ರೋಟರ‍್ಯಾಕ್ಟ್‌ ಜಿಲ್ಲೆ 3181 ನ ಜಿಲ್ಲಾ ಪ್ರತಿನಿಧಿಯಾಗಿ ಕೊಡಗು ಮೂಲದ ಶ್ರೀರಕ್ಷಾ ಮೈಸೂರಿನಲ್ಲಿ ಆಯೋಜಿತ ಸಮಾರಂಭದಲ್ಲಿ ತನ್ನ ತಂಡದೊಂದಿಗೆ ಪದಗ್ರಹಣ ಸ್ವೀಕರಿಸಿದರು.

ಮಡಿಕೇರಿ: ರೋಟರ‍್ಯಾಕ್ಟ್‌ ಜಿಲ್ಲೆ 3181 ನ ಜಿಲ್ಲಾ ಪ್ರತಿನಿಧಿಯಾಗಿ ಕೊಡಗು ಮೂಲದ ಶ್ರೀರಕ್ಷಾ ಮೈಸೂರಿನಲ್ಲಿ ಆಯೋಜಿತ ಸಮಾರಂಭದಲ್ಲಿ ತನ್ನ ತಂಡದೊಂದಿಗೆ ಪದಗ್ರಹಣ ಸ್ವೀಕರಿಸಿದರು.

ಮೈಸೂರಿನ ಶ್ರೀ ಕಂಠೀರವ ನರಸಿಂಹರಾಜ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಆಯೋಜಿತ ಸಮಾರಂಭದಲ್ಲಿ ರೋಟರ‍್ಯಾಕ್ಟ್‌ಗೆ ಸೇರಿದ 56 ಸಂಸ್ಥೆಗಳಿಗೆ ಜಿಲ್ಲಾ ಪ್ರತಿನಿಧಿಯಾಗಿ ನೇಮಕಗೊಂಡ ಶ್ರೀರಕ್ಷಾ ಮತ್ತು ಕಾರ್ಯದರ್ಶಿಯಾಗಿ ನೇಮಕಗೊಂಡ ಮೂಕಳೇರ ತುಳಸಿ ತಂಗಮ್ಮ ಅವರಿಗೆ ರೋಟರಿ ಗವರ್ನರ್‌ ಸತೀಶ್ ಬೋಳಾರ್ ಪದಗ್ರಹಣ ನೀಡಿದರು.ನಾಪೋಕ್ಲಿನ ಹಿರಿಯ ಪತ್ರಕರ್ತ ಪ್ರಭಾಕರ್ ಮತ್ತು ಅಶ್ವಿನಿ ದಂಪತಿ ಪುತ್ರಿಯಾದ ಶ್ರೀರಕ್ಷಾ ಅಧಿಕಾರ ಸ್ವೀಕರಿಸಿ ಮಾತನಾಡಿ, ಮಾಜಿ ಸೈನಿಕರಿಗೆ ನೆರವು, ಪರಿಸರ ಸಂರಕ್ಷಣೆಗಾಗಿ ಮ್ಯಾರಾಥಾನ್, ಆರ್ಥಿಕ ನಿಧಿ ಸಂಗ್ರಹ, ಕನ್ನಡ ನಾಡು ನುಡಿಗಾಗಿ ಕಾರ್ಯಕ್ರಮಗಳೂ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸುವುದಾಗಿಯೂ ನುಡಿದರು. ರೋಟರಿ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್ ಮಾತನಾಡಿ, ಯುವಪೀಳಿಗೆಯವರು ಸಾಮಾಜಿಕ ಕಳಕಳಿಯೊಂದಿಗೆ ಸೇವಾ ಗುಣ ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು. ನಿಯೋಜಿತ ರೋಟರಿ ಜಿಲ್ಲಾ ಗವರ್ನರ್ ಯಶಸ್ವಿ ಸೋಮಶೇಖರ್ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಪಾಠವನ್ನು ಕಲಿಸಿದರೆ ರೋಟರಿಯಂಥ ಸೇವಾ ಸಂಸ್ಥೆಗಳು ಜೀವನ ಮೌಲ್ಯವನ್ನು ಕಲಿಸುತ್ತವೆ ಎಂದರು.ಮಾಜಿ ಗವರ್ನರ್‌ ಹೆಚ್.ಆರ್.ಕೇಶವ್ ಮಾತನಾಡಿ, ತಲಕಾವೇರಿಯಲ್ಲಿ ಉಗಮಿಸುವ ಕಾವೇರಿ ನದಿಯು ತನ್ನ ದಿಕ್ಕನ್ನು ಬದಿಲಿಸಿದ್ದರೆ ಬಹಳ ಹತ್ತಿರದಲ್ಲಿಯೇ ಕೇರಳದ ಸಮುದ್ರ ಸೇರಲು ಸಾಧ್ಯವಿತ್ತು, ಆದರೆ ಕಾವೇರಿ ನದಿಯು, ಜನರಿಗೆ ಪ್ರಯೋಜನಕಾರಿಯಾಗಬೇಕೆಂದೇ 720 ಕಿ.ಮೀ. ಕ್ರಮಿಸಿ ಎಲ್ಲರಿಗೂ ನೀರು ನೀಡಿ ತನ್ನ ಜೀವನ ಸಾರ್ಥಕಗೊಳಿಸಿದ್ದಾಳೆ. ಕಾವೇರಿಯ ಈ ನಡೆ ಎಲ್ಲರಿಗೂ ಸೇವಾ ಕಾರ್ಯಕ್ಕೆ ಮಾದರಿಯಾಗಬೇಕೆಂದರು.ಚುನಾಯಿತ ರೋಟರಿ ಗವರ್ನರ್ ಡಾ.ಸೂರ್ಯನಾರಾಯಣ ಕೊಕ್ಕಾಡಿ, ರೋಟರಿ ಜಿಲ್ಲಾ ಕಾಯದರ್ಶಿ ಗೋಪಾಲಕೃಷ್ಮ ಶೆಟ್ಟಿ, ರೋಟರಿ ಸಂಸ್ಥೆಗಳ ವಿಸ್ತರಣಾ ಸಮಿತಿ ಜಿಲ್ಲಾ ಅಧ್ಯಕ್ಷ ಅನಿಲ್ ಹೆಚ್.ಟಿ., ರೋಟರಿ ತರಬೇತುದಾರ ಡಾ.ಸಿ. ಆರ್.ಪ್ರಶಾಂತ್, ರೋಟರಿ ಮಡಿಕೇರಿ ವುಡ್ಸ್ ಸ್ಥಾಪಕಾಧ್ಯಕ್ಷ ಎಸ್.ಎಸ್. ಸಂಪತ್ ಕುಮಾರ್ ಹಾಜರಿದ್ದರು.