ಸಾರಾಂಶ
ಸರಳ ಜೀವನ ಉನ್ನತ ಚಿಂತನೆ ಮಹಾತ್ಮ ಗಾಂಧೀಜಿ ಅವರ ಧ್ಯೇಯವಾಗಿದ್ದು, ಅದನ್ನು ಕೇವಲ ಬೋಧಿಸದೆ ಜೀವಮಾನವಿಡೀ ಪಾಲಿಸಿದರು. ತತ್ವರಹಿತ ರಾಜಕೀಯ, ದುಡಿಮೆ ಇಲ್ಲದ ಸಂಪತ್ತು, ಶೀಲವಿಲ್ಲದ ಶಿಕ್ಷಣ, ನೀತಿ ಹೀನ ವ್ಯಾಪಾರ, ಮಾನವತೆ ಇಲ್ಲದ ವಿಜ್ಞಾನ, ತ್ಯಾಗ ಇಲ್ಲದ ಪೂಜೆ, ಆತ್ಮಸಾಕ್ಷಿ ಇಲ್ಲದ ಭೋಗ ಇವು ಏಳು ಮಹಾ ಪಾಪಗಳು ಎಂಬುದು ಗಾಂಧೀಜಿ ವಿಚಾರವಾಗಿತ್ತು.
ಬೇಲೂರು: ಗಾಂಧೀಜಿಯವರ ಅಹಿಂಸೆ, ಸತ್ಯ ಮತ್ತು ಸ್ವಯಂ- ಶಿಸ್ತಿನ ತತ್ವಾದರ್ಶಗಳನ್ನು ನಾವು ಅನುಸರಿಸುವುದು ಮುಖ್ಯ. ನಾವು ಅವರ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅವರು ಸ್ವಚ್ಛತೆ ಮತ್ತು ಸ್ವದೇಶಿ ವಸ್ತುಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ನಾವೂ ಇಂದು ಅದನ್ನು ಅನುಸರಿಸುವ ಮೂಲಕ ದೇಶದ ಅಭಿವೃದ್ಧಿಗೆ ಪಣತೊಡಬೇಕಿದೆ ಎಂದು ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಎಚ್. ಎಂ. ಮಹೇಶ್ ತಿಳಿಸಿದರು.
ಪಟ್ಟಣದ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಅವರ 155ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸರಳ ಜೀವನ ಉನ್ನತ ಚಿಂತನೆ ಮಹಾತ್ಮ ಗಾಂಧೀಜಿ ಅವರ ಧ್ಯೇಯವಾಗಿದ್ದು, ಅದನ್ನು ಕೇವಲ ಬೋಧಿಸದೆ ಜೀವಮಾನವಿಡೀ ಪಾಲಿಸಿದರು. ತತ್ವರಹಿತ ರಾಜಕೀಯ, ದುಡಿಮೆ ಇಲ್ಲದ ಸಂಪತ್ತು, ಶೀಲವಿಲ್ಲದ ಶಿಕ್ಷಣ, ನೀತಿ ಹೀನ ವ್ಯಾಪಾರ, ಮಾನವತೆ ಇಲ್ಲದ ವಿಜ್ಞಾನ, ತ್ಯಾಗ ಇಲ್ಲದ ಪೂಜೆ, ಆತ್ಮಸಾಕ್ಷಿ ಇಲ್ಲದ ಭೋಗ ಇವು ಏಳು ಮಹಾ ಪಾಪಗಳು ಎಂಬುದು ಗಾಂಧೀಜಿ ವಿಚಾರವಾಗಿತ್ತು ಎಂದು ಅವರು ತಿಳಿಸಿದರು.ಕಾರ್ಯಕ್ರಮದಲ್ಲಿ ಐಕ್ಯುಎಸಿ ಸಂಚಾಲಕ ಡಾ. ಕೆ.ಟಿ. ನಾಗೇಂದ್ರಪ್ಟ , ದೈಹಿಕ ಶಿಕ್ಷಣ ನಿರ್ದೇಶಕ ಬಾಬು ಪ್ರಸಾದ್ , ಆಧೀಕ್ಷಕ ಕೇಶವ ಕಿರಣ, ಆಧ್ಯಾಪಕರಾದ ವೀರಭದ್ರಪ್ಪ , ಮೋಹನ ಕುಮಾರ್ , ಲೋಕೇಶ್ , ಸುಮಂತ್ ಕುಮಾರ್ ಜೈನ್ ಮತ್ತಿತರರು ಭಾಗವಹಿಸಿದ್ದರು.
ಕಾರ್ಯಕ್ರಮದ ನಂತರ ಕಾಲೇಜು ಆವರಣವನ್ನು ಕಾಲೇಜನ ಪ್ರಾಧ್ಯಾಪಕ ಸಿಬ್ಬಂದಿಯಿಂದ ಸ್ವಚ್ಛಗೊಳಿಸಲಾಯಿತು. ಕಾಲೇಜಿನ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಇದ್ದರು.