- ಸತ್ತೇಗಾಲದ ಅಗ್ರಹಾರ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ನಾಮಫಲಕ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಗುಣಮಟ್ಟದ ಹಾಲು ಪೂರೈಸುವ ಜೊತೆಗೆ ಸರ್ಕಾರ ಹೈನುಗಾರಿಕೆಗಾಗಿ ನೀಡುವ ಪ್ರೋತ್ಸಾಹವನ್ನು ರೈತರು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಹೇಳಿದರು.ತಾಲೂಕಿನ ಸತ್ತೇಗಾಲ ಗ್ರಾಮದಲ್ಲಿ ಅಗ್ರಹಾರ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ನಾಮಫಲಕ ಅನಾವರಣ ಹಾಗೂ ಹಾಲು ಶೇಖರಣೆಗೆ ಚಾಲನೆ ನೀಡಿ ಮಾತನಾಡಿದರು. ಹಾಲು ಉತ್ಪಾದಕರು ಗುಣಮಟ್ಟದ ಹಾಲು ಸಂಘಕ್ಕೆ ಪೂರೈಸುವ ಮೂಲಕ ಸಂಘದ ಆರ್ಥಿಕತೆ ಹಾಗೂ ಉತ್ಪಾದಕರ ಏಳ್ಗೆಗೆ ಸ್ಪಂದಿಸುವಂತಾಗಬೇಕು.ಇದರ ಜೊತೆಗೆ ಒಕ್ಕೂಟ ಹಾಗೂ ಸರ್ಕಾರದಿಂದ ಬರುವ ಸೌಲಭ್ಯವನ್ನು ಹೆಚ್ಚಿನ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು. ಹಸುಗಳಿಗೆ ವಿಮೆ, ಹಾಲು ಉತ್ಪಾದಕರ ಗುಂಪು ವಿಮೆ, ಒಕ್ಕೂಟದ ಬಡ್ಡಿ ರಹಿತ ಸಾಲ, ಕ್ಷೀರ ಸಂಜೀವಿನಿ ಯೋಜನೆಯಡಿ ಸಿಗುವ ಸೌಲಭ್ಯಗಳನ್ನು ಪಡೆದು ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ರೀತಿಯಲ್ಲಿ ಅನುಕೂಲ ಪಡೆದುಕೊಳ್ಳುವಂತೆ ಹೇಳಿದರು.ನಮ್ಮ ಒಕ್ಕೂಟದಿಂದ ಹಾಲು ಉತ್ಪಾದಕರು ಆಡಳಿತ ಮಂಡಳಿಯ ಸದಸ್ಯರಿಗೆ 3 ದಿನಗಳ ತರಬೇತಿ ಕಾರ್ಯಾಗಾರವನ್ನು ಮೈಸೂರಿನ ಆಲನಹಳ್ಳಿ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.ಈ ವೇಳೆ ನಿರ್ದೇಶಕಿ ಶೀಲಾ ಪುಟ್ಟರಂಗಶೆಟ್ಟಿ, ಚಾಮುಲ್ ವಿಸ್ತರಣಾಧಿಕಾರಿ ಬಿ. ಸೋಮಶೇಖರ್‌, ಶ್ರೀನಿವಾಸ್ ಪ್ರಸಾದ್‌ .ಎಚ್.ಸಿ, ಸಂಘದ ಅಧ್ಯಕ್ಷರಾದ ಆರ್‌. ರಾಧ, ಕಾರ್ಯದರ್ಶಿ ರಕ್ಷಿತಾ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ್‌, ಸತ್ತೇಗಾಲ ಗ್ರಾಮ ಘಟಕದ ಅಧ್ಯಕ್ಷ ಮಹದೇವು, ಕಾರ್ಯದರ್ಶಿ ಪುಟ್ಟೆಗೌಡ, ರಾಮೇಗೌಡ, ಅಭಿ, ಲತಾ, ಕೃಷ್ಣ, ನಾಗೇಂದ್ರ, ಸುಂದ್ರಪ್ಪ ಸುರೇಶ್ ಇದ್ದರು.--27ಕೆಜಿಎಲ್ 17

ಸತ್ತೇಗಾಲ ಅಗ್ರಹಾರ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ನಾಮಫಲಕ ಅನಾವರಣ ಹಾಗೂ ಹಾಲು ಶೇಖರಣೆಗೆ ಚಾಮುಲ್‌ ಅಧ್ಯಕ್ಷ ನಂಜುಂಡ ಸ್ವಾಮಿ ಚಾಲನೆ ನೀಡಿದರು. ಶೀಲಾ ಪುಟ್ಟರಂಗಶೆಟ್ಟಿ, ಸೋಮಶೇಖರ್‌, ಭಾಸ್ಕರ್‌, ಮಹದೇವು ಇದ್ದರು.