ಬಾಪೂಜಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ಅ.2 ರಂದು ಬಹುಮಾನ ವಿತರಣೆ

| Published : Oct 01 2024, 01:16 AM IST

ಸಾರಾಂಶ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ, ಸ್ನಾತಕೋತ್ತರ ಪದವಿ ವಿಭಾಗಗಳಿಗೆ ಪ್ರತ್ಯೇಕವಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ ಫಲಿತಾಂಶ ಪ್ರಕಟವಾಗಿದೆ.

ಕನ್ನಡಪಗ್ರಭ ವಾರ್ತೆ ಮಂಡ್ಯ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ, ಸ್ನಾತಕೋತ್ತರ ಪದವಿ ವಿಭಾಗಗಳಿಗೆ ಪ್ರತ್ಯೇಕವಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ ಫಲಿತಾಂಶ ಪ್ರಕಟವಾಗಿದೆ.

ಪ್ರೌಢಶಾಲೆ ವಿಭಾಗ: ಲಿಖಿತಾರಾಜು.ಎಸ್.ಆರ್, ಪೂರ್ಣಪ್ರಜ್ಞ ಕಾನ್ವೆಂಟ್, ಮದ್ದೂರು- ಪ್ರಥಮ, ಸುಚಿತ್ರ, ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ವಿ.ಸಿ ಫಾರಂ, ಮಂಡ್ಯ ಉತ್ತರ ವಲಯ - ದ್ವಿತೀಯ, ಲಕ್ಷಯ್ ಗೌಡ ಅನಿಕೇತನ ಪ್ರೌಢಶಾಲೆ, ಮಂಡ್ಯ ದಕ್ಷಿಣ ವಲಯ -ತೃತೀಯ.

ಪದವಿ ಪೂರ್ವ ಕಾಲೇಜು ವಿಭಾಗ: ಸಂಗೀತ.ಎಲ್, ಸರ್ಕಾರಿ ಪದವಿ ಪೂರ್ವ ಕಾಲೇಜು, ಬಸರಾಳು, ಮಂಡ್ಯ ತಾಲೂಕು- ಪ್ರಥಮ, ರಕ್ಷಿತಾ .ಎಚ್. ಡಿ, ಗಂಗಾಧರೇಶ್ವರ ಪದವಿ ಪೂರ್ವ ಕಾಲೇಜು, ಎಸಿ ಗಿರಿ, ನಾಗಮಂಗಲ ತಾಲೂಕು ದ್ವಿತೀಯ, ಪ್ರಜ್ವಲ್ ಸರ್ಕಾರಿ ಪದವಿ ಪೂರ್ವ ಕಾಲೇಜು, ಕಿಕ್ಕೇರಿ ಕೆ. ಆರ್ ಪೇಟೆ, ಮಂಡ್ಯ ಜಿಲ್ಲೆ -ತೃತೀಯ.

ಪದವಿ/ಸ್ನಾತಕೋತ್ತರ ವಿಭಾಗ: ಯುಕ್ತಿ.ಎಸ್, ಮಹಿಳಾ ಸರ್ಕಾರಿ ಕಾಲೇಜು, ಮಂಡ್ಯ -ಪ್ರಥಮ, ಪೂಜಾ .ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೆ. ಆರ್ ಸಾಗರ- ದ್ವಿತೀಯ, ನೇತ್ರಾ .ಬಿ .ಎಸ್ ಶ್ರೀ ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ನಾಗಮಂಗಲ - ತೃತೀಯ ಬಹುಮಾನ.

ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಕ್ರಮವಾಗಿ 3,000 ರು.2,000 ಹಾಗೂ 1,000 ರು.ನಗದು ಪುರಸ್ಕಾರ ಹಾಗೂ ಪ್ರಮಾಣ ಪತ್ರಗಳನ್ನು ಅ.2ರಂದು ಬೆಳಗ್ಗೆ 9 ಗಂಟೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದ ಕಾವೇರಿವನ ಉದ್ಯಾನವನದಲ್ಲಿ ಆಯೋಜಿಸಲಾಗಿರುವ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.