತಿ ಎನ್ನುವ ನನ್ನ ಭರವಸೆಯನ್ನು ಇನ್ನಷ್ಟು ಗಟ್ಟಿುಗೊಳಿಸುತ್ತಿದೆ ಎಂದು ಶ್ಲಾಘಿಸಿದ್ದಾರೆ. ಉಡುಪಿಗೆ ಬಂದಿದ್ದಾಗ ಅಲ್ಲಿನ ಜನತೆ ತೋರಿದ ಪ್ರೀತಿಯನ್ನು ಸ್ಮರಿಸಿಕೊಂಡು, ಅದು ಮರೆಯಾಲಾಗದ ನೆನಪಾಗಿ ನನ್ನಲ್ಲಿ ಉಳಿಯಲಿದೆ, ಜೊತೆಗೆ ಅದು ನನ್ನನ್ನು ಇನ್ನಷ್ಟು ಜನಸೇವೆಗೆ ಪ್ರೇರೇಪಿಸಿದೆ ಎಂದು ಉಲ್ಲೇಖಿಸಿದ್ದಾರೆ.