5 ಕೋಟಿ ವೆಚ್ಚದಲ್ಲಿ ಭಾಗ್ಯನಗರ -ಕೊಪ್ಪಳ -ಕಿನ್ನಾಳ ರಸ್ತೆ ಹಾಗೂ ₹1.78 ಕೋಟಿ ವೆಚ್ಚದಲ್ಲಿ ಕೊಪ್ಪಳ ಅಭಿವೃದ್ಧಿ ಪ್ರಾಧಿಕಾರದಡಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅಡಿಗಲ್ಲು ನೆರವೇರಿಸಿದರು.

ಕೊಪ್ಪಳ: ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.

₹5 ಕೋಟಿ ವೆಚ್ಚದಲ್ಲಿ ಭಾಗ್ಯನಗರ -ಕೊಪ್ಪಳ -ಕಿನ್ನಾಳ ರಸ್ತೆ ಹಾಗೂ ₹1.78 ಕೋಟಿ ವೆಚ್ಚದಲ್ಲಿ ಪ್ರಾಧಿಕಾರದಡಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದ್ದು, ನಗರ ಹಾಗೂ ಗ್ರಾಮೀಣ ಭಾಗದ ರಸ್ತೆಗಳ ಸುಧಾರಣೆಗೆ ಅಗತ್ಯ ಕ್ರಮ ವಹಿಸಿದ್ದೇವೆ. ವಿಶೇಷವಾಗಿ ರಸ್ತೆಗಳ ಅಭಿವೃದ್ಧಿಯತ್ತ ಹೆಚ್ಚು ಗಮನ ಹರಿಸಿದ್ದು, ರಸ್ತೆಗಳ ಅಭಿವೃದ್ಧಿಗೆ ಅನುದಾನ ತರುವ ಕೆಲಸ ಮಾಡುತ್ತಿದ್ದೇವೆ. ಕೊಪ್ಪಳ ಭಾಗ್ಯನಗರ -ಕಿನ್ನಾಳ ರಸ್ತೆ ನಿರ್ಮಾಣದಿಂದ ಸುಗಮ ಸಂಚಾರಕ್ಕೆ ಅನುಕೂಲ ಆಗಲಿದೆ. ಗುಣಮಟ್ಟವಾಗಿ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ ಎಂದು ಹೇಳಿದರು.

ಕೊಪ್ಪಳ ಕಿನ್ನಾಳ ರಸ್ತೆಗೆ ಅನುದಾನ: ಕೊಪ್ಪಳ ನಗರದ ಐಬಿ ಹತ್ತಿರ ಬರುವ ಅಂಡರ್‌ಪಾಸ್‌ನಿಂದ ಭಾಗ್ಯನಗರ -ಕಿನ್ನಾಳ ಕ್ರಾಸ್ ವರೆಗಿನ ಎರಡು ಬದಿ ರಸ್ತೆ ನಿರ್ಮಾಣ ಹಾಗೂ ಬೀದಿ ದೀಪಗಳ ಅಳವಡಿಕೆ ಕಾಮಗಾರಿಗೆ ₹5 ಕೋಟಿ ಅನುದಾನ ಮಂಜೂರು ಆಗಿದ್ದು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭ ಮಾಡಲಾಗುವುದು ಎಂದರು.

ಕೊಪ್ಪಳ ಕುಷ್ಟಗಿ ರಸ್ತೆ ರೈಲ್ವೆ ಮೇಲ್ಸೇತುವೆಯಿಂದ ಟಣಕನಕಲ್ ರಸ್ತೆಗೆ ಕೂಡ ಅನುದಾನ ಮಂಜೂರು ಮಾಡಿಸುವ ಕೆಲಸ ಮಾಡುತ್ತಿದ್ದೇವೆ. ಶೀಘ್ರದಲ್ಲಿ ಈ ರಸ್ತೆಯ ಅಭಿವೃದ್ಧಿ ಕಾಮಗಾರಿ ಕೂಡ ಪ್ರಾರಂಭ ಮಾಡುತ್ತೇವೆ ಎಂದರು.

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ನಗರ ಹಾಗೂ ಭಾಗ್ಯನಗರ ವ್ಯಾಪ್ತಿಯಲ್ಲಿ ₹1.78 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿ ಸಹ ಕೈಗೊಳ್ಳಲಾಗುತ್ತಿದೆ. ನಗರದ ಸೌಂದರ್ಯೀಕರಣ ಮತ್ತು ಮೂಲಸೌಕರ್ಯ ವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಉದ್ಯಾನ ಅಭಿವೃದ್ಧಿ ಹಾಗೂ ಬೀದಿ ದೀಪಗಳ ಅಳವಡಿಕೆಗೆ ಆದ್ಯತೆ ನೀಡಲಾಗಿದೆ ಎಂದರು.

ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ನಗಾರಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ್, ಭಾಗ್ಯನಗರ ಪಪಂ ಅಧ್ಯಕ್ಷ ರಮೇಶ ಹ್ಯಾಟಿ, ಮಾಜಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ್ ಗುಪ್ತಾ, ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಕಾಟನ್ ಪಾಷಾ, ಪಪಂ ಉಪಾಧ್ಯಕ್ಷ ಹೊನ್ನೂರ್ ಸಾಬ್, ಗವಿಸಿದ್ದಪ್ಪ ಕರಡಿ, ಗೂಳಪ್ಪ ಹಲಿಗೇರಿ, ರಾಜಶೇಖರ್ ಅಡೂರ್, ಯಮನೂರಪ್ಪ ಕಬ್ಬೇರ, ದಾನಪ್ಪ ಕವಲೂರು, ಕತೀಬ್ ಬಾಷು, ಅಜ್ಜಪ್ಪ ಕೊಪ್ಪಳ, ಮುತ್ತುರಾಜ್ ಕುಷ್ಟಗಿ, ಮಾರ್ಕಂಡಪ್ಪ ಕಲ್ಲನ್ನವರ್, ಸರಸ್ವತಿ ಇಟ್ಟಂಗಿ, ಕಾಳಮ್ಮ ಚಂದನಕಟ್ಟಿ, ಮಾನ್ವಿ ಪಾಷಾ, ವಕ್ತಾರ ರವಿ ಕುರುಗೋಡ್, ಮಲ್ಲು ಪೂಜಾರ ಇತರರಿದ್ದರು.