ಸಾರಾಂಶ
ಆಧುನಿಕ ತಂತ್ರಜ್ಞಾನ ಯುಗದಲ್ಲಿ ಜೀವಿಸುತ್ತಿರುವ ನಾವುಗಳು ಮಕ್ಕಳ ಭವಿಷ್ಯದ ದಾರಿಗೆ ಬೆಳಕನ್ನು ಚೆಲ್ಲುವಲ್ಲಿ ಎಡವಿ ಬೀಳುತ್ತಿದ್ದೇವೆ
ಕನ್ನಡಪ್ರಭ ವಾರ್ತೆ ಮೈಸೂರು
ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಶ್ರೀ ಛಾಯಾದೇವಿ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲ ಆಂಥೋನಿ ಪೌಲ್ ರಾಜ್ ಪೋಷಕರಿಗೆ ಸಲಹೆ ನೀಡಿದರು.ಬೋಗಾದಿಯ ಮರಿಯನಿಕೇತನ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ಮಾತನಾಡಿದ ಅವರು, ಆಧುನಿಕ ತಂತ್ರಜ್ಞಾನ ಯುಗದಲ್ಲಿ ಜೀವಿಸುತ್ತಿರುವ ನಾವುಗಳು ಮಕ್ಕಳ ಭವಿಷ್ಯದ ದಾರಿಗೆ ಬೆಳಕನ್ನು ಚೆಲ್ಲುವಲ್ಲಿ ಎಡವಿ ಬೀಳುತ್ತಿದ್ದೇವೆ. ಕಾರಣ ಹುಟ್ಟಿದ ಮಗುವಿಗೆ ತಂದೆ- ತಾಯಿಯ ಪ್ರೀತಿ, ವಾತ್ಸಲ್ಯ, ಮಮತೆ, ಕರುಣೆ ಇದು ಯಾವುದು ಸರಿಯಾಗಿ ಸಿಗದಿರುವುದಾಗಿದೆ ಎಂದರು.
ಮಕ್ಕಳನ್ನು ಅತಿಯಾಗಿ ಮುದ್ದಿಸುವುದೇ ಒಂದು ಶಾಪವಾಗುತ್ತಿದೆ. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವಲ್ಲಿ ಪೋಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಮಕ್ಕಳಿಗೆ ಶಿಸ್ತು ಎನ್ನುವುದು ಬಹಳ ಮುಖ್ಯ. ಮಗು, ಶಿಕ್ಷಕ, ಪೋಷಕರು ಇವರಿಂದ ಮಾತ್ರ ಶಿಕ್ಷಣ ಮಕ್ಕಳಲ್ಲಿ ಪರಿಣಾಮಕಾರಿಯಾದ ಕಲಿಕೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಿಸ್ಟರ್ ಫಿಲೋಮಿನಾ ನೋರೋನ, ಮುಖ್ಯೋಪಾಧ್ಯಾಯನಿ ಸಿಸ್ಟರ್ ರೂಪ ಲೋಪೋಸ್, ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಆರೋಗ್ಯಮೇರಿ, ಪೋಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಶಂಕರ್, ಶಿಕ್ಷಕರು ಹಾಗೂ ಪೋಷಕರು ಇದ್ದರು.