ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಕ್ಷೇತ್ರದ ಬಹು ವರ್ಷಗಳ ಬೇಡಿಕೆಯಾಗಿದ್ದ ಈ ಕಾಮಗಾರಿಗೆ ಚಾಲನೆ ನೀಡಲಾಗಿದ್ದು ಗ್ರಾಮೀಣ ಭಾಗದಲ್ಲಿ ಶಾಶ್ವತ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಆಧ್ಯತೆ ನೀಲಾಗುತ್ತಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.ತಾಲೂಕಿನ ಆಣದೂರ ಗ್ರಾಮದಿಂದ ಅತಿವಾಳ ಗ್ರಾಮದವರೆಗಿನ 1.16 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ರಸ್ತೆಯಲ್ಲಿ ವಾಹನ ಸವಾರರು ಭಾಲ್ಕಿ ಗ್ರಾಮಕ್ಕೆ ಹಾಗೂ ಸುಪ್ರಸಿದ್ಧ ದೇವಸ್ಥಾನಗಳಾದ ಹೊನ್ನಿಕೇರಿ ಸಿದ್ಧೇಶ್ವರ, ಶನಿಮಹಾತ್ಮಾ, ಗಾಯಮುಖ, ಮೈಲಾರ ಮಲ್ಲಣ್ಣ ದೇವಸ್ಥಾನಕ್ಕೆ ತೆರಳುವ ಹಿರಿಯರು, ಮಹಿಳೆಯರು, ಮಕ್ಕಳು ತೊಂದರೆ ಅನುಭವಿಸುತಿದ್ದರು. ಇದೀಗ ಆ ಶ್ರಮ ಇಲ್ಲವಾಗಲಿದೆ ಹೀಗಾಗಿ ಈ ಕೆಲಸಕ್ಕೆ ಚಾಲನೆ ನೀಡಲಾಗಿದೆ ಎಂದರು.
ಗ್ರಾಮಸ್ಥರು ಒಗ್ಗಟ್ಟಿನಿಂದ ಗ್ರಾಮಗಳ ಅಭಿವೃದ್ಧಿಗೆ ಕೈಜೋಡಿಸಬೇಕು. ಗ್ರಾಮಗಳ ಅಭಿವೃದ್ಧಿ ಕಡೆ ಗಮನ ಹರಿಸಿ. ನಿಮ್ಮ ಗ್ರಾಮಗಳ ಅಭಿವೃದ್ಧಿಗೆ ನೇರವಾಗಿ ನನ್ನನ್ನು ಭೇಟಿ ಮಾಡಿ ಚರ್ಚಿಸಿ, ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ ಎಂದು ಸಲಹೆ ನೀಡಿದರು. ಬಳಿಕ ಕಾಮಗಾರಿ ಉತ್ತಮವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಗುತ್ತಿಗೆದಾರರಿಗೆ ಡಾ. ಬೆಲ್ದಾಳೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಪರುಶುರಾಮ, ಉಪಾಧ್ಯಕ್ಷ ಸಂಜುಕುಮಾರ ಮಾಶೆಟ್ಟಿ, ಮಾಜಿ ಅಧ್ಯಕ್ಷೆ ಈಶ್ವರಿ ಹಣಮಂತಪ್ಪ, ಗ್ರಾಪಂ ಸದಸ್ಯ ಶಿವಕುಮಾರ ಕೋಳಾರೆ, ಗ್ರಾಪಂ ಸದಸ್ಯ ಸತೀಶ ಸಿಕೇಂದಪುರ, ಗ್ರಾಪಂ ಸದಸ್ಯೆ ಮೀನಾಕುಮಾರಿ, ಮುಖಂಡರಾದ ಹಣಮಂತಪ್ಪ ಮೈಲಾರೆ, ಮಾಣಿಕಪ್ಪ ಖಾಶೆಂಪುರ, ಬಸವರಾಜ ಸಿಂದಬಂದಗಿ, ಸಂತೋಷ ಸೋರಳ್ಳಿ, ಬಸವರಾಜ ಪಟೋದಿ, ಶಿವಕುಮಾ ಬಿರಗೆ, ಕಾಶಿನಾಥ ಕೋಳಾರೆ, ಶಿವರಾಜ ಮೂಲಗೆ, ಗಂಗಾಧರ ರೋಢಾ, ಚನ್ನಬಸಪ್ಪ ಕೋಳಾರೆ, ಮಾಣಿಕಪ್ಪ ಮತ್ತಿತರರು ಉಪಸ್ಥಿತರಿದ್ದರು.