ಸಾರಾಂಶ
ಜ.21ರ ಸಂಜೆ 6 ಕ್ಕೆ ಸಿದ್ದವೀರಪ್ಪ ಬಡಾವಣೆಯ ಮೂರನೇ ಕ್ರಾಸ್‌ನಿಂದ ಪ್ರಾರಂಭವಾಗುವ ಪಂಜಿನ ಮೆರವಣಿಗೆಗೆ ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡುವರು. ಬಿಐಇಟಿ ರಸ್ತೆ, ಬಾಪೂಜಿ ಪ್ರೌಢಶಾಲಾ, ಮಾಮಾಸ್ ಜಾಯಿಂಟ್, ಆಂಜನೇಯ ಬಡಾವಣೆ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಗುವುದು.
ಅಯೋಧ್ಯೆ ಶ್ರೀರಾಮಮಂದಿರ ಲೋಕಾರ್ಪಣೆ ಹಿನ್ನೆಲೆ । ಶ್ರೀ ಓಂಕಾರ ಸ್ವಾಮೀಜಿ ಚಾಲನೆ
ಕನ್ನಡಪ್ರಭ ವಾರ್ತೆ ದಾವಣಗೆರೆಅಯೋಧ್ಯೆಯಲ್ಲಿ ಜ.22ರಂದು ಶ್ರೀರಾಮಮಂದಿರದ ಉದ್ಘಾಟನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ವಿನಾಯಕ ಗೆಳೆಯರ ಬಳಗ, ಯಶಸ್ವಿ ಯುವಕರ ಸಂಘ, ಸಾಧನಾ ಮಹಿಳಾ ಸಂಘ, ನಾಗರಿಕರ ಹಿತರಕ್ಷಣಾ ಸಮಿತಿ ಸಹಯೋಗದೊಂದಿಗೆ ಜ.21ರಂದು ಭಾವೈಕ್ಯತಾ ಪಂಜಿನ ಮೆರವಣಿಗೆ, 22ರಂದು ಸಿಹಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನ್ಯಾಯವಾದಿ ಕೆ.ಜಿ.ಕೆ.ಸ್ವಾಮಿ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ.21ರ ಸಂಜೆ 6 ಕ್ಕೆ ಸಿದ್ದವೀರಪ್ಪ ಬಡಾವಣೆಯ ಮೂರನೇ ಕ್ರಾಸ್‌ನಿಂದ ಪ್ರಾರಂಭವಾಗುವ ಪಂಜಿನ ಮೆರವಣಿಗೆಗೆ ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡುವರು. ಬಿಐಇಟಿ ರಸ್ತೆ, ಬಾಪೂಜಿ ಪ್ರೌಢಶಾಲಾ, ಮಾಮಾಸ್ ಜಾಯಿಂಟ್, ಆಂಜನೇಯ ಬಡಾವಣೆ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಗುವುದು ಎಂದರು.ಅಯೋಧ್ಯೆಯಲ್ಲಿ ಸೋಮವಾರ ಶ್ರೀ ರಾಮಮಂದಿರ ಉದ್ಘಾಟನೆ ಅಂಗವಾಗಿ ಬಿಐಇಟಿ ರಸ್ತೆಯ ದಿವ್ಯ ಟ್ರಾವೆಲ್ ಮುಂಭಾಗದಲ್ಲಿ ಸಿಹಿ ವಿತರಿಸಲಾಗುತ್ತದೆ ಎಂದರು.
ಭಾವೈಕ್ಯತಾ ಪಂಜಿನ ಮೆರವಣಿಗೆಗೆ ಪಕ್ಷ, ಜಾತಿ, ಮತ, ಪಂಥದ ಯಾವುದೇ ಭೇದಭಾವ ಇಲ್ಲ. ಶುಭ ಕೋರಿ ಹಮ್ಮಿಕೊಂಡಿರುವ ಭಾವೈಕ್ಯತಾ ಪಂಜಿನ ಮೆರವಣಿಗೆಯಲ್ಲಿ ಸಿದ್ದವೀರಪ್ಪ ಬಡಾವಣೆಯ ಮೂರನೇ ತಿರುವಿನ ಕುಟುಂಬದವರು ಇತರರು ಭಾಗವಹಿಸುವರು ಎಂದರು.ಸುದ್ದಿಗೋಷ್ಠಿಯಲ್ಲಿ ಎಂ.ಸಿ.ಶ್ರೀನಿವಾಸ್, ನಾಗರಾಜ್ ಚಿಟ್ಟಕ್ಕಿ, ಸಿದ್ದೇಶ್, ಜಸ್ಟಿನ್ ಜಯಕುಮಾರ್ ಇದ್ದರು.