ಸಾರಾಂಶ
ಸ್ವಚ್ಛ ಸಂಕೀರ್ಣ ಘಟಕ ಉದ್ಘಾಟಿಸಿ, ವಾಲ್ಮೀಕಿ ಸಮುದಾಯ ಭವನದ ಗುದ್ದಲಿಪೂಜೆ
ಕನ್ನಡಪ್ರಭ ವಾರ್ತೆ ತುಮಕೂರು
ಗ್ರಾಮಗಳ ಸ್ವಚ್ಛತೆಗೆ ಗ್ರಾಮ ಪಂಚಾಯಿತಿಯವರು ಆದ್ಯತೆ ನೀಡಬೇಕು. ಗ್ರಾಮ ನೈರ್ಮಲ್ಯದ ಮೂಲಕ ಗ್ರಾಮಸ್ಥರ ಆರೋಗ್ಯ ರಕ್ಷಣೆ ಮಾಡಬೇಕು. ಮನೆಗಳಿಂದ ಕಸ ಸಂಗ್ರಹಿಸಿ ಕಸ ವಿಲೇವಾರಿ ಘಟಕದಲ್ಲಿ ಸಂಸ್ಕರಣೆ ಮಾಡಬೇಕು ಎಂದು ಶಾಸಕ ಬಿ.ಸುರೇಶ್‌ಗೌಡರು ಹೇಳಿದರು.ಬುಧವಾರ ತುಮಕೂರು ಗ್ರಾಮಾಂತರ ಕ್ಷೇತ್ರದ ಹೊಳಕಲ್ಲು ಗ್ರಾಮ ಪಂಚಾಯಿತಿಯ ಸ್ವಚ್ಛ ಸಂಕೀರ್ಣ ಘಟಕ ಉದ್ಘಾಟಿಸಿ, ವಾಲ್ಮೀಕಿ ಸಮುದಾಯ ಭವನದ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಎಲ್ಲಾ ಹಳ್ಳಿಗಳಲ್ಲೂ ಸ್ವಚ್ಛತೆ ಕಾಪಾಡಬೇಕು. ಈ ಬಗ್ಗೆ ಗ್ರಾಮ ಪಂಚಾಯಿತಿಯವರು ಗ್ರಾಮಸ್ಥರಲ್ಲಿ ಅರಿವು ಮೂಡಿಸಬೇಕು. ಜನರೂ ಸಹ ಕಸವನ್ನು ರಸ್ತೆ, ಚರಂಡಿಗೆ ಎಸೆಯದೆ ಗ್ರಾಮ ಪಂಚಾಯಿತಿ ಸಂಗ್ರಹಿಸುವ ಕಸದ ವಾಹನಕ್ಕೆ ಕೊಡಬೇಕು. ಪರಿಸರ ಸ್ವಚ್ಛತೆ ಬಗ್ಗೆ ಮಕ್ಕಳಿಗೂ ತಿಳುವಳಿಕೆ ನೀಡಬೇಕು ಎಂದು ಹೇಳಿದರು.ಹೊಳಕಲ್ಲು ಗ್ರಾಮದಲ್ಲಿ 50 ಲಕ್ಷ ರು. ಅಂದಾಜು ವೆಚ್ಚದಲ್ಲಿ ಸುಸಜ್ಜಿತವಾದ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತದೆ. ಎಲ್ಲಾ ಸಮುದಾಯದವರು ತಮ್ಮ ಕಾರ್ಯಕ್ರಮಗಳಿಗೆ ಈ ಭವನವನ್ನು ಬಳಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಹೊಳಕಲ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎ.ಆಂಜನಪ್ಪ, ಉಪಾಧ್ಯಕ್ಷೆ ಸುಮಿತ್ರಾ ಶ್ರೀನಿವಾಸ್, ಹೊನ್ನುಡಿಕೆ ಪಂಚಾಯ್ತಿ ಅಧ್ಯಕ್ಷೆ ಗೀತಾ ರಾಜಣ್ಣ, ಮುಖಂಡರಾದ ಸಿದ್ಧೇಗೌಡರು, ಕಂಠಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ನವೀನಕುಮಾರಿ ರಮೇಶ್, ಎಂ.ಕೃಷ್ಣಮೂರ್ತಿ, ಹೆಚ್.ಸಿ.ಸರೋಜ, ಗಂಗಮ್ಮ ನಟರಾಜು, ಚೈತ್ರ ಶಶಿಕಿರಣ್, ಕೆಂಪಹನುಮಯ್ಯ, ಗೌರಮ್ಮ, ಹೆಚ್.ಎನ್.ಕುಮಾರ್, ಹೆಚ್.ಶಿವಮೂರ್ತಿ, ಹನುಮಂತರಾಯಪ್ಪ ಅನ್ಸರಿ ರಿಹಾನ್, ಸೈಯದ್ ಪೀರ್, ಶಶಿಕಲಾ, ಕಲ್ಪನಾ ನವೀನ್‌ಕುಮಾರ್, ನಾರಾಯಣಪ್ಪ ಚೋಳೇನಹಳ್ಳಿ ರಾಜಣ್ಣ, ಮಮತಾ ಗಿರೀಶ್, ಆಯಿಷಾ, ಕೆಂಪರಂಗೇಗೌಡ, ಪಿಡಿಓ ತೇಜಸ್, ಮುಖಂಡರಾದ ನಾಗಣ್ಣ, ಮಂಜುನಾಥ್, ರಾಜು, ಹನುಮೇಗೌಡ, ಚಂದನ್, ನಟರಾಜ್, ಕೆಂಪಹನುಮಯ್ಯ, ಚೌಡಪ್ಪ, ಕೆಂಪರಂಗಯ್ಯ, ಗುರುರಾಜ್, ರಮೇಶ್, ಅಮೀದ್ ಇತರರು ಭಾಗವಹಿಸಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))