ಸಹಕಾರ ತತ್ವ ಗಾಂಧೀಜಿ ಕನಸು: ನರೇಂದ್ರ

| Published : Oct 03 2023, 06:02 PM IST

ಸಹಕಾರ ತತ್ವ ಗಾಂಧೀಜಿ ಕನಸು: ನರೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಸಹಕಾರ ತತ್ವ ಗಾಂಧೀಜಿ ಕನಸು: ನರೇಂದ್ರ
ಕನ್ನಡಪ್ರಭ ವಾರ್ತೆ, ತರೀಕೆರೆ ಸಹಕಾರ ತತ್ವ ಗಾಂಧೀಜಿ ಕನಸು ಅವರ ತತ್ವ, ಸಿದ್ಧಾಂತ, ಅಹಿಂಸಾ ಮಾರ್ಗದ ಮೂಲಕ ಮಾನವೀಯ ಮೌಲ್ಯ ಬಳಸಿಕೊಂಡರೆ ಭವ್ಯ ಭಾರತವಾಗಿಸ ಬಹುದು ಎಂದು ಶ್ರೀ ರೇವಣಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಎಂ. ನರೇಂದ್ರ ತಿಳಿಸಿದರು, ಪಟ್ಟಣದ ಶ್ರೀ ರೇವಣಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ನಡೆದ ಗಾಂಧಿ ಜಯಂತಿ ಆಚರಣೆಯಲ್ಲಿ ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಮಹಾತ್ಮರು ಭಗವದ್ಗೀತೆ ಹಾಗೂ ಅಮೆರಿಕದ ಸಾಹಿತಿ ಲಿಯೋ ಟಾಲ್ಸ್ಟೈಲ್ ಅವರ ಸಾಹಿತ್ಯ ಓದಿ ಪ್ರೇರೇಪಿತರಾಗಿ ಭಾರತೀಯರು ಸ್ವತಂತ್ರ ರಾಗಬೇಕೆಂಬ ಆಶಾಭಾವನೆಯಿಂದ ಅಹಿಂಸಾ ಮಾರ್ಗದ ಮೂಲಕ ಹೋರಾಟ ನಡೆಸಿದರು. ಅದರ ಫಲವಾಗಿ ಭಾರತ ದಾಸ್ಯದ ಸಂಕೋಲೆಯಿಂದ ಬಿಡುಗಡೆಯಾಗಿದೆ. ಇದರ ಪ್ರಯೋಜನವನ್ನು ನಾವು ಪಡೆದುಕೊಂಡು ಈ ಭವ್ಯ ಭಾರತದ ಅಭಿವೃದ್ಧಿಗೆ ಶ್ರಮಿಸೋಣ ಎಂದರು. ನಿರ್ದೇಶಕ ರಮೇಶ್, ಸಹಾಯಕ ವ್ಯವಸ್ಥಾಪಕ ಪ್ರಹ್ಲಾದ,ಸಿದ್ದರಾಜು ಭಾಗವಹಿಸಿದ್ದರು. 2ಕೆಟಿಆರ್-ಕೆಃ2ಃ ತರೀಕೆರೆಯಲ್ಲಿ ಶ್ರೀ ರೇವಣಸಿದ್ದೇಶ್ವರ ಪ್ರಾ.ಕೃಷಿ.ಪ.ಸಹಕಾರ ಸಂಘದಿಂದ ಗಾಂಧಿಜಿ ಜಯಂತಿ ಏರ್ಪಡಿಸಲಾಗಿತ್ತು.