31ರಂದು ಕಿನ್ನಿಗೋಳಿಯಲ್ಲಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಮೂರನೇ ಶಾಖೆ ಪ್ರಾರಂಭ

| Published : Mar 28 2024, 12:48 AM IST

31ರಂದು ಕಿನ್ನಿಗೋಳಿಯಲ್ಲಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಮೂರನೇ ಶಾಖೆ ಪ್ರಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ಸೀಮೆ ಅರಸರಾದ ಎಂ. ದುಗ್ಗಣ್ಣ ಸಾವಂತರು ವಹಿಸುವರು. ಕಲಾವಿದ ಭೋಜರಾಜ್ ವಾಮಂಜೂರು ವಿಶೇಷ ಆಕರ್ಷಣೆಯಾಗಿ ಭಾಗವಹಿಸಲಿದ್ದಾರೆ.

ಕನ್ನಡಪ್ರಭವಾರ್ತೆ ಮೂಲ್ಕಿ

ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಮೂರನೇ ಶಾಖೆ ಕಿನ್ನಿಗೋಳಿ ಬೆತ್ಲೇಮ್ ಸ್ಟಾರ್ ಕಾಂಪ್ಲೇಕ್ಸ್ ನಲ್ಲಿ ಮಾ. 31 ರಂದು ಪ್ರಾರಂಭಗೊಳ್ಳಲಿದೆ.

ಹಳೆಯಂಗಡಿಯ ಸಹಕಾರಿ ಭೀಷ್ಮ ದಿ. ಎಚ್. ನಾರಾಯಣ ಸನಿಲ್ ಮತ್ತು ಸಹಕಾರಿ ಧುರೀಣ ದಿ. ಪಂಜದಗುತ್ತು ಶಾಂತರಾಮ ಶೆಟ್ಟಿ ಅವರ ಪ್ರೇರಣಾ ಶಕ್ತಿಯಿಂದಾಗಿ ಪ್ರಾರಂಭಗೊಂಡ ಹಳೆಯಂಗಡಿಯ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಮಾಜಿ ಸಚಿವ ಕೆ ಅಭಯಚಂದ್ರ ಜೈನ್‌ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದೆ.

ಪರಿಸರದಲ್ಲಿ ಸಹಕಾರಿ ಸಾಧನೆಯನ್ನು ಮಾಡಬೇಕೆಂಬ ದೂರದೃಷ್ಟಿಯ ಸಹಕಾರಿ ತಂಡವು ಕೇವಲ ಅತ್ಯಲ್ಪ ಅವಧಿಯಲ್ಲಿ ಉತ್ತಮ ಸಾಧನೆಗೈದು ಇದೀಗ ಹಳೆಯಂಗಡಿ, ಪಡುಬಿದ್ರಿ ಬಳಿಕ ತನ್ನ ಮೂರನೇ ಶಾಖೆ ಕಿನ್ನಿಗೋಳಿಯಲ್ಲಿ ಪ್ರಾರಂಭಗೊಳ್ಳಲಿದೆ. 2023-24ನೇ ಸಾಲಿನಲ್ಲಿ ಅಂದಾಜು ಸುಮಾರು 195 ಕೋಟಿ ರು. ವಹಿವಾಟನ್ನು ನಿರ್ವಹಿಸಿದ್ದು, ಸ್ಥಳೀಯವಾಗಿ ಉತ್ತಮ ಕಾರ್ಯ ನಿರ್ವಹಣೆ ಮಾಡುತ್ತಿದೆ. 2023-24 ನೇ ಸಾಲಿನಲ್ಲಿ ಉತ್ತಮ ರೀತಿಯ ಲಾಭಾಂಶದ ಗುರಿಯನ್ನು ಇಟ್ಟುಕೊಂಡಿದ್ದು, ನಿರೀಕ್ಷೆಯಂತೆ ಲಾಭಾಂಶ ಬರುವ ಎಲ್ಲ ಅವಕಾಶಗಳು ಇದೆ ಎಂದು ಅಂದಾಜಿಸಲಾಗಿದೆ.

ಬೆಳಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ. ಉದ್ಘಾಟನೆಯನ್ನುಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿ. ಬೆಂಗಳೂರು ಹಾಗೂ ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿ. ಮಂಗಳೂರು ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರಕುಮಾರ್ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ಸೀಮೆ ಅರಸರಾದ ಎಂ. ದುಗ್ಗಣ್ಣ ಸಾವಂತರು ವಹಿಸುವರು. ಕಲಾವಿದ ಭೋಜರಾಜ್ ವಾಮಂಜೂರು ವಿಶೇಷ ಆಕರ್ಷಣೆಯಾಗಿ ಭಾಗವಹಿಸಲಿದ್ದಾರೆ.

ಮಾಜಿ ಸಚಿವ ಕೆ. ಅಭಯಚಂದ್ರ ದೀಪ ಪ್ರಜ್ವಲನೆ ನಡೆಸುವರು. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಭದ್ರತಾ ಕೊಠಡಿ ಉದ್ಘಾಟನೆ ನಡೆಸುವರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ ರೈ ಪ್ರಿಯದರ್ಶಿನಿ ಸ್ವಸಹಾಯ ಗುಂಪಿಗೆ ಚಾಲನೆ ನೀಡುವರು. ಕಿನ್ನಿಗೋಳಿಯ ಕೊಸೆಸಾಂವ್‌ ಅಮ್ಮನವರ ಚರ್ಚ್ ನ ಧರ್ಮ ಗುರುಗಳಾದ ಫಾ| ಫಾವುಸ್ತಿನ್ ಲುಕಾಸ್ ಲೋಬೋ ಅಮೃತ ನಗದು ಪತ್ರ ಠೇವಣಿ ಬಿಡುಗಡೆಗೊಳಿಸುವರು. ದುರ್ಗಾದಯ ಕಿನ್ನಿಗೋಳಿಯ ಮಾಲೀಕ ಸೀತಾರಾಮ ಶೆಟ್ಟಿ ಠೇವಣಿ ಪತ್ರ ಬಿಡುಗಡೆಗೊಳಿಸುವರು. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿ., ಬೆಂಗಳೂರು ನಿರ್ದೇಶಕ ಡಾ. ಐಕಳಬಾವ ದೇವಿ ಪ್ರಸಾದ್ ಶೆಟ್ಟಿ ಉಳಿತಾಯ ಖಾತೆಯ ಪಾಸ್‌ಬುಕ್ ವಿತರಣೆ ನಡೆಸುವರು. ಸಿ.ಎಸ್.ಐ ಅಮ್ಮನ್ ಮೆಮೊರಿಯಲ್‌ ಚರ್ಚ್ ಹಳೆಯಂಗಡಿಯ ಸಭಾಪಾಲಕ ರೇ. ಅಮೃತ್‌ರಾಜ್‌ ಖೋಡೆ ಮಾಸಿಕ ಠೇವಣಿ ಪತ್ರ ಬಿಡುಗಡೆ ನಡೆಸುವರು. ವ್ಯವಸ್ಥಾಪನಾ ಸಮಿತಿ, ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪಾವಂಜೆಯ ಅಧ್ಯಕ್ಷ ಬಿ. ಸೂರ್ಯಕುಮಾರ್‌ ಪ್ರಥಮ ವಾಹನ ಸಾಲ ವಿತರಣೆ ನಡೆಸುವರು. ಲಯನ್‌ ಜಿಲ್ಲಾ ಗವರ್ನರ್ ಡಾ. ಮೆಲ್ವಿನ್‌ ಡಿ ಸೋಜ ನಿತ್ಯನಿಧಿ ಪಾಸ್‌ಬುಕ್ ವಿತರಣೆ ನೆರವೇರಿಸಲಿದ್ದಾರೆ.

ದ.ಕ. ಮತ್ತು ಉಡುಪಿ ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕರಾದ ಎಚ್. ಎನ್‌ ರಮೇಶ್‌, ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಮ್. ಎಲ್. ನಾಗರಾಜ್‌, ಇನ್ನರ್ ವಿಲ್ ಕ್ಲಬ್ ಕಿನ್ನಿಗೋಳಿಯ ಅಧ್ಯಕ್ಷ ಸವಿತಾ ಶೆಟ್ಟಿ, ಖಲಿರಿಯಾ ಜುಮ್ಮಾ ಮಸೀದಿ ಗುತ್ತಕಾಡು ಅಧ್ಯಕ್ಷ ಅಬೂಬಕ್ಕರ್‌, ಕಿನ್ನಿಗೋಳಿ ಧರ್ಮಕೇಂದ್ರ - ಪಾಲನಾ ಮಂಡಳಿ ಉಪಾಧ್ಯಕ್ಷ ವಿಲಿಯಂ ಡಿಸೋಜ, ಎ.ಪಿ.ಎಮ್.ಸಿ ಮಾಜಿ ಅಧ್ಯಕ್ಷ ಪ್ರಮೋದ್‌ ಕುಮಾರ್‌, ಜಿ.ಪಂ. ಮಾಜಿ ಸದಸ್ಯ ಶೈಲಾ ಸಿಕ್ವೇರಾ, ಕಿನ್ನಿಗೋಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಟಿ. ಎಚ್ ಮಯ್ಯದ್ದಿ,, ದ.ಕ. ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ ಜಯಂತಿ, ಕಾಳಿಕಾಂಬ ಜ್ಯುವೆಲರ್ಸ್‌ ಮಾಲೀಕ ಯೋಗೀಶ್‌ ಆಚಾರ್ಯ, ಬೆತ್ಲೇಮ್ ಸ್ಟಾರ್‌ ಕಾಂಪ್ಲೇಕ್ಸ್‌ ಮಾಲಕ ಕೆ. ದೀಪಕ್ ಎ. ರೊಡ್ರಿಗಸ್‌ ಅವರು, ಕಟ್ಟಡದ ಮಾಲೀಕ ಗೋಪಾಲಕೃಷ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಿಯದರ್ಶಿನಿ ಸೊಸೈಟಿ ಅಧ್ಯಕ್ಷ ಎಚ್. ವಸಂತ ಬೆರ್ನಾಡ್‌, ಸೊಸೈಟಿ ಉಪಾಧ್ಯಕ್ಷ ಪ್ರತಿಭಾ ಕುಳಾಯಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ನಿರ್ದೇಶಕರಾದ ಡಾ. ಗಣೇಶ್‌ ಅಮೀನ್ ಸಂಕಮಾರ್, ಗೌತಮ್‌ ಜೈನ್, ಉಮಾನಾಥ್‌ ಜೆ. ಶೆಟ್ಟಿಗಾರ್, ಗಣೇಶ್ ಪ್ರಸಾದ್‌ ದೇವಾಡಿಗ, ತನುಜಾ ಶೆಟ್ಟಿ, ವಿಜಯಕುಮಾರ್ ಸನಿಲ್, ಮಿರ್ಜಾ ಅಹಮ್ಮದ್, ನವೀನ್ ಸಾಲ್ಯಾನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.