ಸಾರಾಂಶ
ಕ್ಷೇತ್ರದ ಜನತೆಗೆ ಮೂಲಭೂತ ಸೌಲಭ್ಯ ಒದಗಿಸಲು ಆದ್ಯತೆ ನೀಡುವೆ. ಇಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಕ್ಷೇತ್ರದ ಜನತೆಗೆ ಮೂಲಭೂತ ಸೌಲಭ್ಯ ಒದಗಿಸಲು ಆದ್ಯತೆ ನೀಡುವೆ. ಇಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದರು.ಅವರು ಇಲ್ಲಿನ 37ನೇ ವಾರ್ಡಿನ ಲಿಂಗರಾಜ ದಕ್ಷಿಣದ ಶಿವಭೂಮಿ ಅಪಾರ್ಟ್‌ಮೆಂಟ್ ಬಳಿ ಒಳಚರಂಡಿ ಹಾಗೂ ರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕ್ಷೇತ್ರವ್ಯಾಪ್ತಿಯ ಪ್ರತಿ ವಾರ್ಡ್‌ಗೆ ಭೇಟಿ ನೀಡುತ್ತಿದ್ದೇನೆ. ಅಲ್ಲಿರುವ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿ ಇತ್ಯರ್ಥಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದರು.ಈ ವೇಳೆ ಪಾಲಿಕೆ ಸದಸ್ಯ ಉಮೇಶಗೌಡ ಕೌಜಗೇರಿ, ಪ್ರಮುಖರಾದ ಗುರುಶಾಂತ ವಳಸಂಗ, ಸೋಮು ಪಾಟೀಲ, ಎಂ.ಡಿ. ಮೆಣಸಿನಕಾಯಿ, ಜಿ.ಎಸ್. ಹಿರೇಮಠ, ಪ್ರದೀಪ ಜಗಮಾನಿ, ಸುಚೀತ ಅಂಗಡಿ, ಶಿವಕುಮಾರ ಪೊಲೀಸಪಾಟೀಲ, ಅಶೋಕ ಅಕ್ಕಿ, ಕಲ್ಲನಗೌಡ ಮಾಲಿಪಾಟೀಲ, ಬಸವರಾಜ ಅಂಗಡಿ, ರಾಮನಗೌಡ ಶೆಟ್ಟೆಗೌಡರ ಸೇರಿದಂತೆ ಹಲವರಿದ್ದರು.