ಗ್ಯಾರಂಟಿ ಯೋಜನೆ ಜತೆ ಅಭಿವೃದ್ಧಿಗೂ ಆದ್ಯತೆ: ಶಾಸಕ ಯು.ಬಿ. ಬಣಕಾರ

| Published : Sep 08 2025, 01:01 AM IST

ಗ್ಯಾರಂಟಿ ಯೋಜನೆ ಜತೆ ಅಭಿವೃದ್ಧಿಗೂ ಆದ್ಯತೆ: ಶಾಸಕ ಯು.ಬಿ. ಬಣಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಜತೆ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ನೀಡಿದೆ. ವಿರೋಧ ಪಕ್ಷದವರ ಟೀಕೆಗೂ ಅಭಿವೃದ್ಧಿ ಮೂಲಕ ಸಮರ್ಪಕ ಉತ್ತರ ನೀಡುತ್ತಿದೆ.

ರಟ್ಟೀಹಳ್ಳಿ: ₹1 ಕೋಟಿ ವೆಚ್ಚದಲ್ಲಿ ರಟ್ಟೀಹಳ್ಳಿ- ಹಿರೇಕೆರೂರು ರಸ್ತೆಯಿಂದ ರಟ್ಟೀಹಳ್ಳಿ- ಶಿರಗಂಬಿ ಕೂಡು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಯು.ಬಿ. ಬಣಕಾರ ಭಾನುವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಜತೆ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ನೀಡಿದೆ. ವಿರೋಧ ಪಕ್ಷದವರ ಟೀಕೆಗೂ ಅಭಿವೃದ್ಧಿ ಮೂಲಕ ಸಮರ್ಪಕ ಉತ್ತರ ನೀಡುತ್ತಿದೆ ಎಂದರು.2024- 25ನೇ ಸಾಲಿನ ಮಳೆಹಾನಿಗೋಳಗಾದ ರಸ್ತೆಗಳ ಅಭಿವೃದ್ದಿಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ₹10 ಕೋಟಿ ಅನುದಾನ ನೀಡಿದ್ದು, ಅದರಲ್ಲಿ ಹಿರೇಕೆರೂರು- ರಟ್ಟೀಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 17 ಕಾಮಗಾರಿಗಳನ್ನು ಕೈಗೊಂಡಿದ್ದು, ಅದರಲ್ಲಿ ₹1 ಕೋಟಿ ವೆಚ್ಚದಲ್ಲಿ 900 ಮೀ. ಸಿಸಿ ರಸ್ತೆ ಹಾಗೂ 3 ಕಡೆ ಸಿಡಿ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಗುತ್ತಿಗೆದಾರರು ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕು ಎಂದರು.ಪ್ರಸ್ತುತ ವರ್ಷ ಮುಖ್ಯಮಂತ್ರಿಗಳು ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ₹50 ಕೋಟಿ ಹಣ ಅನುದಾನ ನೀಡಿದ್ದು, ಅದರಲ್ಲಿ ₹25 ಕೋಟಿ ಪಿಡಬ್ಲ್ಯುಡಿ ರಸ್ತೆ ಅಭಿವೃದ್ಧಿಗಾಗಿ ₹12.5 ಕೋಟಿ, ಗ್ರಾಮೀಣಾಭಿವೃದ್ಧಿ ಇಲಾಖೆಯ ರಸ್ತೆ ಅಭಿವೃದ್ಧಿಗೆ ₹10 ಕೋಟಿ, ಮುಜರಾಯಿ ಇಲಾಖೆಯ ದೇವಸ್ಥಾನಗಳಿಗೆ ₹1.75 ಕೋಟಿ, ಅಲ್ಪಸಂಖ್ಯಾತ ಇಲಾಖೆಗೆ ₹25 ಲಕ್ಷ ವೆಚ್ಚದಲ್ಲಿ ಮಾವಿನತೋಪಿ ಗ್ರಾಮದಲ್ಲಿ ಉಗ್ರಾಣ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ ಎಂದರು.ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣವಾಗಿದ್ದು, ಈಗಾಗಲೇ ಒಂದು ನೂತನ ವಾಹನ ನೀಡಿದ್ದು, ಉದ್ಘಾಟನೆ ಅಷ್ಟೆ ಬಾಕಿ ಇರುವ ಕಾರಣ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರನ್ನು ಭೇಟಿ ಮಾಡಿ ತಿಂಗಳ ಅಂತ್ಯದಲ್ಲಿ ಅವರಿಂದ ಲೋಕಾರ್ಪಣೆಗೊಳಿಸಲಾಗುವುದು ಎಂದರು.ಪಿ.ಡಿ. ಬಸನಗೌಡ್ರ, ಮಹೇಶ ಗುಬ್ಬಿ, ರವಿ ಮುದಿಯಪ್ಪನವರ, ಹನುಮಂತಗೌಡ ಭರಮಣ್ಣನವರ, ಬಾಬುಸಾಬ ಜಡದಿ, ಶಂಕರಗೌಡ ಚನ್ನಗೌಡ್ರ, ಸುಭಾಷ ಹದಡೇರ, ರವಿ ಹದಡೇರ ಸರ್ಫರಾಜ ಮಾಸೂರ, ಮಖಬೂಲ ಮುಲ್ಲಾ, ಜಾಕೀರ ಮುಲ್ಲಾ, ರುದ್ರಗೌಡ ಪಾಟೀಲ್, ವಿಜಯ ಅಂಗಡಿ, ಮಂಜು ಮಾಸೂರ, ಮಂಜು ಅಸ್ವಾಲಿ, ರಮೇಶ ಭೀಮಪ್ಪನವರ, ಮನೋಜ ಗೋಣೆಪ್ಪನವರ, ರಮೇಶ ಕಟ್ಟೆಕಾರ, ಪರಮೇಶಪ್ಪ ಕಟ್ಟೆಕಾರ, ಬೀರೇಶ ಕರಡೆಣ್ಣನವರ, ಅಬ್ಬಾಸ ಗೋಡಿಹಾಳ, ಮಂಜು ತಳವಾರ ಹಾಗೂ ಪಿಡಬ್ಲ್ಯುಡಿ ಎಂಜಿನಿಯರ್ ಮತ್ತು ಗುತ್ತಿಗೆದಾರ ಮುಂತಾದವರು ಇದ್ದರು.