೨೦೨೫-೨೬ ಪ್ರಸಕ್ತ ವರ್ಷ ಪುರಸಭೆ ಆಸ್ತಿಗಳಿಂದ ೧೯೯.೮೭ಲಕ್ಷ ಆದಾಯ ನೀರಿಕ್ಷಿಸಿದ್ದು, ೨೦೨೫ರ ಅಂತ್ಯಕ್ಕೆ ₹೧೦೬.೦೫ ತೆರಿಗೆ ವಸೂಲಿ ಮಾಡಲಾಗಿದೆ
ಕಾರಟಗಿ: ಮೂಲ ಸೌಲಭ್ಯಗಳಿಗೆ ಪ್ರಥಮ ಆದ್ಯತೆ ನೀಡುವ ಜತೆಗೆ ಪಟ್ಟಣದ ಸೌಂದರೀಕರಣಕ್ಕೆ ಒತ್ತು ನೀಡಿ,ಆಸ್ತಿ ತೆರಿಗೆ ಸೇರಿದಂತೆ ಇನ್ನಿತರ ತೆರಿಗೆ ವಸೂಲಿ ಮೂಲಕ ಆದಾಯ ನಿರೀಕ್ಷೆಯಲ್ಲಿ ೨೦೨೬೨೭ರ ಸಾಲಿನ ಆಯವ್ಯಯದಲ್ಲಿ ಒಟ್ಟು ₹೧೩,೦೮ ಲಕ್ಷ ಉಳಿತಾಯ ಬಜೆಟ್ ಪುರಸಭೆ ಮಂಡಿಸಿದೆ.
ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು ೨೦೨೬-೨೭ನೇ ಸಾಲಿನ ೧೦ನೇ ಬಜೆಟ್‌ನ್ನು ಮಂಡಿಸಿದ್ದು, ವಿವಿಧ ಮೂಲಗಳಿಂದ ಒಟ್ಟು ₹೨೧,೫೧ ಆದಾಯ ನಿರೀಕ್ಷಿಸಿ, ₹೨೧,೩೮ ಲಕ್ಷ ನಿರೀಕ್ಷಿತ ವೆಚ್ಚ ಮಾಡಿ ಒಟ್ಟು ₹೧೩.೦೮ ಲಕ್ಷ ಉಳಿತಾಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.೨೦೨೫-೨೬ ಪ್ರಸಕ್ತ ವರ್ಷ ಪುರಸಭೆ ಆಸ್ತಿಗಳಿಂದ ೧೯೯.೮೭ಲಕ್ಷ ಆದಾಯ ನೀರಿಕ್ಷಿಸಿದ್ದು, ೨೦೨೫ರ ಅಂತ್ಯಕ್ಕೆ ₹೧೦೬.೦೫ ತೆರಿಗೆ ವಸೂಲಿ ಮಾಡಲಾಗಿದೆ. ೨೦೨೬-೨೭ನೇ ಸಾಲಿನ ಆರ್ಥಿಕ ವರ್ಷದಲ್ಲಿ ₹೧೮೫.೧೦ ಲಕ್ಷ ಆಸ್ತಿ ತೆರಿಗೆ ಆದಾಯ ವಸೂಲಿ ನೀರಿಕ್ಷಿಸಲಾಗಿದೆ. ಪುರಸಭೆ ವ್ಯಾಪ್ತಿಯ ೧೨ ಮಳಿಗೆಗಳಿದ್ದು, ಅವುಗಳಿಂದ ೨೦೨೫-೨೬ಕ್ಕೆ ₹೨೫ ಲಕ್ಷ ನಿರೀಕ್ಷಿಸಿದ್ದು, ಡಿಸೆಂಬರ್ ೨೦೨೫ ಅಂತ್ಯಕ್ಕೆ ₹೧.೮೩ ಲಕ್ಷ ವಸೂಲಾಗಿದೆ. ೨೦೨೬-೨೭ ನೇ ಸಾಲಿನಲ್ಲಿ ಬಾಡಿಗೆ ಹಿಂದಿನ ಸಾಲುಗಳ ಬಾಕಿಯೊಂದಿಗೆ ಖಾಲಿ ಇರುವ ಮಳಿಗೆ ಮುಂಬರುವ ವರ್ಷದಲ್ಲಿ ಲೀಲಾವು ಮಾಡುವುದಾಗಿ ಪರಿಗಣಿಸಿ ಒಟ್ಟು ₹೨.೨೮ ಲಕ್ಷ ಬಾಡಿಗೆ ಆದಾಯ ಅಂದಾಜಿಸಲಾಗಿದೆ ಎಂದರು.
ಪುರಸಭೆಯ ಎಸ್.ಎಫ್.ಸಿ.ಮುಕ್ತನಿಧಿ, ಎಸ್.ಎಫ್.ಸಿ.ಕುಡಿವ ನೀರಿನ ಅನುದಾನ, ೧೬ನೇ ಹಣಕಾಸು ಆಯೋಗದ ಅನುದಾನ ಹಾಗೂ ಇತರೆ ಅನುದಾನಗಳಡಿ ಸುಮಾರು ₹೬೩೬ಲಕ್ಷ ಅನುದಾನವನ್ನು ನೀರಿಕ್ಷಿಸಲಾಗಿದೆ. ಬೀದಿ ದೀಪಗಳ ಅಳವಡಿಕೆಗಾಗಿ ₹೨೦೦ ಲಕ್ಷ ಹಣ ನಿಗಡಿಪಡಿಸಲಾಗಿದೆ. ರಸ್ತೆಗಳು, ಕಲ್ಲುಹಾಸುಗಳು ಪಾದಚಾರಿ ರಸ್ತೆಗಳು ಮತ್ತು ರಸ್ತೆ ಪಕ್ಕದ ಚರಂಡಿ ನಿರ್ಮಾಣ ಹಾಗೂ ೨೦೨೬-೨೭ ನೇ ಸಾಲಿನ ೧೬ನೇ ಹಣಕಾಸು ಅನುದಾನದಿಂದ ₹೧೦೧ಲಕ್ಷ ಹಣ ನಿಗದಿಪಡಿಸಲಾಗಿದೆ.ನೀರು ಸರಬರಾಜು ವ್ಯವಸ್ಥೆ ಉದ್ದೇಶಕ್ಕಾಗಿ ಕೊಳವೆ ಬಾವಿ ಕೊರೆಸಲು, ಪೈಪ್‌ಲೈನ್ ಸಂಪರ್ಕ ವ್ಯವಸ್ಥೆ, ಪಂಪ್ ಮೋಟಾರ್ ಅಳವಡಿಕೆಗೆ ₹೬೫ ಲಕ್ಷ ಹಣ ನಿಗದಿಪಡಿಸಿದ್ದು ಪಟ್ಟಣದ ಉದ್ಯಾನವನ ಅಭಿವೃದ್ಧಿಗಾಗಿ ₹೧೫ಲಕ್ಷ ಹಣ ನಿಗದಿಪಡಿಸಲಾಗಿದೆ. ೨೦೨೫-೨೬ ನೇ ಸಾಲಿನಲ್ಲಿ ಉದ್ದಿಮೆ ಪರವಾನಗಿಯಿಂದ ಡಿಸೆಂಬರ್ ಅಂತ್ಯಕ್ಕೆ ₹೭.೪೭ಲಕ್ಷ ಆದಾಯ ಸ್ವೀಕರಿಸಿದ್ದು ೨೦೨೬-೨೭ ನೇ ಸಾಲಿಗೆ ₹೯.೦೦ ಲಕ್ಷ ಆದಾಯ ನೀರಿಕ್ಷಿಸಲಾಗಿದೆ ಎಂದು ಅಧ್ಯಕ್ಷ ಮಂಜುನಾಥ ವಿವರಿಸಿದರು.
ಈ ವೇಳೆ ಮುಖ್ಯಾಧಿಕಾರಿ ಡಾ. ಸಾಬಣ್ಣ ಕಟ್ಟೇಕಾರ್,ಉಪಾಧ್ಯಕ್ಷೆ ಸುಜಾತಾ ಭಜಂತ್ರಿ, ಸ್ಥಾಯಿ ಸಮಿತಿ ಅಧ್ಯಕ್ಷ ದೊಡ್ಡಬಸವ ಬೂದಿ, ಮಾಜಿ ಅಧ್ಯಕ್ಷೆ ರೇಖಾ ಆನೆಹೊಸುರ, ಸದಸ್ಯರು ಇದ್ದರು.