ಗ್ರಾಮೀಣ ಜನರ ಆರೋಗ್ಯಕ್ಕೆ ಆದ್ಯತೆ

| Published : Aug 29 2024, 12:50 AM IST

ಸಾರಾಂಶ

ತಾಲೂಕಿನ ಜಾಬಘಟ್ಟ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ತಿಪಟೂರು: ತಾಲೂಕಿನ ಜಾಬಘಟ್ಟ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಯೋಜನಾಧಿಕಾರಿ ಸುರೇಶ್ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮುಟ್ಟದ ಕಾರ್ಯಕ್ರಮಗಳಿಲ್ಲ. ನಮ್ಮ ಯೋಜನೆಯು ಬಡವರು, ಮಧ್ಯಮ ವರ್ಗದ ಜನರ ಆರ್ಥಿಕ ಸದೃಢತೆಯ ಜೊತೆಗೆ ಅವರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತದೆ ಎಂದರು.

ಮಹಾವೀರ್ ಜೈನ್ ಆಸ್ಪತ್ರೆಯ ಮಂಜುನಾಥ್‌, ಸುನಂದ ಕಣ್ಣಿನ ಆಸ್ಪತ್ರೆಯ ಆಡಳಿತಾಧಿಕಾರಿ ನವೀನ್ ಮಾತಣಾಡಿದರು. ಶಿಬಿರದಲ್ಲಿ ಸುಮಾರು ೧೦೦ಕ್ಕೂ ಹೆಚ್ಚು ಸದಸ್ಯರು ಕಣ್ಣು, ಬಿ.ಪಿ, ಶುಗರ್, ಇಸಿಜಿ, ಕಾಲಿನ ಸ್ಪರ್ಶ ಮತ್ತಿತರ ತಪಾಸಣೆ ಮಾಡಲಾಯಿತು.

ಗ್ರಾ.ಪಂ ಮಾಜಿ ಅಧ್ಯಕ್ಷೆ ರಮ್ಯಾ, ಒಕ್ಕೂಟದ ಅಧ್ಯಕ್ಷ ಲಿಂಗರಾಜು, ಪದಾಧಿಕಾರಿ ಲಕ್ಷ್ಮೀನರಸಿಂಹಮೂರ್ತಿ, ಗುಡಿಗೌಡ ಪುಟ್ಟಸ್ವಾಮಿ, ಕೇಂದ್ರದ ಅಧ್ಯಕ್ಷೆ ಶಿವಗಂಗಮ್ಮ, ಪಾರ್ವತಮ್ಮ, ಮೇಲ್ವಿಚಾರಕ ಮಧು, ಸಮನ್ವಯಾಧಿಕಾರಿ ಭಾಗ್ಯಲಕ್ಷ್ಮಿ, ಸೇವಾಪ್ರತಿನಿಧಿ ನೇತ್ರಾ, ಕಾವ್ಯ, ವಿಎಲ್‌ಇ ಭವ್ಯ ಸೇರಿದಂತೆ ಕೇಂದ್ರದ ಸದಸ್ಯರುಗಳಿದ್ದರು.