ಚಿಕ್ಕಮಗಳೂರು: ಶೃಂಗೇರಿಯ ವಿದ್ಯಾರಣ್ಯಪುರದಲ್ಲಿ ಹಾಗೂ ಕೊಪ್ಪದ ಹಾಲ್ಕತ್ತೂರು ಗ್ರಾಮದಲ್ಲಿ ಸರಗಳ್ಳತನ ಮಾಡಿದ ಖಾಸಗಿ ಕಂಪನಿ ಸೇಲ್ಸ್ ಎಕ್ಸಿಕ್ಯೂಟಿವ್ ಬಂಧಿಸುವಲ್ಲಿ ಯಶಸ್ವಿಯಾಗಿರುವ ಚಿಕ್ಕಮಗಳೂರು ಪೊಲೀಸರು ಆರೋಪಿಯಿಂದ ₹4.83,000 ಮೌಲ್ಯದ ಚಿನ್ನ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ವಶಕ್ಕೆ ಪಡೆಯಲಾಗಿದೆ.

ಎಂ.ಬಿ.ಪ್ರವೀಣ್ (25) ಬಂಧಿತ ಆರೋಪಿ ಹಾಲಿ ಕೊಪ್ಪ ತಾಲೂಕಿನ ಕಟ್ಟೆಮನೆ ಲಾರೆನ್ಸ್ ಹೌಸ್ ನಲ್ಲಿ ವಾಸವಿದ್ದು, ಮೂಲತಃ ಹಾಸನ ಜಿಲ್ಲೆ ಆಲೂರು ತಾಲೂಕಿನ ಮಾದಿಹಳ್ಳಿ ನಿವಾಸಿ.ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2025ರ ಡಿ. 5 ರಂದು ವಿದ್ಯಾರಣ್ಯಪುರ ಗ್ರಾಮದ ವಾಸಿ ಭವಾನಿ 24 ಗ್ರಾಂ ಚಿನ್ನದ ಸರ ಕಳ್ಳತನದ ಬಗ್ಗೆ ದೂರು ನೀಡಿದ್ದರು. ದೂರಿನನ್ವಯ ಶೃಂಗೇರಿ ಪೊಲೀಸರು ತಂಡ ರಚನೆ ಮಾಡಿ ತನಿಖೆ ನಡೆಸಿದಾಗ ಎಂ.ಬಿ.ಪ್ರವೀಣ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸರಗಳ್ಳತನ ಒಪ್ಪಿಕೊಂಡಿದ್ದನ್ನು.
ಈ ಸಂದರ್ಭದಲ್ಲಿ ಕೊಪ್ಪದ ಹಾಲ್ಕತ್ತೂರು ಗ್ರಾಮದ ಲೋಕಪರಮೇಶ್ವರಿ ದೇವಸ್ಥಾನದ ರಸ್ತೆಯಲ್ಲಿ ಮಹಿಳೆಯೊಬ್ಬರಿಂದ ಚಿನ್ನದ ಸರ ಕಿತ್ತುಕೊಂಡು ಕಳ್ಳತನ ಮಾಡಿ ಶಿವಮೊಗ್ಗದಲ್ಲಿ 30.830 ಗ್ರಾಂ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ. ಮಾರಾಟ ಮಾಡಿದ್ದ ಚಿನ್ನದ ಸರವನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಕೊಪ್ಪ ತಾಲೂಕು ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಯಿಂದ ಚಿನ್ನದೊಂದಿಗೆ ಜತೆಗೆ ವಿವೋ ಮೊಬೈಲ್ ಪೋನ್, ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್, ಸಹ ವಶಕ್ಕೆ ಪಡೆಯಾಗಿದೆ.
ಫೋಟೋ ಇದೆ