ಸಾರಾಂಶ
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೇಕಾಬಿಟ್ಟಿಯಾಗಿ ದರ ಹೆಚ್ಚಳ ಮಾಡುವ ಖಾಸಗಿ ಬಸ್‌ಗಳ ಪರ್ಮಿಟ್ ಮತ್ತು ನೋಂದಣಿ ಪ್ರಮಾಣಪತ್ರ ರದ್ದು ಮಾಡುವುದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದ್ದರೂ ಅದನ್ನು ಲೆಕ್ಕಿಸದೇ ಎರಡರಿಂದ ಮೂರು ಪಟ್ಟು ಹೆಚ್ಚಿಸಿ ವಿಮಾನ ಪ್ರಯಾಣ ದರದ ಸಮೀಪಕ್ಕೆ ತಂದಿದ್ದಾರೆ.
ಬೆಂಗಳೂರು : ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೇಕಾಬಿಟ್ಟಿಯಾಗಿ ದರ ಹೆಚ್ಚಳ ಮಾಡುವ ಖಾಸಗಿ ಬಸ್‌ಗಳ ಪರ್ಮಿಟ್ ಮತ್ತು ನೋಂದಣಿ ಪ್ರಮಾಣಪತ್ರ ರದ್ದು ಮಾಡುವುದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದ್ದರೂ ಅದನ್ನು ಲೆಕ್ಕಿಸದೇ ಖಾಸಗಿ ಬಸ್ ಮಾಲೀಕರು ಹಬ್ಬಕ್ಕಾಗಿ ಪ್ರಯಾಣ ದರ ಎರಡರಿಂದ ಮೂರು ಪಟ್ಟು ಹೆಚ್ಚಿಸಿ ವಿಮಾನ ಪ್ರಯಾಣ ದರದ ಸಮೀಪಕ್ಕೆ ತಂದಿದ್ದಾರೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬೇಕಾಬಿಟ್ಟಿಯಾಗಿ ಪ್ರಯಾಣ ದರ ಹೆಚ್ಚಿಸದಂತೆ ತಡೆಯಲು ಸಾರಿಗೆ ಇಲಾಖೆ ಅಧಿಕಾರಿಗಳು ಕಳೆದ ವಾರವಷ್ಟೇ ಖಾಸಗಿ ಬಸ್ ಮಾಲೀಕರೊಂದಿಗೆ ಸಭೆ ನಡೆಸಿದ್ದರು. ಈ ವೇಳೆ ಬಸ್ ದರವನ್ನು ಹೆಚ್ಚಿಸಿ ಸಾರ್ವಜನಿಕರಿಗೆ ಸಮಸ್ಯೆ ಆಗುವಂತೆ ಮಾಡಿದರೆ ಬಸ್‌ಗಳ ಪರ್ಮಿಟ್ ಮತ್ತು ನೋಂದಣಿ ಪ್ರಮಾಣಪತ್ರ ರದ್ದು ಮಾಡುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಆದರೆ, ಸಾರಿಗೆ ಇಲಾಖೆ ಅಧಿಕಾರಿಗಳ ಈ ಎಚ್ಚರಿಕೆಗೆ ತಲೆ ಕೆಡಿಸಿಕೊಳ್ಳದ ಖಾಸಗಿ ಬಸ್ ಮಾಲೀಕರು ಈ ಹಿಂದಿನಂತೆ ದೀಪಾವಳಿ ಹಬ್ಬದ ಹಿಂದಿನ ದಿನ ಸೇವೆ ನೀಡುವ ಬಸ್‌ಗಳ ಪ್ರಯಾಣ ದರ ಎರಡರಿಂದ ಮೂರು ಪಟ್ಟು ಹೆಚ್ಚಿಸಿವೆ.
ವಿಮಾನ ಪ್ರಯಾಣಕ್ಕೆ ಬಸ್ ದರ ಸವಾಲು!: ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಿಮಾನ ಪ್ರಯಾಣ ದರ ₹2,600ರಿಂದ ₹2,700, ಹುಬ್ಬಳ್ಳಿಗೆ ₹4 ಸಾವಿರ, ಮಂಗಳೂರಿಗೆ ₹2,900ರಿಂದ 3,000, ಕಲಬುರಗಿಗೆ ₹4,400 ಹಾಗೂ ಬೆಳಗಾವಿಗೆ ₹4,350 ರಿಂದ ₹4,500 ಇದೆ. ಹೀಗಿರುವಾಗ ದೀಪಾವಳಿ ಸಂದರ್ಭದಲ್ಲಿ ಖಾಸಗಿ ಬಸ್‌ಗಳ ಪ್ರಯಾಣ ದರವೂ ಕೂಡ ವಿಮಾನ ಪ್ರಯಾಣ ದರದ ಸಮೀಪದಲ್ಲೇ ನಿಗದಿ ಮಾಡಲಾಗಿದೆ. ಅದರಲ್ಲೂ ಕೆಲ ಸ್ಲೀಪರ್ ಬಸ್‌ಗಳ ಪ್ರಯಾಣ ದರ ವಿಮಾನ ಪ್ರಯಾಣ ದರಕ್ಕಿಂತ ಹೆಚ್ಚಿದೆ.
ಅ.29-30ರಂದು ಖಾಸಗಿ ಬಸ್‌ಗಳ ಪ್ರಯಾಣ ದರ (ಬೆಂಗಳೂರಿನಿಂದ) (ಸ್ಲೀಪರ್ ಬಸ್)
ಮಾರ್ಗಹಿಂದಿನ ದರಹಬ್ಬದ ದರ
ಬೆಂಗಳೂರು-ಮಡಿಕೇರಿ₹500-600₹1 ಸಾವಿರ-₹1,700
ಬೆಂಗಳೂರು-ಉಡುಪಿ₹600-950₹1,700-2,400
ಬೆಂಗಳೂರು-ಧಾರವಾಡ₹800-1200₹2,300-3,500
ಬೆಂಗಳೂರು-ಬೆಳಗಾವಿ₹1 ಸಾವಿರ-1,200₹2,500-4 ಸಾವಿರ
ಬೆಂಗಳೂರು-ಶಿವಮೊಗ್ಗ₹600-800₹1,500-3 ಸಾವಿರ
ಬೆಂಗಳೂರು-ಮಂಗಳೂರು₹800-1,200₹2 ಸಾವಿರ-3,600
ಬೆಂಗಳೂರು-ಕಲಬುರುಗಿ₹1 ಸಾವಿರ-1,300₹2 ಸಾವಿರ-3 ಸಾವಿರ