ಎಸ್‌ಐಆರ್ ತರಬೇತಿ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಸುಸೂತ್ರ ಹಾಗೂ ಪಾರದರ್ಶಕವಾಗಿ ನಡೆಯಲು ದೋಷಮುಕ್ತ ಮತದಾರರ ಪಟ್ಟಿ ಅತ್ಯಗತ್ಯ. ಹೀಗಾಗಿ ನಿಯಮಾನುಸಾರ ಹಮ್ಮಿಕೊಳ್ಳಲಾಗುವ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಯಲ್ಲಿ ಯಾವುದೇ ಲೋಪವಾಗದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಚ್ಚಿನ ಗಮನಹರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಭನ್ವರ್ ಸಿಂಗ್ ಮೀನಾ ತಿಳಿಸಿದರು.ನಗರಸಭೆ ಸಭಾಂಗಣದಲ್ಲಿ ಸೋಮವಾರ ಎಸ್‌ಐಆರ್ ಅನುಷ್ಠಾನಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ವೇಳಾಪಟ್ಟಿಯಂತೆ ಎಲ್ಲಾ ಕಾರ್ಯ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಜಿಲ್ಲೆಯ ಎಲ್ಲಾ ಐದು ವಿಧಾನಸಭಾ ಮತ ಕ್ಷೇತ್ರಗಳ ಮತದಾರರ ನೋಂದಣಾಧಿ ಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಇದಲ್ಲದೆ, ವಿಧಾನಸಭಾ ಮತ ಕ್ಷೇತ್ರವಾರು ಮತಗಟ್ಟೆ ಮಟ್ಟದ ಏಜೆಂಟ (ಬಿಎಲ್‌ಎ)ರನ್ನು ನೇಮಕ ಮಾಡುವ ಕುರಿತು ನೋಂದಾಯಿತ ರಾಜಕೀಯ ಪಕ್ಷದವರಿಗೂ ತಿಳಿಸಲಾಗಿದೆ. ಎಸ್‌ಐಆರ್ ಕುರಿತು ಸಾರ್ವಜನಿಕರಲ್ಲಿ ಯಾವುದೇ ಗೊಂದಲವಿದ್ದಲ್ಲಿ ಆಯಾ ಮತ ಕ್ಷೇತ್ರದ ನೋಂದಣಾಧಿಕಾರಿ ಮಾಹಿತಿ ನೀಡಿ, ಅದನ್ನು ಪರಿಹರಿಸುವಂತೆ ತಿಳಿಸಿದರು.ಮಾಸ್ಟರ್ ಟ್ರೈನರ್ ಕಾಂತರಾಜು ಮಾತನಾಡಿ, ಎಸ್‌ಐಆರ್ ಹೊಸದೇನಲ್ಲ. ದೇಶದಲ್ಲಿ ಈಗಾಗಲೇ 10 ಬಾರಿ ಎಸ್‌ಐಆರ್ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ. ಪ್ರತಿ ಸಾರ್ವತ್ರಿಕ ಚುನಾವಣೆಗೂ ಮುನ್ನ, ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಹಾಗೂ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ನಿಯಮಿತವಾಗಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯು ತ್ತಿರುತ್ತವೆ. ಅರ್ಹ ಮತದಾರರ ವಿವರ ಪರಿಶೀಲಿಸಲು 2002 ರ ಮತದಾರರ ಪಟ್ಟಿಯನ್ನು ಮೂಲ ಪಟ್ಟಿ ಎಂದು ಪರಿಗಣಿಸ ಲಾಗಿದೆ ಎಂದು ಹೇಳಿದರು.ನಾವು ಈ ಹಿಂದೆ ಹಲವು ಚುನಾವಣೆ ನಡೆಸಿದ್ದೇವೆ. ಕೆಲಸವನ್ನೂ ಮಾಡಿದ್ದೇವೆ. ಆದರೆ, ಪ್ರತಿ ಬಾರಿಯೂ ಮತದಾರರ ಪಟ್ಟಿ ಮೇಲೆಯೇ ಪ್ರಮುಖವಾಗಿ ಆಕ್ಷೇಪಣೆಗಳು ಕೇಳಿಬರುತ್ತವೆ. ಮೃತರ ಹೆಸರು ಪಟ್ಟಿಯಲ್ಲಿರುವುದು, ಒಂದಕ್ಕಿಂತ ಹೆಚ್ಚು ಕಡೆ ಹೆಸರಿರುವುದು ಹಾಗೂ ಅರ್ಹರ ಹೆಸರು ಕೈಬಿಟ್ಟು ಹೋಗಿರುವುದು ಇಂತಹ ದೂರುಗಳಿಗೆ ಕಾರಣವಾಗುತ್ತದೆ. ಮತದಾರರ ಪಟ್ಟಿ ಎಷ್ಟು ಶುದ್ಧವಾಗಿರುತ್ತದೋ, ಚುನಾವಣೆ ಅಷ್ಟು ಸುಲಭ ಮತ್ತು ಪಾರದರ್ಶಕವಾಗಿ ನಡೆಯುತ್ತದೆ ಎಂದರು.ಎಸ್‌ಐಆರ್ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳ ಸಹಭಾಗಿತ್ವ ಬಹಳ ಮುಖ್ಯ. ಅದಕ್ಕಾಗಿ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಬೂತ್ ಮಟ್ಟದ ಏಜೆಂಟರನ್ನು ನೇಮಿಸಲು ಅವಕಾಶ ನೀಡಲಾಗಿದ್ದು, ಅವರು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ ಎಂದರು.ಅರ್ಹ ಮತದಾರರನ್ನು ಗುರುತಿಸಲು ಮತ್ತು ಚುನಾವಣಾ ಪ್ರಕ್ರಿಯೆ ಸುಗಮಗೊಳಿಸಲು ತರಬೇತಿ ಕಾರ್ಯಕ್ರಮ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ನಮ್ಮ ಬಳಿ ಇರುವ 2002ರ ಎಸ್‌ಐಆರ್ ಮತದಾರರ ಪಟ್ಟಿಯನ್ನು ನಾವು ಅರ್ಹತೆ ಸಾಬೀತುಪಡಿಸುವ ಪ್ರೊಬೇಟಿವ್ ದಾಖಲೆಯಾಗಿ ಪರಿಗಣಿಸುವುದಾಗಿ ಹೇಳಿದರು.ಜಿಲ್ಲಾ ಚುನಾವಣಾಧಿಕಾರಿಗಳ ಸೂಚನೆಯಂತೆ, ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿ ವಿತರಿಸುವ ಇನ್ಯೂಮರೇಷನ್ ಫಾರಂಗಳನ್ನು ಭರ್ತಿ ಮಾಡಿ ಯಾರು ಮರಳಿ ನೀಡುತ್ತಾರೋ, ಅಂತಹವರ ಹೆಸರು ಮತದಾರರ ಪಟ್ಟಿಯಲ್ಲಿ ಮುಂದುವರಿ ಯಲಿವೆ. ಮತದಾರರು ಇನ್ಯೂಮರೇಷನ್ ಫಾರಂ ವಾಪಸ್ ನೀಡುವಾಗ ಯಾವುದೇ ಹೆಚ್ಚುವರಿ ದಾಖಲೆ ಕೊಡುವ ಅವಶ್ಯಕತೆ ಇರಲ್ಲ. ಏಕೆಂದರೆ ಈ ಮತದಾರರು ಈಗಾಗಲೇ 2002ರ ಎಸ್‌ಐಆರ್ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗಿರುತ್ತಾರೆ. ಬಿಎಲ್‌ಒಗಳು ನೀಡುವ ಫಾರಂಗಳು ಈಗಾಗಲೇ ಭಾಗಶಃ ಭರ್ತಿಯಾಗಿರುತ್ತವೆ. ಮತದಾರರು ಅದರಲ್ಲಿನ ವಿವರ ಪರಿಶೀಲಿಸಿ, ತಪ್ಪುಗಳಿದ್ದರೆ ಸರಿಪಡಿಸಿ, ಸಹಿ ಮಾಡಿ ಬಿಎಲ್‌ಒಗೆ ನೀಡಬೇಕು ಎಂದರು.ಬೀಗ ಹಾಕಿದ ಮನೆಗಳು ಅಥವಾ ಮೊದಲ ಭೇಟಿಯಲ್ಲಿ ಸಿಗದ ಮತದಾರರನ್ನು ತಲುಪಲು ಬಿಎಲ್‌ಒಗಳು ಕನಿಷ್ಠ 3 ಬಾರಿ ಭೇಟಿ ನೀಡಬೇಕು. ತಾವು ಭೇಟಿ ನೀಡಿದ ಕುರಿತು ಸೂಕ್ತ ದಾಖಲೆ, ಸಾಕ್ಷ್ಯವನ್ನು ಕಾಯ್ದುಕೊಳ್ಳುವುದು ಕಡ್ಡಾಯ. ಕರಡು ಪಟ್ಟಿ ಪ್ರಕಟದ ನಂತರ ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆ ಬಾರದಂತೆ ತಡೆಯಲು ಈ ಕ್ರಮ ಅಗತ್ಯ. ಕರಡು ಪಟ್ಟಿಯಲ್ಲಿರುವ ಯಾವುದೇ ಮತದಾರರ ಹೆಸರನ್ನು ಅಂತಿಮ ಪಟ್ಟಿಯಿಂದ ಯಾವುದೇ ಕಾರಣಕ್ಕೂ ನೇರವಾಗಿ ಕೈಬಿಡು ವಂತಿಲ್ಲ. ಅನ್-ಮ್ಯಾಪ್ಡ್ ಆದ ಅಥವಾ ವಿವರಗಳಲ್ಲಿ ವ್ಯತ್ಯಾಸವಿರುವ ಮತದಾರರಿಗೆ ಕಡ್ಡಾಯವಾಗಿ ನೋಟಿಸ್ ನೀಡಿ, ವಿಚಾರಣೆ ನಡೆಸಬೇಕು. ನಂತರ ಹೆಸರು ಉಳಿಸಬೇಕೇ ಅಥವಾ ಬೇಡವೇ ಎಂದು ಚುನಾವಣಾ ನೊಂದಣಾಧಿಕಾರಿಗಳು ನಿರ್ಧರಿಸಲಿದ್ದಾರೆ. ಒಂದು ವೇಳೆ ಅರ್ಹ ಮತದಾರರಾಗಿದ್ದೂ, ಇನ್ಯೂಮರೇಷನ್ ಫಾರಂ ಮರಳಿ ನೀಡದಿದ್ದರೆ ಅಂತಹವರ ಹೆಸರು ಕರಡು ಪಟ್ಟಿ ಮತ್ತು ಅಂತಿಮ ಪಟ್ಟಿಯಿಂದ ಕೈತಪ್ಪಿ ಹೋಗುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ ’ಫಾರಂ-6’ ರ ಮೂಲಕ, ಆಯೋಗದ ಡಿಕ್ಲರೇಷನ್ ಹಾಗೂ ನಿಗದಿತ 12 ದಾಖಲೆಗಳ ಪೈಕಿ ಸೂಕ್ತ ಪುರಾವೆ ನೀಡಿ ಮತ್ತೆ ಹೆಸರು ಸೇರಿಸಲು ಅವಕಾಶವಿದೆ ಎಂದರು.ತರಬೇತಿ ಕಾರ್ಯಾಗಾರದಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ, ಉಪವಿಭಾಗಾಧಿಕಾರಿ ನಟೇಶ್, ಡಿವೈಎಸ್‌ಪಿ ನಾಗರಾಜ್, ಎಲ್ಲ ತಾಲೂಕುಗಳ ತಹಸೀಲ್ದಾರರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

-ಬಾಕ್ಸ್‌--

ಮ್ಯಾಪಿಂಗ್ ಪೂರ್ಣಕ್ಕೆ ನೋಡಲ್‌ ಅಧಿಕಾರಿ


ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಸ್‌ಐಆರ್ (ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ) ಪ್ರಕ್ರಿಯೆ ಮ್ಯಾಪಿಂಗ್‌ ತೀರಾ ಹಿಂದುಳಿದ ಹಿನ್ನೆಲೆಯಲ್ಲಿ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಚಿಕ್ಕಮಗಳೂರಿನಲ್ಲಿ ಕೆಳೆದ ನಾಲ್ಕೈದು ತಿಂಗಳಿನಿಂದ ಎಸ್‌ಐಆರ್‌ ಮ್ಯಾಪಿಂಗ್‌ ಮಾಡಲಾಗುತ್ತಿದೆ. ಜೂನ್‌ 20 ರಿಂದ ಮತ ದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಆರಂಭಗೊಳ್ಳಲಿದೆ. ಆದರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಮ್ಯಾಪಿಂಗ್‌ ಕಾರ್ಯ ನಿಗದಿತ ಗುರಿ ತಲುಪಿಲ್ಲ. ಈ ವರೆಗೆ ಶೇ.90 ರಷ್ಟು ಮ್ಯಾಪಿಂಗ್‌ ಕಾರ್ಯ ಪೂರ್ಣಗೊಂಡಿಲ್ಲ. ಅದರಲ್ಲೂ ಚಿಕ್ಕಮಗಳೂರು ನಗರ ಪ್ರದೇಶದಲ್ಲಿ ಶೇ.75 ರಷ್ಟು ಮಾತ್ರ ಮ್ಯಾಪಿಂಗ್‌ ಆಗಿದ್ದು ಶೇ.25 ರಷ್ಟು ಕಾರ್ಯ ಬಾಕಿ ಇದೆ.

ಈ ಹಿನ್ನೆಲೆಯಲ್ಲಿ ಮ್ಯಾಪಿಂಗ್‌ ಕಾರ್ಯ ತ್ವರಿತಗೊಳಿಸಲು ತಲಾ 7 ಬೂತ್‌ ಮಟ್ಟದ ಅಧಿಕಾರಿಗಳಿಗೆ ಒಬ್ಬರಂತೆ ಹಿರಿಯ ಅಧಿಕಾರಿಗಳನ್ನು ನೋಡಲ್‌ ಅಧಿಕಾರಿಗಳಾಗಿ ಆಯಾ ತಾಲೂಕು ಮಟ್ಟದ ಅಧಿಕಾರಿಗಳನ್ನು ನಿಯೋಜಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಈ ನೋಡಲ್‌ ಅಧಿಕಾರಿಗಳು, ಪ್ರತಿ ದಿನ ಬಿಎಲ್‌ಒ ಮತ್ತು ಬಿಎಲ್‌ಒಗಳ ಪರಿಶೀಲನೆಗೆ ನೇಮಿಸಲಾದ ಮೇಲ್ವಿಚಾರಕ ರೊಂದಿಗೆ ಸಮನ್ವ ಸಾಧಿಸುವುದು. ಜತೆಗೆ, ಎಸ್‌ಐಆರ್‌ ಮ್ಯಾಪಿಂಗ್‌ ಕುರಿತು ಎದುರಾಗುವ ಸಮಸ್ಯೆಗೆ ತ್ವರಿತ ಪರಿಹಾರ ಕೈಗೊಳ್ಳುವುದಾಗಿದೆ. ಪ್ರಗತಿ ಪರಿಶೀಲನೆ ನಡೆಸುವ ಕಾರ್ಯ ಮಾಡಬೇಕಾಗಿದೆ.

ನೋಡಲ್‌ ಅಧಿಕಾರಿಗಳಿಗೆ ತರಬೇತಿ

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನೋಡಲ್‌ ಅಧಿಕಾರಿಗಳಿಗೆ ಶನಿವಾರ ಚುನಾವಣಾಧಿಕಾರಿ ಗೌರವ್‌ ಕುಮಾರ್‌ ಶೆಟ್ಟಿ ನೇತೃತ್ವದಲ್ಲಿ ತರಬೇತಿ ನೀಡಲಾಯಿತು. ತರಬೇತಿ ವೇಳೆ ನೋಡಲ್‌ ಅಧಿಕಾರಿಗಳಿಗೆ ಕಾರ್ಯವಿಧಾನದ ಬಗ್ಗೆ ಮಾರ್ಗದರ್ಶನ, ಸಲಹೆ ಸೂಚನೆ ನೀಡಲಾಯಿತು.

ಬಿಎಲ್‌ಒಗಳಿಂದ ಬೇಕು ಸ್ಮಾರ್ಟ್‌ ವರ್ಕ್‌

ಬಿಎಲ್‌ಒಗಳಾಗಿ ಹಲವು ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವವರಿಗೆ ಹೆಚ್ಚಿನ ಸಮಸ್ಯೆ ಇಲ್ಲ. ಹೊಸ ಬಿಎಲ್‌ಒಗಳಿಗೆ ಸ್ವಲ್ಪ ಸಮಸ್ಯೆ ಉಂಟಾಗಲಿದೆ. ಹೊಸ ಬಿಎಲ್‌ಒಗಳು ಸ್ಥಳ ಜನಪ್ರತಿನಿಧಿ, ವಿವಿಧ ರಾಜಕೀಯ ಪಕ್ಷಗಳಿಂದ ಮ್ಯಾಪಿಂಗ್‌ ಕಾರ್ಯಕ್ಕೆ ನಿಯೋಜನೆಯಾದ ಬಿಎಲ್‌ಎಗಳ ಸಹಾಯ ಪಡೆದುಯುವುದರಿಂದ ತ್ವರಿತವಾಗಿ ಮ್ಯಾಪಿಂಗ್‌ ಪೂರ್ಣಗೊಳಿಸ ಬಹುದಾಗಿದೆ.

ಉಳಿದಂತೆ 2002 ಹಾಗೂ 2025ರ ಮತದಾರರ ಪಟ್ಟಿ ಮತಗಟ್ಟೆವಾರು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಮೊಬೈಲ್‌ಗಳಲ್ಲೂ ಪರಿಶೀಲನೆ ಮಾಡಬಹುದಾಗಿದೆ. ಮ್ಯಾಪಿಂಗ್‌ ಬಾಕಿ ಇರುವವರ ಹೆಸರು, ಜನ್ಮ ದಿನಾಂಕ ಹಾಗೂ ಕುಟುಂಬ ಸದಸ್ಯರ ಹೆಸರಿನ ಮೂಲಕ ಪರಿಶೀಲಿಸಿ ಮ್ಯಾಪಿಂಗ್‌ ಮಾಡಬಹುದಾಗಿದೆ ಎಂದು ಎಸ್‌ಐಆರ್‌ ಸಂಪನ್ಮೂಲ ವ್ಯಕ್ತಿ ಕಾಂತರಾಜ್‌ ವಿವರಿಸಿದರು.

ಬಿಎಲ್‌ಒಗಳು ಮನೆ ಮನೆ ಭೇಟಿ ನೀಡಿ ಪರಿಶೀಲಿಸಿದರೆ ಮ್ಯಾಪಿಂಗ್‌ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳ್ಳಿದೆ. ಸ್ಥಳೀಯ ರಿಂದ ಮಾಹಿತಿ ಸಂಗ್ರಹಿಸದಿದ್ದರೆ ಮ್ಯಾಪಿಂಗ್‌ ಪೂರ್ಣಗೊಳ್ಳುವುದಿಲ್ಲ ಎಂದು ಈ ವೇಳೆ ತಿಳಿಸಿದರು.-- ಬಾಕ್ಸ್‌ --

ನೆರೆಯ ಜಿಲ್ಲೆಯಲ್ಲಿ ಶೇ.95 ರಷ್ಟು ಮ್ಯಾಪಿಂಗ್‌

ಕೊಡಗು, ಶಿವಮೊಗ್ಗ ಹಾಸನ ಸೇರಿದಂತೆ ನೆರೆಯ ಜಿಲ್ಲೆಗಳಲ್ಲಿ ಈಗಾಗಲೇ ಶೇ.95 ರಷ್ಟು ಮ್ಯಾಪಿಂಗ್‌ ಕಾರ್ಯ ಪೂರ್ಣ ಗೊಳಿಸಲಾಗಿದೆ. ಆದರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾತ್ರ ಮ್ಯಾಪಿಂಗ್‌ ಕಾರ್ಯ ನಿಗದಿತ ಪ್ರಮಾಣದಲ್ಲಿ ಆಗಿಲ್ಲ ಏಕೆ ಎಂದು ಮೇಲಾಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ.

ಚಿಕ್ಕಮಗಳೂರಿನಂತೆಯೇ ಶಿವಮೊಗ್ಗ, ಹಾಸನ, ಕೊಡಗು ಜಿಲ್ಲೆಗಳಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಮ್ಯಾಪಿಂಗ್ ಆಗಿದೆ. ಚಿಕ್ಕಮಗಳೂರಿನಲ್ಲಿ ಏಕೆ ಆಗಿಲ್ಲ.?. ಚಿಕ್ಕಮಗಳೂರಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ತೀರಾ ಕಡಿಮೆ ಪ್ರಮಾಣದ ಮ್ಯಾಪಿಂಗ್‌ ಆಗಿದೆ ಎಂದು ಅಸಮಧಾನ ವ್ಯಕ್ತಪಡಿಸಲಾಗುತ್ತಿದೆ. ಮುಂದಿನ 10- 15 ದಿನದಲ್ಲಿ ಮ್ಯಾಪಿಂಗ್‌ ಪ್ರಕ್ರಿಯೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಅಧಿಕಾರಿಗಳಿಗೆ ತಾಕೀತು ಮಾಡಲಾಯಿತು.

-- ಕೋಟ್‌ --

ನೋಡಲ್‌ ಅಧಿಕಾರಿಗಳು ಪ್ರತಿದಿನ ಬಿಎಲ್‌ಒಗಳೊಂದಿಗೆ ಗೂಗಲ್‌ ಸಭೆ ಮಾಡಿ ಪ್ರಗತಿ ಪರಿಶೀಲನೆ ನಡೆಸಿ ವರದಿ ಸಲ್ಲಿಸ ಬೇಕು. ಬಿಎಲ್‌ಒಗಳಿಗೆ ಎದುರಾಗುವ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಬೇಕು. ಮ್ಯಾಪಿಂಗ್‌ ಕಾರ್ಯ ಪೂರ್ಣ ಗೊಳಿದಲು ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ನಗರ ಸಭೆ ಸಹಕಾರ ನೀಡಲಿದೆ.

- ಬಸವರಾಜ್‌, ಆಯುಕ್ತರು, ನಗರ ಸಭೆ ಚಿಕ್ಕಮಗಳೂರು

-- ಬಾಕ್ಸ್‌--

ಜಿಲ್ಲೆಯ ಎಸ್‌ಐಆರ್‌ ಮ್ಯಾಪಿಂಗ್‌ ವಿವರ ( ಜೂ.1ರ ಮಾಹಿತಿ)ವಿಧಾನಸಭಾ ಕ್ಷೇತ್ರ ಹಾಲಿ ಮತದಾರರು ಪೂರ್ಣಗೊಂಡ ಮ್ಯಾಪಿಂಗ್‌ ಶೇಕಡವಾರು

ಶೃಂಗೇರಿ 1,68,458 1,56,40193.24ಮೂಡಿಗೆರೆ 1,69,892 1,52,82890.42ಚಿಕ್ಕಮಗಳೂರು 2,29,881 1,81,42779.24ತರೀಕೆರೆ 1,94,338 1,78,57792.42ಕಡೂರು 2,08,890 1,87,56489.94ಒಟ್ಟು 9,71,459 8,56,79788.56

ಫೋಟೋ

ಚಿಕ್ಕಮಗಳೂರಿನ ನಗರ ಸಭೆಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಎಸ್‌ಐಆರ್‌ ಪೂರ್ವ ಸಿದ್ದತೆ ಕುರಿತು ಸೋಮವಾರ ಸಭೆ ನಡೆಸಿದರು. ಈ ವೇಳೆ ಜಿಪಂ ಸಿಇಒ ಕೀರ್ತನಾ ಮೊದಲಾದವರಿದ್ದರು.ಫೋಟೋ

ನಗರ ಸಭೆಯಲ್ಲಿ ಎಸ್‌ಐಆರ್‌ ಮ್ಯಾಪಿಂಗ್‌ ಕುರಿತು ನೋಡಲ್‌ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು.