ಸಾರಾಂಶ
ಕನ್ನಡಪ್ರಭ ವಾರ್ತೆ ಹಾರೋಹಳ್ಳಿ
ಮುಖ್ಯಮಂತ್ರಿಗಳ ವಿಶೇಷ ಅನುದಾನ ಹಾಗೂ ವಿವಿಧ ಅನುದಾನಗಳಲ್ಲಿ ತಾಲೂಕಿನ ಗ್ರಾಮೀಣ ಭಾಗದ ರಸ್ತೆ, ಕುಡಿಯುವ ನೀರು, ವಿದ್ಯುತ್ ದೀಪ ಸೇರಿದಂತೆ ಸರ್ಕಾರ ಎಲ್ಲಾ ರೀತಿಯ ಸೌಕರ್ಯ ಒದಗಿಸುತ್ತಿದ್ದು, ಗ್ರಾಮಗಳಲ್ಲಿ ಸಿಮೆಂಟ್ ರಸ್ತೆ ಹಾಗೂ ಡಾಂಬರಿ ಕಾರ್ಯ ಮುಖ್ಯವಾಗಿ ಸ್ಮಶಾನದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.ತಾಲೂಕಿನ ದ್ಯಾವಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈಗಾಗಲೇ ಆಯಾ ಗ್ರಾಮಗಳಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ತಮ್ಮ ಗಮನಕ್ಕೆ ಬಂದಿರುವ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಉಳಿದ ಕೆಲಸಗಳನ್ನು ಗಮನಕ್ಕೆ ತಂದರೆ ಅವುಗಳನ್ನು ಶೀಘ್ರವೇ ಮಾಡಲಾಗುವುದು ಎಂದರು.ಮುಖ್ಯಮಂತ್ರಿಗಳು 20 ಕೋಟಿ ವಿಶೇಷ ಅನುದಾನ ನೀಡಿದ್ದಾರೆ. ಕಾವೇರಿ ನೀರಾವರಿ ನಿಗಮದಿಂದ 7 ಕೋಟಿ ಹಾಗೂ ಈ ಹಿಂದೆ ಮಾಜಿ ಸಂಸದರಾಗಿದ್ದ ಅವರ ಅವಧಿಯಲ್ಲಿ ಬಿಡುಗಡೆ ಅನುದಾನ ಕೆ.ಆರ್.ಡಿ.ಎಲ್ ಯಿಂದ 1 ಕೋಟಿ ಹಾಗೂ ಹೆಚ್ಚುವರಿ 23 ಲಕ್ಷ ಹಣ ಮಂಜೂರಾಗಿದೆ. ಈ ಅನುದಾನದಲ್ಲಿ ದ್ಯಾವಸಂದ್ರ ಗ್ರಾಮ ಪಂಚಾಯಿತಿ ಒಂದಕ್ಕೆ 1 ಕೊಟಿ ರು. ಅನುದಾನದಲ್ಲಿ ವಿಶೇಷ ಆದ್ಯತೆ ಮೇರೆಗೆ ಮೂಲಭುತ ಸೌಕರ್ಯಕ್ಕೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.ಮರಸರಹಳ್ಳಿ ಅಂತರ್ಜಲ ಹೆಚ್ಚಿಸುವ ಮೂಲಕ, ಜೊತೆಗೆ ಕೆರೆಗಳಿಗೂ ಅನುಕೂಲವಾಗುವಂತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಅದರಲ್ಲಿ ಮರಸರಹಳ್ಳಿ ಬಳಿ 50 ಲಕ್ಷ ರು. ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಲಾಗುವುದು. ಜೊತೆಗೆ ಸ್ಮಾಶಾನ ಕೊರತೆಯಿರುವ ಕಡೆ ಹಾಗೂ ಅಭಿವೃದ್ಧಿಪಡಿಸುವ ಕಡೆ ಹೆಚ್ಚಿನ ಗಮನ ನೀಡಲಾಗುತ್ತಿದೆ ಎಂದರು.ಗೊಟ್ಟಿಗೆಹಳ್ಳಿ, ಐನೋರುದೊಡ್ಡಿ, ಕಾಡುಜಕ್ಕಸಂದ್ರ, ದ್ಯಾವಸಂದ್ರ, ಕಳ್ಳಿಭೀಮಸಂದ್ರ, ಬೆಣಚಕಲ್ದೊಡ್ಡಿ, ಕೋನಸಂದ್ರ, ರಾಂಪುರ, ಗುಂಡನಗೊಲ್ಲಹಳ್ಳಿ, ಹಲವು ಕಡೆ ನಮ್ಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು, ಮುಖಂಡರ ಸಮ್ಮುಖದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ ಎಂದರು.ಬಗರ್‌ಹುಕುಂನಲ್ಲಿ ಅನ್ಯಾಯವಾಗಲು ಬಿಡಲ್ಲ:ಕೆಲವು ದಶಕಗಳಿಂದ ಬಗರ್‌ಹುಕುಂ ಸಾಗುವಳಿ ಮಾಡಿಕೊಂಡು ಬಂದಿರುವ ಬಡ ರೈತರಿಗೆ ಸಾಗುವಳಿ ಚೀಟಿ ನೀಡಲು ಕ್ರಮ ಕೈಗೊಳ್ಳಲಾಗುವುದು, ಈ ಭಾಗದಲ್ಲಿ ಬಗರ್ಹುಕುಂ ಸಕ್ರಮೀಕರಣ ಸಮಿತಿಯಲ್ಲಿ ಎದ್ದಿರುವ ಗೊಂದಲಕ್ಕೆ ರೈತರಿಗೆ ಅನ್ಯಾಯವಾಗಲು ನಾನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹೇಳಿದರು.ಗಣಕೀಕರಣದಲ್ಲಿ ರೈತರ ಅರ್ಜಿಗಳು ಶೂನ್ಯ ಎಂದು ತೋರಿಸಲಾಗಿದೆ, ತಹಸೀಲ್ದಾರ್ ರವರು ಆನ್ ಲೈನ್ ನಲ್ಲಿ ಯಾವುದೇ ಅರ್ಜಿ ನೊಂದಾಯಿಸಿಲ್ಲದ ಕಾರಣ ಯಾರಿಗೂ ಸಆಗುವಳಿ ಚೀಟಿ ನೀಡಲು ಅವಕಾಶ ವಿಲ್ಲವೆಂದು ಹೇಳಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಇಕ್ಬಾಲ್ ಹುಸೇನ್ ಉತ್ತರಿಸಿದರು.ಮುಖಂಡರಾದ ಡಿ.ಎಸ್.ಭುಜಂಗಯ್ಯ, ದಯಾವಸಂದ್ರ ಮೂರ್ತಿ, ಬೊಮುಲ್ ಹರೀಶ್ ಕುಮಾರ್, ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್, ಕೆ.ಸೋಮಶೇಖರ್, ಬೆಣಚಕಲ್ದೊಡ್ಡಿ ರುದ್ರೇಶ್, ರಾಂಪುರ ನಾಗೇಶ್, ರುದ್ರಪ್ಪ, ಹಾಲಿನ ಡೇರಿ ಅಧ್ಯಕ್ಷ ಕೆಂಚಪ್ಪ, ಶಿವರಾಜು, ದೇವರಾಜು, ಬಸವರಾಜು, ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.------30ಕೆಆರ್ ಎಂಎನ್ 3.ಜೆಪಿಜಿಹಾರೋಹಳ್ಳಿ ತಾಲೂಕಿನ ದ್ಯಾವಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಇಕ್ಬಾಲ್ ಹುಸೇನ್ ಗುದ್ದಲಿ ಪೂಜೆ ನೆರವೇರಿಸಿದರು.-------