ಬಿಜೆಪಿಯವರು ಬಟ್ಟೆ ಹರಿದುಕೊಂಡರೂ ಪ್ರಿಯಾಂಕ್ ರಾಜೀನಾಮೆ ನೀಡಲ್ಲ

| Published : Jan 05 2025, 01:31 AM IST

ಬಿಜೆಪಿಯವರು ಬಟ್ಟೆ ಹರಿದುಕೊಂಡರೂ ಪ್ರಿಯಾಂಕ್ ರಾಜೀನಾಮೆ ನೀಡಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿರುದ್ಧ ಸಚಿವ ಪ್ರಿಯಾಂಕ್‌ ಖರ್ಗೆ ಮಾತಾಡಿದ್ದಕ್ಕೆ ಅವರನ್ನು ಟಾರ್ಗೆಟ್ ಮಾಡಲಾಗಿದೆ. ಕೆಲವರಿಗೆ ಅವರ ಏಳ್ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಅವರ ಶಕ್ತಿ ಕುಂದಿಸುವ ಕಾರ್ಯ ಮಾಡುತ್ತಿದ್ದಾರೆ.

ಹುಬ್ಬಳ್ಳಿ:

ಬಿಜೆಪಿಯವರು ಬಟ್ಟೆ ಹರಿದುಕೊಂಡರೂ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವುದಿಲ್ಲ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಕ್ದ ಅವರು, ಪ್ರಿಯಾಂಕ್ ಖರ್ಗೆ ಪ್ರಭಾವಿ ಸಚಿವರು, ಭವಿಷ್ಯದ ನಾಯಕ. ಅವರು ಒಂದು ಕರೆ ಕೊಟ್ಟರೆ ಬಿಜೆಪಿ ನಾಯಕರಿಗೆಲ್ಲ ನಾವು ಘೇರಾವ್ ಹಾಕುತ್ತೇವೆ. ಪ್ರಿಯಾಂಕ್ ಖರ್ಗೆ ಹಿಂದೆ ಲಕ್ಷಾಂತರ ಯುವಕರಿದ್ದಾರೆ. ಅವರ ವಿರುದ್ಧ ಮಾತನಾಡಲು ಬಿಜೆಪಿ ನಾಯಕರಿಗೆ ದಮ್, ತಾಕತ್ ಇಲ್ಲ ಎಂದು ಕಿಡಿಕಾರಿದರು.

ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿರುದ್ಧ ಸಚಿವ ಪ್ರಿಯಾಂಕ್‌ ಖರ್ಗೆ ಮಾತಾಡಿದ್ದಕ್ಕೆ ಅವರನ್ನು ಟಾರ್ಗೆಟ್ ಮಾಡಲಾಗಿದೆ. ಕೆಲವರಿಗೆ ಅವರ ಏಳ್ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಅವರ ಶಕ್ತಿ ಕುಂದಿಸುವ ಕಾರ್ಯ ಮಾಡುತ್ತಿದ್ದಾರೆ. ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ನಡೆಯುತ್ತಿದೆ. ಅವರನ್ನು ಯಾರೂ ಏನೂ ಮಾಡಲು ಆಗುವುದಿಲ್ಲ. ಬಿಜೆಪಿಯವರು ಬಟ್ಟೆ ಹರಿದುಕೊಂಡರೂ ಪ್ರಿಯಾಂಕ್‌ ರಾಜೀನಾಮೆ ನೀಡುವುದಿಲ್ಲ ಎಂದರು.

ಆತ್ಮಾವಲೋಕನ ಮಾಡಿಕೊಳ್ಳಲಿ:

ಬಿಜೆಪಿ ಆಡಳಿತ ಸಂದರ್ಭದಲ್ಲಿ ಎಷ್ಟು ಬಾರಿ, ಎಷ್ಟು ಪ್ರತಿಶತ ಬಸ್ ದರ ಹೆಚ್ಚಿಸಿದೆ ಎಂಬುದನ್ನು ನೆನಪು ಮಾಡಿಕೊಂಡು ನಂತರ ಹೋರಾಟ ಮಾಡಲಿ. ಬಿಜೆಪಿ ಅವಧಿಯಲ್ಲಿ ಸಾರಿಗೆ ನಿಗಮಗಳಿಗೆ ಬಿಟ್ಟು ಹೋಗಿದ್ದ ₹5,900 ಕೋಟಿ ಸಾಲದ ಹೊರೆ ನಾವು ತೀರಿಸುತ್ತಿದ್ದೇವೆ. ಶೇ.15 ದರ ಏರಿಕೆ ಮಾಡಿದ್ದಕ್ಕೆ ಬಿಜೆಪಿ ಬೊಬ್ಬೆ ಹೊಡೆಯುತ್ತಿದೆ. ನೀವು ಮಾಡಿದ ಸಾಲದ ಹೊರೆ ತೀರಿಸಲು ಬಸ್ ಪ್ರಯಾಣ ದರ ಹೆಚ್ಚಳದ ನಿರ್ಧಾರ ತೆಗೆದುಕೊಂಡಿದ್ದೇವೆಯೇ ಹೊರತು, ಗ್ಯಾರಂಟಿ ಹಣ ಹೊಂದಿಸಲು ಅಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದರು.

2008ರಿಂದ 2013ರ ಅವಧಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಅಂದು ಸಾರಿಗೆ ಸಚಿವರಾಗಿದ್ದ ಆ‌ರ್. ಅಶೋಕ ಅವರ ಅವಧಿಯಲ್ಲೇ 7 ಬಾರಿ ಪ್ರಯಾಣದರ ಹೆಚ್ಚಳ ಮಾಡಿದ್ದಾರೆ. ಆಗ ಒಟ್ಟು ಶೇ. 47.8ರಷ್ಟು ಏರಿಕೆ ಮಾಡಲಾಗಿತ್ತು ಎಂದರು.

ಶಕ್ತಿ ಯೋಜನೆಯ ಹೊರೆ ಕಡಿಮೆ ಮಾಡಿಕೊಳ್ಳಲು ದರ ಹೆಚ್ಚಳ ಮಾಡಲಾಗಿದೆ ಎಂದು ಬಿಜೆಪಿ ಮುಖಂಡರು ಅಪಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿಯರಿಗೆ ಮಹಿಳಾ ಸಬಲೀಕರಣ ಇಷ್ಟವಿಲ್ಲ. ಹಾಗಾಗಿ, ಶಕ್ತಿ ಯೋಜನೆ ವಿರೋಧಿಸುತ್ತಿದ್ದಾರೆ ಎಂದು ದೂರಿದರು.