ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ: ರಾಜಾ ವೆಂಕಟಪ್ಪ ನಾಯಕ

| Published : Jan 27 2024, 01:20 AM IST

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ: ರಾಜಾ ವೆಂಕಟಪ್ಪ ನಾಯಕ
Share this Article
  • FB
  • TW
  • Linkdin
  • Email

ಸಾರಾಂಶ

ಸುರಪುರ ನಗರದ ಪ್ರಭು ಕಾಲೇಜಿನ ಆವರಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದಲ್ಲಿ ಪೊಲೀಸರಿಂದ ಗೌರವ ವಂದನೆಯನ್ನು ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಸುರಪುರ

ಅವಳಿ ತಾಲೂಕುಗಳ ಸುರಪುರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಕೆಲಸ ಮಾಡಿ ಉಳಿಸಿಕೊಳ್ಳುವೆ ಎಂದು ಉಗ್ರಾಣ ನಿಗಮ ಅಧ್ಯಕ್ಷ, ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.

ನಗರದ ಪ್ರಭು ಕಾಲೇಜಿನ ಆವರಣದಲ್ಲಿ ಶುಕ್ರವಾರ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ, ಸುರಪುರ ಮತ್ತು ಹುಣಸಗಿ ತಾಲೂಕು ಅಭಿವೃದ್ಧಿಯತ್ತ ಮುಖ ಮಾಡಿವೆ. ಜನರ ಉತ್ತಮ ಸಂಚಾರಕ್ಕಾಗಿ ರಸ್ತೆ, ಸಾರಿಗೆ ವ್ಯವಸ್ಥೆ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಮೂಲಸೌಲಭ್ಯ ಒದಗಿಸಿಕೊಡಲಾಗುತ್ತಿದೆ ಎಂದರು.

ಸ್ವಾತಂತ್ರ್ಯಕ್ಕೂ ಮೊದಲು ಭಾರತವು ಹಲವಾರು ಸಂಸ್ಥಾನಗಳಿಂದ ಕೂಡಿತ್ತು. ಸ್ವಾತಂತ್ರ್ಯ ನಂತರ ರಾಜತ್ವ ಹೋಗಿ ಪ್ರಜಾಪ್ರಭುತ್ವ ಆಗಮಿಸಿತು. ಪ್ರಜೆಗಳಿಂದ ಜನಪ್ರತಿನಿಧಿಗಳು ಆಯ್ಕೆಯಾಗಿ ಆಡಳಿತ ನಡೆಸುವಂತಾಗಿದೆ. ದೊಡ್ಡ ದೇಶ ನಡೆಸಲು ಕಾನೂನು ಅಗತ್ಯವಾಗಿದ್ದನ್ನು ಮನಗಂಡು ಪ್ರಪಂಚದ ಎಲ್ಲ ದೇಶದ ಕಾನೂನು ಅಧ್ಯಯನ ಮಾಡಿ ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ಬೃಹತ್ ಸಂವಿಧಾನವನ್ನು ಜ.26, 1950ರಂದು ಜಾರಿ ಮಾಡಲಾಯಿತು. ಅದರ ನೆನಪಿಗಾಗಿ ಗಣರಾಜ್ಯೋತ್ಸವ ಆಚರಿಸುತ್ತೇವೆ. ಕಾನೂನಡಿಯಲ್ಲಿ ಜೀವನ ಸಾಗಿಸಬೇಕು ಎಂದು ಹೇಳಿದರು.

ತಹಸೀಲ್ದಾರ್ ವಿಜಯಕುಮಾರ, ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರು ಮಾತನಾಡಿದರು. ಪೊಲೀಸ್, ಗೃಹರಕ್ಷಕ ದಳ, ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಪ್ರಭಾತ್‌ ಫೇರಿ ನಡೆಯಿತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

ತಾಪಂ ಅಧಿಕಾರಿ ಬಸವರಾಜ ಸಜ್ಜನ್, ಪೌರಾಯುಕ್ತ ಜೀವನ ಕಟ್ಟಿಮನಿ, ಪ್ರಾಂಶುಪಾಲ ವಾರೀಸ್ ಕುಂಡಾಲೆ, ಸಮಾಜ ಕಲ್ಯಾಣಾಧಿಕಾರಿ ಮೊಹ್ಮದ್‌ ಸಲೀಂ, ಡಾ. ಶೃತಿ, ಬಿಆರ್‌ಸಿ ಪಂಡಿತ ನಿಂಬೂರ, ಕಾಂಗ್ರೆಸ್ ಮಹಿಳಾ ತಾಲೂಕು ಅಧ್ಯಕ್ಷೆ ಸುವರ್ಣ ಎಲಿಗಾರ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ್ ಬಾಚಿಮಟ್ಟಿ, ಬಿಸಿಎಂ ಸಹಾಯಕ ವಿಸ್ತಿರಣಾಧಿಕಾರಿ ತಿಪ್ಪಾರಡ್ಡಿ, ಸಿಪಿಐಗಳಾದ ಆನಂದ ವಾಗ್ಮೋಡೆ, ಸಚಿನ್ ಚಲುವಾದಿ, ಗೃಹರಕ್ಷಕ ಕಮಾಡೆಂಟ್ ಯಲ್ಲಪ್ಪ ಹುಲಿಕಲ್ ಸೇರಿದಂತೆ ಇತರರಿದ್ದರು.