ಯಾಜ್ಞವಲ್ಕ್ಯ ಮಹರ್ಷಿಗಳ ತತ್ವ ಪಾಲಿಸಿ: ಗೌತಮ ಕುಲಕರ್ಣಿ

| Published : Jun 18 2024, 12:48 AM IST

ಯಾಜ್ಞವಲ್ಕ್ಯ ಮಹರ್ಷಿಗಳ ತತ್ವ ಪಾಲಿಸಿ: ಗೌತಮ ಕುಲಕರ್ಣಿ
Share this Article
  • FB
  • TW
  • Linkdin
  • Email

ಸಾರಾಂಶ

ಯಾಜ್ಞವಲ್ಕ್ಯರ ಗ್ರಂಥಗಳ ಪಾರಾಯಣದಿಂದ ಸರ್ವಶ್ರೇಯಸ್ಸು ಸಿಗಲಿದೆ. ಧರ್ಮವೆಂಬುದು ದೈನಂದಿನ ಜೀವನದಲ್ಲಿ ನಡೆಯಬೇಕಾದ ದಿನನಿತ್ಯದ ವ್ಯವಹಾರಗಳಿಗೂ ಸಂಬಂಧಿಸಿದ್ದಾಗಿದೆ. ಶುಕ್ಲ ಯಜುರ್ವೇದವನ್ನು ಜಗತ್ತಿನಾದ್ಯಂತ ಪಸರಿಸುವಂತೆ ಮಾಡಿದ ಕೀರ್ತಿ ಮಹರ್ಷಿ ಯಾಜ್ಞವಲ್ಕ್ಯರಿಗೆ ಸಲ್ಲುತ್ತದೆ.

ಕನ್ನಡಪ್ರಭ ವಾರ್ತೆ ಶಹಾಪುರ

ವೈದಿಕ ಋಷಿಮುನಿಗಳಲ್ಲಿ ಯಾಜ್ಞವಲ್ಕ್ಯ ಮಹರ್ಷಿಗಳು ಅಗ್ರಗಣ್ಯರಾಗಿದ್ದು, ಜಾತಿ, ವರ್ಣ ಭೇದವಿಲ್ಲದೆ ಅವರ ತತ್ವ ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಸಾಧಕ ಗೌತಮ ಸುಧಾಕರ ಕುಲಕರ್ಣಿ ತಿಳಿಸಿದರು.

ನಗರದ ಹಳೆಪೇಟೆಯ ಪರಿಮಳ ಪ್ರಸಾದ ಕಲ್ಯಾಣ ಮಂಟಪದಲ್ಲಿ ಯೋಗೀಶ್ವರ ಯಾಜ್ಞವಲ್ಕ್ಯ ಮಹರ್ಷಿಗಳ ಸೇವಾ ಸಮಿತಿ ವತಿಯಿಂದ ನಡೆದ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಯಾಜ್ಞವಲ್ಕ್ಯಮಹರ್ಷಿ ಕುರಿತು ಅವರು ಪ್ರವಚನ ನೀಡಿದರು.

ಯಾಜ್ಞವಲ್ಕ್ಯರ ಗ್ರಂಥಗಳ ಪಾರಾಯಣದಿಂದ ಸರ್ವಶ್ರೇಯಸ್ಸು ಸಿಗಲಿದೆ. ಧರ್ಮವೆಂಬುದು ದೈನಂದಿನ ಜೀವನದಲ್ಲಿ ನಡೆಯಬೇಕಾದ ದಿನನಿತ್ಯದ ವ್ಯವಹಾರಗಳಿಗೂ ಸಂಬಂಧಿಸಿದ್ದಾಗಿದೆ. ಶುಕ್ಲ ಯಜುರ್ವೇದವನ್ನು ಜಗತ್ತಿನಾದ್ಯಂತ ಪಸರಿಸುವಂತೆ ಮಾಡಿದ ಕೀರ್ತಿ ಮಹರ್ಷಿ ಯಾಜ್ಞವಲ್ಕ್ಯರಿಗೆ ಸಲ್ಲುತ್ತದೆ. ಪ್ರತಿಯೊಬ್ಬರು ಆಧ್ಯಾತ್ಮದ ದಾರಿಯಲ್ಲಿ ಮುನ್ನಡೆಯಬೇಕು, ಸತ್ಯ, ಧರ್ಮ, ತತ್ವದ ಬೆಳಕಿನತ್ತ ಸಾಗುವ ಸಂಕಲ್ಪ ನಮ್ಮದಾಗಲಿ ಎಂದರು.

ಈ ಸಂದರ್ಭದಲ್ಲಿ ಸಂಗೀತ ವಿದ್ವಾಂಸ ಚಂದ್ರಶೇಖರ ಗೋಗಿ ತಂಡದವರಿಂದ ವಿಶೇಷ ಭಕ್ತಿ ಗೀತೆಗಳು, ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಪುಟಾಣಿ ಖುಷಿ ಅಗ್ನಿ ಭರತನಾಟ್ಯ ಕಣ್ಮನ ಸೆಳೆಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯು ದ್ವಿತೀಯ ಭಾಗದಲ್ಲಿ ಹೆಚ್ಚು ಅಂಕ ಪಡೆದ ವಿಪ್ರ ಸಮುದಾಯದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ಬೆಳಗ್ಗೆ ಮಹರ್ಷಿಗಳ ಅಷ್ಟೋತ್ತರ, ಸತ್ಯನಾರಾಯಣ ಪೂಜೆ, ಭಜನೆ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮ ಜರುಗಿದವು.

ಸೇವಾ ಸಮಿತಿ ಅಧ್ಯಕ್ಷ ಭೀಮಸೇನಾಚಾರ್ಯ ಜೋಶಿ, ಶ್ರೀಕಾಂತ ಸರ್ಕಿಲ್, ಡಾ. ಗಂಗಾಧರ ಸರಾಫ, ಮಲ್ಹರಾವ ಕುಲ್ಕರ್ಣಿ, ಪ್ರಾಣೇಶ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ, ಬಸವಂತರಾವ ಕುಲಕರ್ಣಿ, ವಾಸುದೇವಾಚಾರ್ಯ ಸಗರ, ಶ್ರೀನಿವಾಸ, ನರಸಿಂಹಾಚಾರ್ಯ ರೊಟ್ಟಿ, ರಾಘವೇಂದ್ರ ಸರ್ನಾಡ, ಧೀರೇಂದ್ರ ಭಕ್ರಿ, ಸತ್ಯನಾರಾಯಣ ದೇಸಾಯಿ ಸೇರಿ ಸರ್ವ ವಿಪ್ರ ಸಮಾಜದ ಪ್ರಮುಖರು ಇದ್ದರು.

ಕಾರ್ತಿಕ ಆರ್., ಪೂಜಾ ಬಿ., ಶ್ರೇಯಾ ತಿಳಗೂಳ, ವೈಷ್ಣವಿ ಪಿ., ಕೃತಿಕಾ ಜೋಶಿ, ಅನುಪ್ರಿಯಾ ಜೋಶಿ, ಮಲ್ಹರಾವ ಕುಲಕರ್ಣಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.