ಸಿದ್ದು ಸರ್ಕಾರದಲ್ಲಿ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ಆದ್ಯತೆ

| Published : Oct 26 2025, 02:00 AM IST

ಸಿದ್ದು ಸರ್ಕಾರದಲ್ಲಿ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ಆದ್ಯತೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಮತ್ತು ಬಿಜೆಪಿ ಸರ್ಕಾರ ಬಜೆಟ್ ನಲ್ಲಿ ಅಲ್ಪಸಂಖ್ಯಾತರ ಅನುದಾನವನ್ನು ಹಂತ ಹಂತವಾಗಿ ಕಡಿತಗೊಳಿಸುತ್ತಲೇ ಬಂದಿತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 850 ಕೋಟಿ ಇದ್ದ ಅನುದಾನವನ್ನು 4500 ಕೋಟಿ ರು.ಗಳಿಗೆ ಹೆಚ್ಚಿಸುವುದರ ಜೊತೆಗೆ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಗಳನ್ನು ಮತ್ತೆ ಜಾರಿಗೆ ತಂದು ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ಒತ್ತು ನೀಡಿದೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಖಾತೆ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.

ರಾಮನಗರ: ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಮತ್ತು ಬಿಜೆಪಿ ಸರ್ಕಾರ ಬಜೆಟ್ ನಲ್ಲಿ ಅಲ್ಪಸಂಖ್ಯಾತರ ಅನುದಾನವನ್ನು ಹಂತ ಹಂತವಾಗಿ ಕಡಿತಗೊಳಿಸುತ್ತಲೇ ಬಂದಿತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 850 ಕೋಟಿ ಇದ್ದ ಅನುದಾನವನ್ನು 4500 ಕೋಟಿ ರು.ಗಳಿಗೆ ಹೆಚ್ಚಿಸುವುದರ ಜೊತೆಗೆ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಗಳನ್ನು ಮತ್ತೆ ಜಾರಿಗೆ ತಂದು ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ಒತ್ತು ನೀಡಿದೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಖಾತೆ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.

ಬಿಡದಿ ಹೋಬಳಿ ಬನ್ನಿಕುಪ್ಪೆಯ ಜೆಯು ಗ್ರೂಪ್ ಆಫ್ ಇನ್ಸ್‌ಟಿಟ್ಯೂಶನ್ ಆವರಣದಲ್ಲಿ ಜಾಮಿಯಾ ಮಸೀದಿ ಮತ್ತು ಮುಸ್ಲಿಂ ಚಾರಿಟಬಲ್ ಫಂಡ್ ಟ್ರಸ್ಟ್ ನಿರ್ವಹಣೆಯ ಜೆಯು ಸಮೂಹ ಸಂಸ್ಥೆಗಳು ಆಯೋಜಿಸಿದ್ದ ದಾರುಲ್ ಖುರಾನ್ ಕ್ಯಾಂಪಸ್ ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 2013ರಲ್ಲಿ ಆಗಿನ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗೆ ಬಜೆಟ್‌ನಲ್ಲಿ 3,200 ಕೋಟಿ ಅನುದಾನ ಮೀಸಲಿಟ್ಟಿತ್ತು. ಆದರೆ, ನಂತರ ಬಂದ ಸರ್ಕಾರಗಳು ಅನುದಾನ ಕಡಿಮೆ ಮಾಡಿದವು. ಈಗ 4500 ಕೋಟಿ ಅನುದಾನದಲ್ಲಿ 2900 ಕೋಟಿ ರು.ಗಳನ್ನು ಅಲ್ಪಸಂಖ್ಯಾತ ಸಮುದಾಯಗಳ ಮಕ್ಕಳ ಶಿಕ್ಷಣಕ್ಕಾಗಿ ವಿನಿಯೋಗಿಸಲಾಗುತ್ತಿದೆ ಎಂದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 1ರಿಂದ 8ನೇ ತರಗತಿವರೆಗಿನ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ರದ್ದುಗೊಳಿಸಿತು. ಸಿದ್ದರಾಮಯ್ಯರವರು ಎರಡನೇ ಬಾರಿಗೆ ಮುಖ್ಯಮಂತ್ರಿ ಆದ ಮೇಲೆ ರಾಜ್ಯದಲ್ಲಿ ವಿದ್ಯಾರ್ಥಿ ವೇತನವನ್ನು ಜಾರಿಗೊಳಿಸಿದರು. ಸುಮಾರು 5 ಲಕ್ಷ ಮಕ್ಕಳು ಇದರ ಲಾಭ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

2013ಕ್ಕೂ ಮೊದಲು ಬಹಳಷ್ಟು ನಾಯಕರು ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿ ಹೋಗಿದ್ದಾರೆ. ಆದರೆ, ಸಿದ್ದರಾಮಯ್ಯ ಅವರಷ್ಟು ಅಲ್ಪಸಂಖ್ಯಾತರ ಬಗ್ಗೆ ಹೆಚ್ಚಾಗಿ ಆಲೋಚನೆ ಮಾಡಿದ ಮತ್ತೊಬ್ಬ ನಾಯಕ ಇಲ್ಲ. ಬಜೆಟ್ ನಲ್ಲಿ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗಾಗಿ ಕೇವಲ 410 ಕೋಟಿ ಮಾತ್ರ ಮೀಸಲಿಡಲಾಗಿತ್ತು. ಬೇರೆ ಯಾರೇ ಮುಖ್ಯಮಂತ್ರಿ ಆಗಿದ್ದರು ಇನ್ನೊಂದು 10 ಕೋಟಿ ಹೆಚ್ಚಳ ಮಾಡಿ 420 ಕೋಟಿ ಸೀಮಿತ ಮಾಡುತ್ತಿದ್ದರು.

ಅಲ್ಪಸಂಖ್ಯಾತ ಸಮುದಾಯದಲ್ಲಿ ಶಿಕ್ಷಣ ಪಡೆದವರ ಸಂಖ್ಯೆ ಕಡಿಮೆ. ಹಾಗಾಗಿ ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚಿನ ಅನುದಾನ ವಿನಿಯೋಗ ಮಾಡಲಾಗುತ್ತಿದೆ. ಈಗ ಎಂಬಿಬಿಎಸ್ ಸೀಟ್ ಪಡೆಯಲು ಬಡ ವಿದ್ಯಾರ್ಥಿಗಳಿಗೆ ಸಾಧ್ಯವೇ ಇಲ್ಲದಂತ ಪರಿಸ್ಥಿತಿ ಇದೆ. ಒಂದು ಎಂಬಿಬಿಎಸ್ ಸೀಟ್ ಪಡೆಯಲು 1 ಕೋಟಿ ಡೊನೇಷನ್ ಕೊಡಬೇಕಾಗುತ್ತದೆ. ಫ್ರೀ ಮೆಡಿಕಲ್ ಸೀಟ್‌ಗೆ ಕನಿಷ್ಠ ಶುಲ್ಕ 55 ಲಕ್ಷ ರು.ಗಳನ್ನು ಪಾವತಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಯಾವ ವಿದ್ಯಾರ್ಥಿಯೂ ವಂಚಿತರಾಗಬಾರದೆಂಬ ಕಾರಣದಿಂದ 50 ಸಾವಿರ ಇದ್ದ ಸ್ಕಾಲರ್ ಶಿಪ್ ಅನ್ನು 5 ಲಕ್ಷ ರುಪಾಯಿ ಹೆಚ್ಚಳ ಮಾಡಲಾಗಿದ್ದು, 1300 ಎಂಬಿಬಿಎಸ್ ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ವಿದೇಶದಲ್ಲಿ ವ್ಯಾಸಂಗಕ್ಕೆ ತೆರಳುವ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯೇ 30 ಲಕ್ಷ ಭರಿಸುತ್ತಿದೆ. ರಾಜ್ಯದಲ್ಲಿ 50 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಮಂಜೂರಾಗಿದ್ದು, ಒಂದು ಶಾಲೆಯನ್ನು 16 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಭಾರತದಲ್ಲಿಯೇ ಕರ್ನಾಟಕದಲ್ಲಿರುವ ಹಜ್ ಕ್ಯಾಂಪ್ ಮಾದರಿಯಾಗಿದೆ. ಅದಕ್ಕೆ ಸಿದ್ದರಾಮಯ್ಯರವರು 5 ಎಕರೆ ಜಾಗ ಮಂಜೂರು ಮಾಡಿದ್ದಲ್ಲದೆ, 120 ಕೋಟಿ ರು.ಅನುದಾನವನ್ನು ನೀಡಿದರು. ಆ ಹಜ್ ಕ್ಯಾಂಪ್ 1 ತಿಂಗಳು ಮಾತ್ರ ಬಳಕೆ ಮಾಡುತ್ತೇವೆ. ಉಳಿದ ಅವಧಿಯಲ್ಲಿ ಬಾಗಿಲು ಮುಚ್ಚಿರುತ್ತದೆ. ಈಗ ಹಜ್ ಕ್ಯಾಂಪ್ ನಲ್ಲಿ ಐಎಎಸ್ ಕೋಚಿಂಗ್ ಕೋರ್ಸ್ ಆರಂಭಿಸಿದ ಮೇಲೆ 105 ಮಂದಿ ಸರ್ಕಾರಿ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ. ಇದರಲ್ಲಿ ಪೊಲೀಸ್ , ಕಂದಾಯ, ಆರ್ಥಿಕ ಇಲಾಖೆಗೆ ಆಯ್ಕೆಯಾದವರು ಇದ್ದಾರೆ ಎಂದು ಜಮೀರ್ ಅಹಮದ್ ಹೇಳಿದರು.

ಬಾಕ್ಸ್‌.............

ಅನುದಾನ ಕಡಿತಗೊಳಿಸಿದ ಎಚ್ಡಿಕೆ:

ಸಿದ್ದರಾಮಯ್ಯನವರು ಮನಸ್ಸು ಮಾಡಿದ್ದರೆ ಅನುದಾನವನ್ನು ಎರಡು ಅಥವಾ ಮೂರು ಪಟ್ಟು ಮಾಡಿದ್ದರೆ 1200 ಕೋಟಿ ಆಗುತ್ತಿತ್ತು. ಆ ರೀತಿಯ ಕೆಲಸ ಮಾಡದ ಸಿದ್ದರಾಮಯ್ಯ 420 ಕೋಟಿ ಇದ್ದ ಅಲ್ಪಸಂಖ್ಯಾತರ ಅನುದಾನವನ್ನು 2013ರಿಂದ 2018ರವರೆಗಿನ ಅವಧಿಯಲ್ಲಿ 3200 ಕೋಟಿ ರು.ಗೆ ಹೆಚ್ಚಳ ಮಾಡಿದರು ಎಂದು ಸಚಿವ ಜಮೀರ್ ಅಹಮದ್ ಖಾನ್‌ ಹೇಳಿದರು.

ಆನಂತರ 2018ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಅವಧಿಯಲ್ಲಿ ನಾನು ಅಲ್ಪಸಂಖ್ಯಾತ ಕಲ್ಯಾಣ ಸಚಿವನಾಗಿದ್ದೆ. ಕುಮಾರಸ್ವಾಮಿ ಅಲ್ಪಸಂಖ್ಯಾತರಿಗೆ ಮೀಸಲಿಟ್ಟ ಅನುದಾನವನ್ನು ಕಡಿಮೆ ಮಾಡುವ ಮುನ್ಸೂಚನೆ ದೊರಕಿತು. ಆಗ ಮುಸ್ಲಿಂ ಸಮುದಾಯದ ಗುರುಗಳು, ಹಿರಿಯ ಮುಖಂಡರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಬಜೆಟ್‌ನಲ್ಲಿ ಅನುದಾನ ಹೆಚ್ಚಿಸದಿದ್ದರು ಪರವಾಗಿಲ್ಲ, ಕಡಿಮೆ ಮಾಡದಂತೆ ಮನವಿ ಮಾಡಿದ್ದರು. ಇದಕ್ಕೆ ಕುಮಾರಸ್ವಾಮಿ ಅನುದಾನ ಕಡಿಮೆ ಮಾಡುವುದಿಲ್ಲ ಎಂದು ಮಾತು ಕೊಟ್ಟಿದ್ದರು. ಆದರೆ, ಬಜೆಟ್ ಮಂಡಿಸಿದಾಗ 3200 ಕೋಟಿ ರು. ಅನುದಾನದಲ್ಲಿ 850 ಕೋಟಿ ಕಡಿತಗೊಳಿಸಿ 2250 ಕೋಟಿಗೆ ಸೀಮಿತಗೊಳಿಸಿದರು. ಆನಂತರ ಬಿಜೆಪಿ ಸರ್ಕಾರ ನಾಲ್ಕು ವರ್ಷಗಳ ಆಡಳಿತದಲ್ಲಿ 2250 ಕೋಟಿ ಅನುದಾನವನ್ನು 850 ಕೋಟಿ ತಂದರು. ಅಲ್ಲದೆ, ಕೇಂದ್ರ ಸರ್ಕಾರ ಸ್ಕಾಲರ್ ಶಿಪ್ ಗಳನ್ನು ರದ್ದು ಮಾಡಿತು ಎಂದು ಟೀಕಿಸಿದರು.

25ಕೆಆರ್ ಎಂಎನ್ 1.ಜೆಪಿಜಿ

ಬಿಡದಿ ಹೋಬಳಿ ಬನ್ನಿಕುಪ್ಪೆಯ ಜೆಯು ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ಆವರಣದಲ್ಲಿ ದಾರುಲ್ ಖುರಾನ್ ಕ್ಯಾಂಪಸ್ ನ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಯಿತು.