ಸಾರಾಂಶ
ಮೂಲ್ಕಿ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಿಶಿಷ್ಟ ಸಾಧನ ಪ್ರಶಸ್ತಿಯನ್ನು ಸತತ ಎರಡು ಬಾರಿಗೆ ಪಡೆದ ಹಳೆಯಂಗಡಿ ಪ್ರಿಯದಶಿನಿ ಕೋ ಆಪರೇಟಿವ್ ಸೊಸೈಟಿ ಆಶ್ರಯದಲ್ಲಿ ‘ಸಹಕಾರ ಸಪ್ತಾಹ 2025’ 14 ರಿಂದ 21 ರ ವರೆಗೆ ಜರಗಲಿದೆ ಎಂದು ಸೊಸೈಟಿ ಅಧ್ಯಕ್ಷ ಎಚ್.ವಸಂತ ಬೆರ್ನಾಡ್ ತಿಳಿಸಿದ್ದಾರೆ.
14 ರಂದು ಬೆಳಗ್ಗೆ ಹಳೆಯಂಗಡಿ ಪ್ರಧಾನ ಕಚೇರಿಯಲ್ಲಿ ಸಹಕಾರ ಸಪ್ತಾಹ ಧ್ವಜಾರೋಹಣವನ್ನು ಮೂಲ್ಕಿ ವಿವಿಧೋದ್ದೇಶ ಸಹಕಾರ ಸಂಘದ ಗೋಪಿನಾಥ ಪಡಂಗ ನೆರವೇರಿಸುವರು. ಹಿರಿಯ ಸಹಕಾರಿಗಳಾದ ಪಿಸಿಎ ಬ್ಯಾಂಕ್ ಹಳೆಯಂಗಡಿಯ ಮಾಜಿ ಅಧ್ಯಕ್ಷ ಮಾಧವ ತಿಂಗಳಾಯ, ಹಳೆಯಂಗಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸ್ತಾಪಕಾಧ್ಯಕ್ಷೆ ಶರ್ಲಿ ಬಂಗೇರ ಹಾಗೂ ಪ್ರಸ್ತುತ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜೈ ಕೃಷ್ಣ ಕೋಟ್ಯಾನ್ ಅವರನ್ನು ಗೌರವಿಸಲಾಗುವುದು.15ರಂದು ಹಳೆಯಂಗಡಿ ಇಂದಿರಾ ನಗರದ ಇಂದಿರಾ ಗಾಂಧಿ ಸಭಾಭವನದಲ್ಲಿ ಸಂಗಮ ಮಹಿಳಾ ಮಂಡಲ ಇಂದಿರಾನಗರದ ಸಹಯೋಗದೊಂದಿಗೆ ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ ಕಟೀಲುನ ಸಹಕಾರದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಲಿದೆ. ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ ಮುಖ್ಯ ಅಡಳಿತಾಧಿಕಾರಿ ಡಾ.ಎಚ್ ಶಿವಾನಂದ ಪ್ರಭು ಶಿಬಿರ ಉದ್ಘಾಟಿಸುವರು. ಹಳೆಯಂಗಡಿ ಪಂಚಾಯಿತಿ ಮಾಜಿ ಅಧ್ಯಕ್ಷೆ ಜಲಜ ಪಾಣಾರ್, ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಅಬ್ದುಲ್ ಖಾದರ್, ಪದ್ಮಾವತಿ ಶೆಟ್ಟಿ, ಅಬ್ದುಲ್ ಅಜಿಜ್, ನೀತು ನಿರಂಜಲ, ಶಶಿಕಲಾ ಕರಿತೋಟ, ಸುಚಿತ್ರ ಪ್ರಸನ್ನ ಭಾಗವಹಿಸಲಿದ್ದಾರೆ.
16ರಂದು ಪಡುಬಿದ್ರಿ ಶಾಖೆ ಆಶ್ರಯದಲ್ಲಿ ಶ್ರೀನಿವಾಸ ಆಸ್ಪತ್ರೆ ಮುಕ್ಕ, ಪ್ರಾಥಮಿಕ ಆರೋಗ್ಯ ಕೇಂದ್ರ ಪಡುಬಿದ್ರಿ, ತರಂಗಿಣಿ ಮಿತ್ರ ಮಂಡಳಿ ಪಡುಬಿದ್ರಿ, ಎಸ್ ಪಿ ವಿ ಪಿ ಮತ್ತು ಪಿ ಜಿ ಎಚ್ ಎಸ್ ಆರೋಗ್ಯ ನಿಧಿ ಚಾರಿಟೇಬಲ್ ಟ್ರಸ್ಟ್ ಪಡುಬಿದ್ರಿಯ ಸಹಯೋಗದಲ್ಲಿ ಗಣಪತಿ ಪ್ರೌಢಶಾಲೆ ಪಡುಬಿದ್ರಿಯಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಯಲಿದೆ. ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಭವಾನಿ ಶಂಕರ್ ಹೆಗ್ಡೆ ಪೇಟೆ ಮನೆ ಉದ್ಘಾಟಿಸುವರು. ಗಣಪತಿ ಪ್ರೌಢಶಾಲಾ ಹಳೆ ವಿದ್ಯಾರ್ಥಿ ಸಂಘ ಪಡುಬಿದ್ರಿಯ ಅಧ್ಯಕ್ಷ ನವೀನ್ ಚಂದ್ರ ಜೆ ಶೆಟ್ಟಿ , ಮುಕ್ಕ ಶ್ರೀನಿವಾಸ ಆಸ್ಪತ್ರೆಯ ವ್ಯೆದ್ಯ ಡಾ. ಶಶಿ ರಾಜ್ ಶೆಟ್ಟಿ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯೆದ್ಯೆ ಡಾ. ರಾಜಶ್ರೀ ಕಿಣಿ, ಗಣಪತಿ ಪ್ರೌಢಶಾಲೆ ಪಡುಬಿದ್ರಿಯ ಮುಖ್ಯೋಪಾಧ್ಯಾಯಿನಿ ಅನುರಾಧ ಪಿ ಎಸ್, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಅಶೋಕ ಕೆ., , ತರಂಗಿಣಿ ಮಿತ್ರ ಮಂಡಳಿ ಗೌರವಾಧ್ಯಕ್ಷ ಪಿ. ಸದಾಶಿವ ಆಚಾರ್,ಪ್ರಿ ಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕ ಗಣೇಶ್ ಪ್ರಸಾದ್, ಆರೋಗ್ಯ ನಿಧಿ ಚಾರಿಟೇಬಲ್ ಟ್ರಸ್ಟ್ ಕೋಶಾಧಿಕಾರಿ ರಮಾಕಾಂತ್ ರಾವ್ ಭಾಗವಹಿಸಲಿದ್ದಾರೆ. ಹಿರಿಯ ಸಹಕಾರಿಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮೂರ್ತೆದಾರರ ಮಹಾಮಂಡಲದ ಮಾಜಿ ಅಧ್ಯಕ್ಷ ಪಿ.ಕೆ ಸದಾನಂದ ಮತ್ತು ಪಡುಬಿದ್ರಿ ಸಹಕಾರ ವ್ಯವಸಾಯ ಸೊಸೈಟಿಯ ನಿರ್ದೇಶಕ ಗಿರೀಶ್ ಪಲಿಮಾರು ಅವರನ್ನು ಗೌರವಿಸಲಾಗುವುದು.17ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಹೈಸ್ಕೂಲ್ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ‘ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ ಎನ್ ರಾಜೇಂದ್ರ ಕುಮಾರ್ ಅವರ ಭಾವಚಿತ್ರ’ ಬಿಡಿಸುವ ಬಗ್ಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ಚಲನಚಿತ್ರ ನಟಿ ಚಿರಶ್ರೀ ಅಂಚನ್ ಉದ್ಘಾಟಿಸುವರು. ಪಂಜದ ಗುತ್ತು ಶಾಂತರಾಮ ಶೆಟ್ಟಿ ಸರ್ಕಾರಿ ಪ್ರೌಢಶಾಲೆ ಕೆಮ್ರಾಲ್ ನ ಸಹ ಶಿಕ್ಷಕಿ ಮಂಜುಳಾ ಶೆಟ್ಟಿ ಮತ್ತು ಪೂಜಾ ಟ್ಯೂಷನ್ ಕ್ಲಾಸಸ್ ಹಳೆಯಂಗಡಿಯ ಗೋಪಾಲಕೃಷ್ಣ ಬಿ ಕೋಟ್ಯಾನ್ ಭಾಗವಹಿಸಲಿದ್ದಾರೆ.18 ರಂದು ಕಿನ್ನಿಗೋಳಿ ಶಾಖೆಯ ಆಶ್ರಯದಲ್ಲಿ ಕಸ್ತೂರ್ಬಾ ಮೆಡಿಕಲ್ ಕಾಲೇಜು, ದುರ್ಗಾ ಸಂಜೀವಿನಿ ಮಣಿಪಾಲ್ ಆಸ್ಪತ್ರೆ ಕಟೀಲು, ಸಮುದಾಯ ಆರೋಗ್ಯ ವಿಭಾಗ ಕೆ.ಎಂ.ಸಿ ಮಂಗಳೂರು, ಖಿಲ್ ರಿಯಾ ಜುಮ್ಮಾ ಮಸೀದಿ ಶಾಂತಿನಗರ ಗುತ್ತಕಾಡು, ನೂರುಲ್ ಹುದಾ ಎಸೋಸಿಯೇಷನ್ ಶಾಂತಿನಗರ ಗುತ್ತಕಾಡು, ರೋಟರಿ ಕ್ಲಬ್ ಕಿನ್ನಿಗೋಳಿ, ಜನನಿ ಜನಸೇವಾ ಸಂಘ ಉಳ್ಳಂಜೆ ಕಟೀಲು ಇದರ ಆಶ್ರಯದಲ್ಲಿ ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆಯ ತಜ್ಞ ವೈದ್ಯರಿಂದ ಉಚಿತ ಸಾರ್ವಜನಿಕ ವೈದ್ಯಕೀಯ ತಪಾಸಣಾ ಶಿಬಿರ ನಡೆಯಲಿದೆ.
ಕಿನ್ನಿಗೋಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಟಿ. ಹೆಚ್ ಮಯ್ಯದ್ದಿ ಅಧ್ಯಕ್ಷತೆ ವಹಿಸಲಿದ್ದಾರೆ. ರೋಟರಿ ಕ್ಲಬ್ ಕಿನ್ನಿಗೋಳಿಯ ಅಧ್ಯಕ್ಷ ಸಾಯಿನಾಥ್ ಶೆಟ್ಟಿ.ಖಿಲ್ ರಿಯಾ ಜುಮ್ಮಾ ಮಸೀದಿ ಶಾಂತಿನಗರ ಗುತ್ತಕಾಡುನ ಉಪಾಧ್ಯಕ್ಷ ನವಾಜ್ ಕಲ್ಕೆರೆ, ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ನೂರುಲ್ ಹುದಾ ಎಸೋಸಿಯೇಷನ್ ಶಾಂತಿನಗರ ಗುತ್ತಕಾಡುನ ಅಧ್ಯಕ್ಷ ನೂರುದ್ದೀನ್, ಅಧ್ಯಕ್ಷರು ನೂರುಲ್ ಹುದಾ ಎಸೋಸಿಯೇಷನ್ ಶಾಂತಿನಗರ ಗುತ್ತಕಾಡು, ಖಿಲ್ ರಿಯಾ ಜುಮ್ಮಾ ಮಸೀದಿ ಶಾಂತಿನಗರ ಗುತ್ತ ಕಾಡುನ ಮಾಜಿ ಅಧ್ಯಕ್ಷ ಟಿ ಕೆ ಅಬ್ದುಲ್ ಖಾದರ್, ಜನನಿ ಜನಸೇವಾ ಸಂಸ್ಥೆ ಉಲ್ಲಂಜೆಯ ಅಧ್ಯಕ್ಷ ಪ್ರಕಾಶ್ ಕಿನ್ನಿಗೋಳಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಗಳಾದ ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಉಪಾಧ್ಯಕ್ಷ ಶೇಷ ರಾಮ ಶೆಟ್ಟಿ ಮತ್ತು ನಿವೃತ್ತ ಹಿರಿಯ ಅಧಿಕಾರಿ ವನಜ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು.19 ರಂದು ಮೂಡುಬಿದಿರೆ ಶಾಖೆಯ ಆಶ್ರಯದಲ್ಲಿ ಮೌಂಟ್ ರೋಜಾರಿ ಆಸ್ಪತ್ರೆ ಅಲಂಗಾರು ಮೂಡಬಿದಿರೆ ಮತ್ತು ಲಯನ್ಸ್ ಕ್ಲಬ್ ಅಲಂಗಾರುನ ಸಹಯೋಗದಲ್ಲಿ ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಮೂಡುಬಿದಿರೆ ಪುರಸಭೆ ಸದಸ್ಯ ಪಿ.ಕೆ ತೋಮಸ್ ಉದ್ಘಾಟಿಸಲಿದ್ದಾರೆ. ಹಿರಿಯ ಸಹಕಾರಿಗಳಾದ ಕಲ್ಲಬೆಟ್ಟು ಕೋ ಆಪರೇಟಿವ್ ಸೊಸೈಟಿಯ ಮಾಜಿ ಅಧ್ಯಕ್ಷ ಸುರೇಶ್ ಕೋಟ್ಯಾನ್ ಮತ್ತು ನೆಲ್ಲಿಕಾರು ಸಹಕಾರಿ ವ್ಯವಸಾಯ ಸಂಘದ ನಿವೃತ್ತ ಪ್ರಬಂಧಕ ಅರುಣ್ ಕುಮಾರ್ ಜೈನ್ ಅವರನ್ನು ಅಭಿನಂದಿಸಲಾಗುವುದು. 21ರಂದು ಸಮಾರೋಪ ಸಮಾರಂಭವು ಹಳೆಯಂಗಡಿ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ. ಸೇವಾ ಕಾರ್ಯಕ್ರಮದ ಅಂಗವಾಗಿ ಅಶಕ್ತ ಅಂಗವಿಕಲರಿಗೆ ವೀಲ್ ಚೇರ್ ವಿತರಣೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಸುರತ್ಕಲ್ ಕೊಡಿಪಾಡಿ ಕೊಡಮಣಿತ್ತಾಯ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯ ಅಧ್ಯಕ್ಷ ರೂಪೇಶ್ ರೈ ಬಹುಮಾನ ವಿತರಿಸಲಿದ್ದು ಸಮಾಜ ಸೇವಕಿ ವಿಲ್ಮಾ ಡಿಕೋಸ್ತ ಕಿನ್ನಿಗೋಳಿ ಭಾಗವಹಿಸಲಿದ್ದಾರೆ ಎಂದು ಸೊಸೈಟಿ ಅಧ್ಯಕ್ಷ ಹೆಚ್ ವಸಂತ್ ಬೆರ್ನಾಡ್ ತಿಳಿಸಿದರು. ಸೊಸೈಟಿ ಉಪಾಧ್ಯಕ್ಷೆ ಪ್ರತಿಭಾ ಕುಳಾಯಿ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))