ಸಾರಾಂಶ
ಕನ್ನಡಪ್ರಭ ವಾರ್ತೆ ತೇರದಾಳ(ರ-ಬ): ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಸವದಿ ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ತೇರದಾಳ ಶಾಸಕ ಸಿದ್ದು ಸವದಿ ಅವರು ಮನೆಮನೆಗೆ ತೆರಳಿ ಪಕ್ಷದ ಪರವಾದ ಕರಪತ್ರಗಳನ್ನು ವಿತರಿಸಿ ಬಿಜೆಪಿಗೆ ಮತ ನೀಡುವಂತೆ ಮತಯಾಚಿಸಿದರು.
ಕನ್ನಡಪ್ರಭ ವಾರ್ತೆ ತೇರದಾಳ(ರ-ಬ):
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಸವದಿ ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ತೇರದಾಳ ಶಾಸಕ ಸಿದ್ದು ಸವದಿ ಅವರು ಮನೆಮನೆಗೆ ತೆರಳಿ ಪಕ್ಷದ ಪರವಾದ ಕರಪತ್ರಗಳನ್ನು ವಿತರಿಸಿ ಬಿಜೆಪಿಗೆ ಮತ ನೀಡುವಂತೆ ಮತಯಾಚಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತ ಅಭಿವೃದ್ಧಿಯತ್ತ ಸಾಗುತ್ತಿರುವುದಕ್ಕೆ ಮೋದಿಯವರೇ ಕಾರಣರಾಗಿದ್ದಾರೆ. ಈ ಬಾರಿ ಮತ್ತೆ ಬಿಜೆಪಿಗೆ ಮತ ಹಾಕುವ ಮೂಲಕ ಪ್ರಗತಿಗೆ ಬೆಂಬಲ ಕೊಡಬೇಕು. ರಾಷ್ಟ್ರದ ಪ್ರತಿ ಜನಾಂಗಕ್ಕೂ ಒಂದಿಲ್ಲೊಂದು ಸೌಲಭ್ಯ ತಲುಪಿಸಿರುವ ಅವರು, ಅಭಿವೃದ್ಧಿಯ ಹರಿಕಾರರಾಗಿದ್ದಾರೆ. ಅದಕ್ಕಾಗಿ ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆತಂದು ಮೋದಿಯವರನ್ನು ಪ್ರಧಾನಿ ಆಗಿಸಲು ಶ್ರಮಿಸಬೇಕೆಂದು ಎಂದು ಹೇಳಿದರು.
ಸಿದ್ದು ಅಮ್ಮಣಗಿ, ಸುರೇಶ ಅಕ್ಕಿವಾಟ, ಮಹಾವೀರ ಕೊಕಟನೂರ, ಶಂಕರ ಗೋಲಭಾವಿ, ಸುರೇಶ ರೇಣಕೆ, ಬಾಳುದಾದಾ ದೇಶಪಾಂಡೆ, ರಾಮಣ್ಣ ಹಿಡಕಲ್, ಕೇದಾರಿ ಪಾಟೀಲ, ಅಪ್ಪು ಮಂಗಸೂಳಿ, ಲಕ್ಷ್ಮಣ ನಾಯಕ, ಶೀತಲ್ ಬೋಳಗೊಂಡ, ಸಂತೋಷ ಅಕ್ಕೆನ್ನವರ, ಸಂತೋಷ ಜಮಖಂಡಿ, ಮೌಲಾಅಲಿ ಚಿತ್ರಭಾನುಕೋಟೆ, ಶ್ರೀಶೈಲ ಮೋದಿ, ಶಂಕರ ಕುಂಬಾರ, ಮುತ್ತಣ್ಣ ಮುಳ್ಳಟ್ಟಿ, ವಿಠ್ಠಲ ಹಾಡಕಾರ, ಆನಂದ ಮಧುಮಲಿ, ಸತ್ಯಪ್ಪ ಚವಜ, ಸಚಿನ್ ಕೊಡತೆ, ಪ್ರವೀಣ ತುಬಚಿ ಮುಂತಾದವರು ಉಪಸ್ಥಿತರಿದ್ದರು.