ಶ್ರೀರಾಂಪುರದ ನಾಗೇಶ್‌ ದೀಕ್ಷಿತ್‌ ಮನೆಯಲ್ಲಿ ಬೊಂಬೆ ಜೋಡಣೆ

| Published : Oct 08 2024, 01:03 AM IST

ಸಾರಾಂಶ

ಹಲವಾರು ವರ್ಷಗಳಿಂದ ಈ ಬೊಂಬೆಗಳ ಜೋಡಣೆ ಮಾಡುತ್ತಿದ್ದು, ತಾಂಜವೂರು, ಮೈಸೂರು ಹಾಗೂ ಇತರೆಡೆಗಳಿಂದ ಬೊಂಬೆಗಳನ್ನು ಸಂಗ್ರಹಿ

ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ದಸರಾ ಮಹೋತ್ಸವ, ನವರಾತ್ರಿ ಅಂಗವಾಗಿ ನಗರದ ಶ್ರೀರಾಂಪುರದಲ್ಲಿರುವ ಜಿ.ಎಸ್‌. ನಾಗೇಂದ್ರ ದೀಕ್ಷಿತ್‌ ಅವರ ನಿವಾಸದಲ್ಲಿ ಬೊಂಬೆಗಳ ಜೋಡಣೆ ಮಾಡಿದ್ದಾರೆ.ಈ ಬಾರಿ ಅನಂತ ನಾರಾಯಣ, ಸುಂದರೇಶ್ವರ ಸ್ವಾಮಿ, ಮಧುರೈ ಮೀನಾಕ್ಷಿ ಬೊಂಬೆಗಳು ವಿಶೇಷ ಆಕರ್ಷಣಿಯವಾಗಿದ್ದು, ವೈಕುಂಠ ನಾರಾಯಣವನ್ನು ನಿರ್ಮಿಸಿದ್ದಾರೆ. ಹಲವಾರು ವರ್ಷಗಳಿಂದ ಈ ಬೊಂಬೆಗಳ ಜೋಡಣೆ ಮಾಡುತ್ತಿದ್ದು, ತಾಂಜವೂರು, ಮೈಸೂರು ಹಾಗೂ ಇತರೆಡೆಗಳಿಂದ ಬೊಂಬೆಗಳನ್ನು ಸಂಗ್ರಹಿಸಿ ಈ ಒಂದು ಬೊಂಬೆ ಮನೆ ನಿರ್ಮಿಸಿದ್ದಾರೆ. ಈ ಬೊಂಬೆ ಮನೆ ಪ್ರದರ್ಶನದಲ್ಲಿ ಮಹಾಕಾಳಿ, ಮಹಾಲಕ್ಷ್ಮೀ, ಮಹಾ ಸರಸ್ವತಿ, ಸುಬ್ರಮಣ್ಯ, 6 ಮುಖವಿರುವ ಷಣ್ಮುಖ, ಗಣೇಶನ ವಿವಾಹದ ಒಂದು ನೋಟ ಹೀಗೆ 200 ಕ್ಕೂ ಹೆಚ್ಚು ಬೊಂಬೆಗಳನ್ನು ಪ್ರದರ್ಶಿಸಿದ್ದಾರೆ. ದೀಕ್ಷಿತ್‌ ಪುತ್ರರಾದ ನಾಗೇಂದ್ರ ದೀಕ್ಷಿತ್‌ ಹಾಗೂ ಹೇಮಂತ್‌ ದೀಕ್ಷಿತ್‌, ಮೊಮ್ಮಕ್ಕಳು ಸಹ ಬೊಂಬೆಗಳ ಜೋಡಣೆಗೆ ಕೈಜೋಡಿಸಿದ್ದಾರೆ.

-------------