ಸಾರಾಂಶ
ಇದಕ್ಕೂ ಮೊದಲು ಶಾಸಕರು ಬಡಕನಕೊಪ್ಪಲು ಗ್ರಾಮ ಪರಿಮಿತಿಯಲ್ಲಿ ಕೈಗೊಂಡಿರುವ ರಸ್ತೆ ಮತ್ತು ಚರಂಡಿ ಕಾಮಗಾರಿ ಪರಿಶೀಲಿಸಿ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಕೆಲಸ ನಿರ್ವಹಣೆಯ ಸಂಬಂದ ಹಲವು ಸಲಹೆ ಮತ್ತು ಸೂಚನೆಗಳನ್ನು ನೀಡಿದರು.
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಸ್ತೆಗಳ ಗುಂಡಿ ಮುಚ್ಚುವುದರ ಜತೆಗೆ, ಅಗತ್ಯವಾಗಿರುವ ರಸ್ತೆಗಳನ್ನು ದುರಸ್ತಿಪಡಿಸಲು ಆದ್ಯತೆ ಮೇರೆಗೆ ಗಮನ ಹರಿಸಲಾಗುತ್ತದೆ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.ತಾಲೂಕಿನ ಬಡಕನಕೊಪ್ಪಲು, ದೊಡ್ಡಕೊಪ್ಪಲು ಮತ್ತು ಕಾರ್ಗಹಳ್ಳಿ ಕೊಪ್ಪಲು ಗ್ರಾಮಗಳಲ್ಲಿ 6.95 ಕೋಟಿ ರು. ಗಳ ವೆಚ್ಚದಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿ ನಂತರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಡಕನಕೊಪ್ಪಲು ಗ್ರಾಮ ಪರಿಮಿತಿಯಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಒಂದು ಕೋಟಿ ಹಾಗೂ ಕಾರ್ಗಹಳ್ಳಿ ಕೊಪ್ಪಲು ಮತ್ತು ದೊಡ್ಡಕೊಪ್ಪಲು ಗ್ರಾಮಗಳ ಪರಿಮಿತಿಯ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಒಂದು ಕೋಟಿ ಅನುದಾನ ನೀಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ಒದಗಿಸಿ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.ಇದಕ್ಕೂ ಮೊದಲು ಶಾಸಕರು ಬಡಕನಕೊಪ್ಪಲು ಗ್ರಾಮ ಪರಿಮಿತಿಯಲ್ಲಿ ಕೈಗೊಂಡಿರುವ ರಸ್ತೆ ಮತ್ತು ಚರಂಡಿ ಕಾಮಗಾರಿ ಪರಿಶೀಲಿಸಿ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಕೆಲಸ ನಿರ್ವಹಣೆಯ ಸಂಬಂದ ಹಲವು ಸಲಹೆ ಮತ್ತು ಸೂಚನೆಗಳನ್ನು ನೀಡಿದರು.
ಅಡಗೂರು ಗ್ರಾಪಂ ಅಧ್ಯಕ್ಷ ಈರೇಗೌಡ, ಹೊಸ ಅಗ್ರಹಾರ ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಪಿ. ಪ್ರಶಾಂತ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ.ಎಸ್. ಮಹದೇವ್, ಸದಸ್ಯ ಮಹದೇವನಾಯಕ, ತಾಲೂಕು ಕುರುಬರ ಸಂಘದ ನಿರ್ದೇಶಕ ಕೆ.ಎಚ್. ಬುಡೀಗೌಡ, ತಾಲೂಕು ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್, ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಡಿ.ಸಿ. ರವಿ, ಜಿ. ಸುರೇಂದ್ರಮೂರ್ತಿ, ತಾಪಂ ಇಒ ವಿ.ಪಿ. ಕುಲದೀಪ್, ಮುಖಂಡರಾದ ಶ್ರೀನಿವಾಸ್, ಜಾಣೇಗೌಡ, ಸಂಪತ್, ಸಾಕರಾಜು, ರಾಜು, ಜಲ ಸಂಪನ್ಮೂಲ ಇಲಾಖೆಯ ಎಂಜಿನಿಯರ್ ಗಳಾದ ಕುಶಕುಮಾರ್, ಆಯಾಜ್, ಕಿರಣ್, ವಿನುತ್, ರವಿಕುಮಾರ್ ಇದ್ದರು.