ಶೃಂಗೇರಿರಾಜಕಾರಣದಲ್ಲಿ ಪರ ವಿರೋಧ ಚರ್ಚೆಗಳು ಸಹಜ. ಆದರೆ ಶೃಂಗೇರಿ ಕ್ಷೇತ್ರದಲ್ಲಿ ಮಾಜಿ ಶಾಸಕ ಡಿ.ಎನ್. ಜೀವರಾಜ್ ಅವರಷ್ಟು ತೊಂದರೆ ನನಗೆ ಯಾರೂ ನೀಡಿಲ್ಲ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಸಂತೇಮಾರುಕಟ್ಟೆ ಬಳಿ ನೂತನ ಆಟೋ ನಿಲ್ದಾಣ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಶೃಂಗೇರಿ

ರಾಜಕಾರಣದಲ್ಲಿ ಪರ ವಿರೋಧ ಚರ್ಚೆಗಳು ಸಹಜ. ಆದರೆ ಶೃಂಗೇರಿ ಕ್ಷೇತ್ರದಲ್ಲಿ ಮಾಜಿ ಶಾಸಕ ಡಿ.ಎನ್. ಜೀವರಾಜ್ ಅವರಷ್ಟು ತೊಂದರೆ ನನಗೆ ಯಾರೂ ನೀಡಿಲ್ಲ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಪಟ್ಟಣದ ಸಂತೇಮಾರುಕಟ್ಟೆ ಬಳಿ ನೂತನ ಆಟೋ ನಿಲ್ದಾಣ ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರದಲ್ಲಿ ಅಭಿವೃದ್ಧಿಗೆ ಅಡ್ಡಿ ಜೊತೆಗೆ ಇಲ್ಲಸಲ್ಲದ ಆರೋಪ ಮಾಡಿದರು. ನನ್ನ ವಿರುದ್ಧ ಲೋಕಾಯುಕ್ತ ತನಿಖೆ ನಡೆಯಲಿ. ಚುನಾವಣೆ ನಂತರ ನನ್ನ ಆಸ್ತಿ ಜಾಸ್ತಿ ಆಗಿಲ್ಲ. ಕಡಿಮೆ ಆಗಿದೆ.

ನನ್ನ ಅಧಿಕಾರದಲ್ಲಿ ಜನಪ್ರತಿನಿಧಿ ನ್ಯಾಯಾಲಯವನ್ನು ದುರುಪಯೋಗಪಡಿಸಿಕೊಂಡಿಲ್ಲ. 2014 ರಲ್ಲಿ ಜೀವರಾಜ್ ಅವಧಿಯಲ್ಲಿ ಒತ್ಚುವರಿ ಟಾಸ್ಕ್ ಪೋರ್ಸ್ ರಚನೆಯಾಗಿದ್ದರೂ ಅನುಷ್ಠಾನಕ್ಕೆ ಬಂದಿರಲಿಲ್ಲ ಎಂದು ಆರೋಪಿಸಿದರು.

ಶೀಘ್ರದಲ್ಲಿಯೇ ಶೃಂಗೇರಿ, ಜಯಪುರ, ಕೊಪ್ಪ ಪಟ್ಟಣ ಅಗಲೀಕರಣ ನಡೆಯಲಿದೆ. ಶೃಂಗೇರಿಯಲ್ಲಿ 100 ಬೆಡ್ ಆಸ್ಪತ್ರೆಗೆ 33 ಕೋಟಿ ಬಿಡುಗಡೆಯಾಗಿದೆ. ಜಯಪುರದಲ್ಲಿ 30 ಬೆಡ್ ಆಸ್ಪತ್ರೆ ಕಾಮಗಾರಿ ಆರಂಭಗೊಂಡಿದೆ. ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಆಟೋಚಾಲಕರ ಸಂಘದ ಅಧ್ಯಕ್ಷ ರವಿಕಲ್ಕಟ್ಟೆ, ಡಾ.ಅಣ್ಣಾದೊರೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಸಿ ಶಂಕರಪ್ಪ, ಪಪಂ ಮುಖ್ಯಾಧಿಕಾರಿ ಸರಸ್ವತಿ ಷಣ್ಮುಗ ಸುಂದರಿ, ಪ್ರಭಾರಿ ತಹಸೀಲ್ದಾರ್ ರಾಮ್ ರಾವ್ ದೇಸಾಯಿ, ಕೆ.ಎಂ.ರಮೇಶ್ ಭಟ್, ದಿನೇಶ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

24 ಶ್ರೀ ಚಿತ್ರ 1-

ಶೃಂಗೇರಿ ಪಟ್ಟಣದ ಸಂತೇಮಾರುಕಟ್ಟೆ ಬಳಿ ನೂತನ ಆಟೋ ನಿಲ್ದಾಣವನ್ನು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು.