ಸಾರಾಂಶ
ಮಹಾತ್ಮ ಗಾಂಧಿ ವೃತ್ತದಿಂದ ತಾಲೂಕು ಕಚೇರಿ ವರೆಗೆ ಭಿಕ್ಷಾಟನೆ
ಕನ್ನಡಪ್ರಭ ವಾರ್ತೆ, ಅಜ್ಜಂಪುರತಾಲೂಕು ಕಚೇರಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಬೃಹತ್ ಪ್ರತಿಭಟನೆ ಮತ್ತು ಅಧಿಕಾರಿಗಳ ಹಣದ ದಾಹ ತೀರಿಸಲು ಭಿಕ್ಷೆ ಚಳುವಳಿ ಮೂಲಕ ಭ್ರಷ್ಟ ಅಧಿಕಾರಿಗಳ ಹಠವೋ ಅಜ್ಜಂಪುರ ಬಚಾವೋ ಎಂಬ ಘೋಷಣೆ ಮೂಲಕ ಭಿಕ್ಷಾಟನೆ ಮಾಡಿ ಭಿಕ್ಷೆ ಬೇಡಿದ ಹಣದಿಂದ ತಹಸೀಲ್ದಾರ್ ಕಚೇರಿಗೆ ಚೇರ್ ಗಳನ್ನು ವಿತರಿಸಿದ ಘಟನೆ ನಡೆದಿದೆ.ಮಹಾತ್ಮ ಗಾಂಧಿ ವೃತ್ತದಿಂದ ತಾಲೂಕು ಕಚೇರಿ ವರೆಗೆ ಭಿಕ್ಷಾಟನೆ ಮಾಡಿ ನಂತರ ಉಪ ತಹಸೀಲ್ದಾರ್ ನೇತ್ರಾ ಅವರಿಗೆ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿ, ಭಿಕ್ಷೆ ಮಾಡಿದ ಹಣವನ್ನು ಸರ್ಕಾರಕ್ಕೆ ಕಳಿಸುವಂತೆ ತಹಸೀಲ್ದಾರ್ ಗೆ ನೀಡಿದರು. ಅಧಿಕಾರಿಗಳ ಹಣದ ದಾಹ ತೀರಿಸಬೇಕೆಂದು ಈ ಮೂಲಕ ಪ್ರತಿಭಟನಾಕಾರರು ಭ್ರಷ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಅಹಿಂದ ಒಕ್ಕೂಟದ ಸಂಚಾಲಕ ಸುನಿಲ್ ಡಿ ಎನ್. ಡಿಎಸ್ಎಸ್ ಪ್ರಧಾನ ಸಂಚಾಲಕ ಎಚ್. ಎಸ್. ರಾಜಪ್ಪ, ಜಿಲ್ಲಾ ಸಂಘಟನಾ ಸಂಚಾಲಕ ರಾಮಚಂದ್ರ ಜೆ. ತರೀಕೆರೆ ದಸಂಸ ಮುಖಂಡರಾದ ಹೂವು ಅಣ್ಣಯ್ಯ, ತರೀಕೆರೆ ಹನುಮಂತು, ರಘು, ಡಾ ಶಿವಪ್ರಸಾದ್, ನಂದಿ ಹರೀಶ್, ಆನಂದ್, ಪುನೀತ್, ಗಣೇಶ್ , ನಾಗರಾಜ್, ಸುರೇಶ್, ಸುನಿಲ್, ಅಭಿ ಇತರರು ಭಾಗವಹಿಸಿದ್ದರು.
19ಕೆಟಿಆರ್.ಕೆ.15ಃಅಜ್ಜಂಪುರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ.) ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು