ಪಾಕ್ತಿಸ್ತಾನ ಪರ ಘೋಷಣೆ ಖಂಡಿಸಿ ಪ್ರತಿಭಟನೆ

| Published : Feb 29 2024, 02:08 AM IST

ಪಾಕ್ತಿಸ್ತಾನ ಪರ ಘೋಷಣೆ ಖಂಡಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ರಾಜ್ಯಸಭಾ ಚುನಾವಣೆ ವಿಜಯೋತ್ಸವ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು ಶತ್ರುರಾಷ್ಟ್ರ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರದಲ್ಲಿ ಬುಧವಾರ ಬಿಜೆಪಿ ಯುವಮೋರ್ಚಾ ಹಾಗೂ ವಿವಿಧ ಘಟಕಗಳ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ದೊಡ್ಡಬಳ್ಳಾಪುರ: ರಾಜ್ಯಸಭಾ ಚುನಾವಣೆ ವಿಜಯೋತ್ಸವ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು ಶತ್ರುರಾಷ್ಟ್ರ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರದಲ್ಲಿ ಬುಧವಾರ ಬಿಜೆಪಿ ಯುವಮೋರ್ಚಾ ಹಾಗೂ ವಿವಿಧ ಘಟಕಗಳ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ತಾಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನಾ ಧರಣಿ ನಡೆಸಿ, ಬಳಿಕ ತಾಲೂಕು ಕಚೇರಿ ಆವರಣದಲ್ಲಿ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಮುಖಂಡರು, ರಾಜ್ಯ ಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಜಯಗಳಿಸಿದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ವಿಧಾನಸೌಧ ಅಂಗಳದಲ್ಲಿ ಪಾಕ್‌ ಪರ ಘೋಷಣೆ ಕೂಗುವ ಮೂಲಕ ದೇಶದ್ರೋಹದ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದರು.

ದೇಶದ ಅಸ್ಮಿತೆಯನ್ನು ಹಾಳು ಮಾಡುವುದಲ್ಲದೆ ದೇಶದ್ರೋಹಿ ಕೃತ್ಯದಲ್ಲಿ ನಾಸಿರ್ ಬೆಂಬಲಿಗರು ಭಾಗಿಯಾಗಿದ್ದು, ಸ್ವತಃ ನಾಸಿರ್ ಅವರು ಈ ಕೃತ್ಯವನ್ನು ಖಂಡಿಸದೆ ಮಾಧ್ಯಮದವರ ಮೇಲೆ ಉದ್ದಟತನ ಮೆರೆದಿದ್ದಾರೆ. ಇಂತಹ ಕೃತ್ಯಗಳು ಖಂಡನೀಯ. ಪಾಕ್‌ ಪರ ಘೋಷಣೆ ಕೂಗಿದ ವ್ಯಕ್ತಿಗಳನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು. ದೇಶದ್ರೋಹದ ಪ್ರಕರಣವನ್ನು ದಾಖಲಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಪಕ್ಷದ ತಾಲೂಕು ಅಧ್ಯಕ್ಷ ನಾಗೇಶ್ ,ನಗರ ಅಧ್ಯಕ್ಷ ಮುದ್ದಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿ ರಾಜಘಟ್ಟ ಕಾಂತರಾಜು, ನಗರ ಪ್ರಧಾನ ಕಾರ್ಯದರ್ಶಿ ಮುನಿರಾಜು, ಸಂಚಾಲಕರಾದ ವೆಂಕಟರಾಜು, ನಿಕಟ ಪೂರ್ವ ಜಿಲ್ಲಾ ಕಾರ್ಯದರ್ಶಿ ಗೋವಿಂದರಾಜ್. ನಿಕಟ ಪೂರ್ವ ರಾಜ್ಯ ಕಾರ್ಯದರ್ಶಿ ಬಿ.ಸಿ ನಾರಾಯಣಸ್ವಾಮಿ, ನಿಕಟಪೂರ್ವ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಂ.ಕೆ.ವತ್ಸಲ ,ನಗರ ಸಭಾ ಸದಸ್ಯರಾದ ಪದ್ಮನಾಭ್, ವತ್ಸಲ, ನಾಗರತ್ನಮ್ಮ ಕೃಷ್ಣಮೂರ್ತಿ, ಹಂಸಪ್ರಿಯ ದೇವರಾಜ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎನ್.ಕೆ ರಮೇಶ್‌, ಮುಖಂಡರಾದ ಜೆ ಮಂಜುನಾಥ್ , ಉಮಾಮಹೇಶ್ವರಿ, ಎಸ್ಎಸ್‌ಟಿ ಮಂಜುನಾಥ್, ತಿರುಮಲ ಮಂಜುನಾಥ್, ಆನಂದ್, ಮುನಿಶಂಕರ್, ಮಧು ಬೇಗಲಿ ಮತ್ತಿತರರಿದ್ದರು.28ಕೆಡಿಬಿಪಿ1-

ಪಾಕ್‌ ಪರ ಘೋಷಣೆ ವಿರೋಧಿಸಿ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ವಿವಿಧ ಘಟಕಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.