ಹರಿಹರ ನಗರದ ಪೇಟೆ ಆಂಜನೇಯ ದೇವಸ್ಥಾನ ಆವರಣದಲ್ಲಿ ಹಿಂದೂ ಜಾಗರಣ ವೇದಿಕೆ, ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಹಾಗೂ ನಗರಸಭೆ ಕ್ರೀಡಾಂಗಣದಲ್ಲಿ ಸಾರ್ವಜನಿಕ ವಿನಾಯಕ ಸಂಘದಿಂದ ಪ್ರತಿಷ್ಠಾಪಿಸಿರುವ 2 ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯದ ಬೃಹತ್ ಶೋಭಾಯಾತ್ರೆ ಅ.4ರ ಭಾನುವಾರ ನಡೆಯಲಿದೆ. ಈ ಹಿನ್ನೆಲೆ ನಗರವೆಲ್ಲಾ ಕೇಸರಿ ಬಾವುಟಗಳಿಂದ ಶೃಂಗಾರಗೊಂಡಿದೆ.
- ಹಿಂದೂ ಮಹಾಗಣಪತಿ, ಸಾರ್ವಜನಿಕ ವಿನಾಯಕ ಸಂಘ ಗಣೇಶಗಳ ಜತೆ ಇನ್ನೂ 6 ಗಣೇಶಗಳ ವಿಸರ್ಜನೆ ವಿಶೇಷ- - -
ಕನ್ನಡಪ್ರಭ ವಾರ್ತೆ ಹರಿಹರನಗರದ ಪೇಟೆ ಆಂಜನೇಯ ದೇವಸ್ಥಾನ ಆವರಣದಲ್ಲಿ ಹಿಂದೂ ಜಾಗರಣ ವೇದಿಕೆ, ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಹಾಗೂ ನಗರಸಭೆ ಕ್ರೀಡಾಂಗಣದಲ್ಲಿ ಸಾರ್ವಜನಿಕ ವಿನಾಯಕ ಸಂಘದಿಂದ ಪ್ರತಿಷ್ಠಾಪಿಸಿರುವ 2 ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯದ ಬೃಹತ್ ಶೋಭಾಯಾತ್ರೆ ಅ.4ರ ಭಾನುವಾರ ನಡೆಯಲಿದೆ. ಈ ಹಿನ್ನೆಲೆ ನಗರವೆಲ್ಲಾ ಕೇಸರಿ ಬಾವುಟಗಳಿಂದ ಶೃಂಗಾರಗೊಂಡಿದೆ.
ನಗರದ ಪ್ರಮುಖ ರಸ್ತೆಗಳಲ್ಲಿನ ವಿದ್ಯುತ್ ದೀಪಗಳ ಕಂಬದಿಂದ ಕಂಬಕ್ಕೆ, ರಸ್ತೆಯ ಇಕ್ಕೆಲಗಳಲ್ಲಿ ಕಟ್ಟಿರುವ ಕೇಸರಿ ಬಾವುಟಗಳು ನಗರದ ಸೌಂದರ್ಯವನ್ನು ಹೆಚ್ಚಿಸಿವೆ. ರಾತ್ರಿ ವಿದ್ಯುತ್ ದೀಪಗಳ ಬೆಳಕಿನಿಂದ ನಗರ ಅತ್ಯಾಕರ್ಷಕವಾಗಿ ಗೋಚರಿಸುತ್ತಿದೆ.ಪಂಚಮುಖಿ ವೀರಾಂಜನೇಯ ಮಹಾದ್ವಾರ:
ಸನಾತನ ಧರ್ಮ ಸಂಸ್ಕೃತಿ ಉಳಿಸಿ ಬೆಳೆಸುವ, ಅದರಲ್ಲಿಯೂ ಸಮಸ್ತ ಹಿಂದೂಗಳೆಲ್ಲರೂ ಪೂಜಿಸುವ ಆರಾಧಿಸುವ ದೇವರೆಂದರೆ ಆಂಜನೇಯ ಸ್ವಾಮಿ. ನಗರದ ಶಿವಮೊಗ್ಗ -ಹೊಸಪೆಟೆ ರಾಜ್ಯ ಹೆದ್ದಾರಿಯ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ, ಬೃಹತ್ ಶೋಭಾಯಾತ್ರೆ ನಿಮಿತ್ತ ನಿರ್ಮಿಸಿರುವ ಪಂಚಮುಖಿ ವೀರಾಂಜನೇಯ ಮಹಾದ್ವಾರದ ಮೇಲಿನ ವೀರಾಂಜನೇಯನು, ನಾನೆಂದಿಗೂ ಶ್ರೀರಾಮ, ಸೀತಾಮಾತೆಯ ಪರಮಭಕ್ತ. ನನ್ನ ಹೃದಯ ಮಂದಿರದಲ್ಲಿ ಅವರಿದ್ದಾರೆ. ನಾನು ಅವರನ್ನು ಆರಾಧಿಸುತ್ತೆನೆಂದು, ತನ್ನ ಎದೆ ಬಗೆದು ತೋರಿಸುವ ದೃಶ್ಯ ಸಮಸ್ತ ನೋಡುಗರ ಮನಸು ಸೂರೆಗೊಳ್ಳುತ್ತಿದೆ.ಅನ್ನದಾತರ ಹೆಸರಲ್ಲೂ ಮಹಾದ್ವಾರ:
ಪೇಟೆ ಆಂಜನೇಯ ದೇವಸ್ಥಾನ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ದರ್ಶನಕ್ಕೆ ತೆರಳುವ ಮಾರ್ಗದಲ್ಲಿ, ಬೊಂಗಾಳೆ ಸರ್ಕಲ್ ಬಳಿ ನಾಡಿನ ಅನ್ನದಾತ ರೈತರನ್ನು ಸ್ಮರಿಸುವ ಮಹಾದ್ವಾರ ನಿರ್ಮಿಸಲಾಗಿದೆ. ಆ ಮಹಾದ್ವಾರದಲ್ಲಿ ಅನ್ನದಾತರಿಗೆ ನಿತ್ಯ ಹೊಂದಿಸುವಂಥ ವಾಕ್ಯಗಳನ್ನು ಬರೆಯಲಾಗಿದೆ. ಗದ್ದೆಗಳಲ್ಲಿ ಬೆಳೆದ ವಿವಿಧ ಬೆಳೆಗಳ ಚಿತ್ರಗಳನ್ನು ಮಹಾದ್ವಾರದಲ್ಲಿ ಚಿತ್ರಿಸಲಾಗಿದೆ.ಮುಸ್ಲಿಮರಿಂದ ತಂಪುಪಾನೀಯ ವಿತರಣೆಗೆ ಸಿದ್ಧತೆ:
ಹರಿಹರ ನಗರದಲ್ಲಿ ಇಂದು ನಡೆಯುವ ಗಣೇಶಗಳ ಬೃಹತ್ ಶೋಭಾಯಾತ್ರೆಗೆ ಬರುವ ಭಕ್ತರಿಗೆ, ನಗರದ ಹರಪನಹಳ್ಳಿ ಸರ್ಕಲ್ ಹತ್ತಿರ ನಗರದ ಮುಸ್ಲಿಂ ಮುಖಂಡರು, ಯುವಕರು ತಂಪು ಪಾನೀಯ ವಿತರಿಸಲಿದ್ದಾರೆಂದು, 64ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಆರ್. ವಿಜಯಕುಮಾರ ಮಾಹಿತಿ ನೀಡಿದರು.ಶುಭಾಶಯಗಳ ಮಹಾಪೂರ:
ಹಿಂದೂ ಮಹಾಗಣಪತಿ, ಸಾರ್ವಜನಿಕ ಗಣೇಶ ಹಾಗೂ ನಗರದ ಉಳಿದ 6 ಗಣೇಶೋತ್ಸವ ಸಮಿತಿಯ ಒಟ್ಟು, 8 ಗಣೇಶ ಮೂರ್ತಿಗಳ ವಿಸರ್ಜನೆಯ ನಿಮಿತ್ತ ನಗರದಲ್ಲಿ ಇಂದು ಬೆಳಗ್ಗೆ 10-30 ರಿಂದ ಆರಂಭಗೊಳ್ಳುವ ಬೃಹತ್ ಶೋಭಾಯಾತ್ರೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಶಾಸಕ ಬಿ.ಪಿ ಹರೀಶ್, ಬಸನಗೌಡ ಪಾಟೀಲ್ ಯತ್ನಾಳ, ಪ್ರತಾಪ ಸಿಂಹ, ರಮೇಶ್ ಜಾರಕಿಹೊಳಿ, ಕುಮಾರ ಬಂಗಾರಪ್ಪ, ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ, ಮಾಜಿ ಶಾಸಕ ಎಸ್ ರಾಮಪ್ಪ, ನಂದಿಗಾವಿ ಶ್ರೀನಿವಾಸ್, ಎಚ್.ಎಸ್. ಶಿವಶಂಕರ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ, ಹಾಗೂ ಸಮಾಜದ ಮುಖಂಡರು ಶುಭ ಹಾರೈಸಿದ್ದಾರೆ.- - -
(ಬಾಕ್ಸ್)* ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು
ಪೇಟೆ ಆಂಜನೇಯ ದೇವಸ್ಥಾನ, ನಗರಸಭೆ ಕ್ರೀಡಾಂಗಣ ಸೇರಿದಂತೆ ನಗರದ ಸುಮಾರು 8 ಸ್ಥಳಗಳಲ್ಲಿ ಪ್ರತಿಷ್ಠಾಪಿಸಿರುವ ಎಲ್ಲ ಗಣೇಶ ಮೂರ್ತಿಗಳ ವಿಸರ್ಜನೆಯ ಕಾರ್ಯ ಇಂದು ನಡೆಯಲಿದೆ. ನಮ್ಮ ಜೊತೆಯಲ್ಲಿ ಬರುತ್ತಿರುವವರಿಗೆಲ್ಲಾ ಶುಭವಾಗಲಿ. ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು ಎಂಬ ಭಾವನೆ ನಮ್ಮದಾಗಿದೆ. ಬೃಹತ್ ಶೋಭಾಯಾತ್ರೆಯಲ್ಲಿ ಭಾಗವಹಿಸುವ ಎಲ್ಲ ಭಕ್ತರಿಗೂ. ಅನ್ನದಾಸೋಹ ಇರುತ್ತದೆ. ಸರ್ವರೂ ಶಾಂತಿ- ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ವರ್ತಿಸಬೇಕು. ಬೃಹತ್ ಶೋಭಾಯಾತ್ರೆಯನ್ನು ಯಶಸ್ವಿಗೊಳಿಸಲು ಮುಂದಾಗಬೇಕೆಂದು ಹಿಂದೂ ಮಹಾಗಣಪತಿ ಉತ್ಸವ ಸಮಿತಿಯ ಅಧ್ಯಕ್ಷ ಸುರೇಶ್ ಪೈ ಚಂದಾಪುರ ವಿನಂತಿಸಿದ್ದಾರೆ.- - -
-3ಎಚ್.ಆರ್.ಆರ್1:ಹಿಂದೂ ಮಹಾಗಣಪತಿ ಹಾಗೂ ಸಾರ್ವಜನಿಕ ವಿನಾಯಕ ಸಂಘದಿಂದ ಅ.4ರಂದು ನಡೆಯುವ ಬೃಹತ್ ಶೋಭಾ ಯಾತ್ರೆಗೆ ಹರಿಹರ ನಗರ ಅತ್ಯಾಕರ್ಷಕವಾಗಿ ಶೃಂಗಾರಗೊಳಿಸಲಾಗಿದೆ.