ಪ್ರಯಾಣಿಕರಿಗೆ ಸಹಕರಿಸಿದ ಖಾಸಗಿ ವಾಹನಗಳು

| Published : Aug 05 2025, 11:45 PM IST

ಸಾರಾಂಶ

ಅರಕಲಗೂಡು ಮತ್ತು ರಾಮನಾಥಪುರ ಬಸ್ ಘಟಕಗಳಿಂದ ನಿತ್ಯವೂ ನೂರಕ್ಕೂ ಅಧಿಕ ಬಸ್‌ಗಳು ಸಂಚಾರ ಮಾಡುತ್ತಿದ್ದು, ಮುಷ್ಕರ ಹಿನ್ನೆಲೆ ಯಾವುದೇ ಬಸ್ ರಸ್ತೆಗೆ ಇಳಿದಿಲ್ಲ. ಆದರೆ ಸಾರಿಗೆ ಸಿಬ್ಬಂದಿ ಬಸ್ ನಿಲ್ದಾಣದಲ್ಲಿ ಹಾಜರಿದ್ದು ಪೊಲೀಸರ ನೆರವಿನಿಂದ ಖಾಸಗಿ ವಾಹನ ಮೂಲಕ ಹಾಸನ, ಬೆಂಗಳೂರು, ಮೈಸೂರು, ಕೊಣನೂರು, ಹೊಳೆನರಸೀಪುರ ಕಡೆ ಪ್ರಯಾಣಿಕರನ್ನು ಕಳುಹಿಸುತ್ತಿರುವುದು ಕಂಡುಬಂದಿತು. ಆದರೆ ಹಳ್ಳಿ ಕಡೆ ಯಾವುದೇ ವಾಹನ ವ್ಯವಸ್ಥೆ ಮಾಡಿರಲಿಲ್ಲ. ಪ್ರಮುಖವಾಗಿ ಮಹಿಳೆಯರ ಓಡಾಟ ವಿರಳವಾಗಿತ್ತು. ಶಾಲಾ ಕಾಲೇಜುಗಳಿಗೆ ಗ್ರಾಮೀಣ ಭಾಗದಿಂದ ಬರುವ ಮಕ್ಕಳ ಸಂಖ್ಯೆಯು ಕಡಿಮೆಯಾಗಿತ್ತು. ಶಕ್ತಿ ಯೋಜನೆ ಫಲಾನುಭವಿಗಳಾಗಿರುವ ಮಹಿಳೆಯರು, ವಿದ್ಯಾರ್ಥಿನಿಯರು ಹೆಚ್ಚಿನ ಪ್ರಮಾಣದಲ್ಲಿ ಮನೆಯಲ್ಲಿಯೇ ಉಳಿದಿದ್ದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣಕ್ಕೆ ಖಾಸಗಿ ಮಿನಿ ಬಸ್, ಟೆಂಪೋಗಳು ಬಂದು ನಿಂತಿದ್ದವು.

ಅರಕಲಗೂಡು ತಾಲೂಕು ಕೇಂದ್ರ ಬಸ್ ನಿಲ್ದಾಣದಿಂದ ಪ್ರಯಾಣಿಕರಿಗೆ ದೂರದ ಊರುಗಳಿಗೆ ಸಂಚಾರ ಮಾಡಲು ಜಿಲ್ಲಾ ಆಡಳಿತ ಖಾಸಗಿ ವಾಹನ ಸೇವೆ ಕಲ್ಪಿಸಿದ ಪರಿಣಾಮ ಮುಷ್ಕರದ ಬಿಸಿ ಸ್ಥಳೀಯ ಪ್ರಯಾಣಿಕರಿಗೆ ತಟ್ಟಲಿಲ್ಲ. ಅರಕಲಗೂಡು ಪಟ್ಟಣ ಸೇರಿದಂತೆ ರಾಮನಾಥಪುರ, ಕೇರಳಾಪುರ ಹಾಗೂ ಕೊಣನೂರು ಸಾರಿಗೆ ಬಸ್ ನಿಲ್ದಾಣಗಳಿಂದ ಖಾಸಗಿ ವಾಹನ ಸೇವೆ ಮಾಡಲಾಗಿರುವುದು ಕಂಡುಬಂದಿತು.