2003ರಿಂದ ಬೇಂದ್ರೆಯವರ ಹೆಸರಿನಲ್ಲಿ ನಾಡಿನ ಶ್ರೇಷ್ಠ ಕವಿ, ವಿಮರ್ಶಕ, ಸಾಹಿತಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯನ್ನು ಜ. 31ರ ಸಂಜೆ 5ಕ್ಕೆ ಸಾಧನಕೇರಿ ಬೇಂದ್ರೆ ಭವನದಲ್ಲಿ ಸಂಸ್ಕೃತಿ ಚಿಂತಕ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಪ್ರದಾನ ಮಾಡುವರು. ಪ್ರಶಸ್ತಿ ಮೊತ್ತ ತಲಾ ₹ 50 ಸಾವಿರ, ಪ್ರಶಸ್ತಿ ಫಲಕ, ಫಲ-ಪುಷ್ಪಗಳನ್ನೊಳಗೊಂಡಿರುತ್ತದೆ.
ಧಾರವಾಡ:
ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಪ್ರತಿ ವರ್ಷ ದ.ರಾ. ಬೇಂದ್ರೆ ಜನ್ಮದಿನ ಜ. 31ರಂದು ಕೊಡ ಮಾಡುವ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಗೆ ಈ ಬಾರಿ ಹಿರಿಯ ಸಾಹಿತಿ ಧಾರವಾಡದ ಪ್ರೊ. ಮಾಲತಿ ಪಟ್ಟಣಶೆಟ್ಟಿ ಹಾಗೂ ಹಿರಿಯ ಕವಿ, ಹಾವೇರಿಯ ಸತೀಶ ಕುಲಕರ್ಣಿ ಅವರನ್ನು ಆಯ್ಕೆ ಮಾಡಲಾಗಿದೆ.ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಟ್ರಸ್ಟ್ ಅಧ್ಯಕ್ಷ ಸರಜೂ ಕಾಟ್ಕರ್, 2003ರಿಂದ ಬೇಂದ್ರೆಯವರ ಹೆಸರಿನಲ್ಲಿ ನಾಡಿನ ಶ್ರೇಷ್ಠ ಕವಿ, ವಿಮರ್ಶಕ, ಸಾಹಿತಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯನ್ನು ಜ. 31ರ ಸಂಜೆ 5ಕ್ಕೆ ಸಾಧನಕೇರಿ ಬೇಂದ್ರೆ ಭವನದಲ್ಲಿ ಸಂಸ್ಕೃತಿ ಚಿಂತಕ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಪ್ರದಾನ ಮಾಡುವರು. ಪ್ರಶಸ್ತಿ ಮೊತ್ತ ತಲಾ ₹ 50 ಸಾವಿರ, ಪ್ರಶಸ್ತಿ ಫಲಕ, ಫಲ-ಪುಷ್ಪಗಳನ್ನೊಳಗೊಂಡಿರುತ್ತದೆ. ಅತಿಥಿಗಳಾಗಿ ಹಿರಿಯ ಚಿಂತಕ ಪ್ರೊ. ಐ.ಜಿ. ಸನದಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್. ಚನ್ನೂರ ಆಗಮಿಸುವರು ಎಂದರು.
ಪ್ರಶಸ್ತಿ ಪುರಸ್ಕೃತ ಪ್ರೊ. ಮಾಲತಿ ಪಟ್ಟಣಶೆಟ್ಟಿ ಕುರಿತು ಸಾಹಿತಿ ಹಾಗೂ ಟ್ರಸ್ಟ್ ಸದಸ್ಯರಾದ ಡಾ. ಶರಣಮ್ಮ ಗೊರೇಬಾಳ ಹಾಗೂ ಸತೀಶ ಕುಲಕರ್ಣಿ ಕುರಿತು ಸಾಹಿತಿ ಹಾಗೂ ಟ್ರಸ್ಟ್ ಸದಸ್ಯ ಡಾ. ವೈ.ಎಂ. ಯಾಕೊಳ್ಳಿ ಅಭಿನಂದನಾ ಪರ ಮಾತನಾಡಲಿದ್ದಾರೆ. ವಿದುಷಿ ಭಾರ್ಗವಿ ಕುಲಕರ್ಣಿ ಹಾಗೂ ಗಾಯತ್ರಿ ಟೊಣಪಿ ಮತ್ತು ತಂಡದವರು ಡಾ. ದ.ರಾ. ಬೇಂದ್ರೆ ಗೀತ ಗಾಯನ ಪ್ರಸ್ತುತ ಪಡಿಸಲಿದ್ದಾರೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ, ಸದಸ್ಯರಾದ ಡಾ. ವೈ.ಎಂ. ಯಾಕೊಳ್ಳಿ, ಡಾ. ಅಶೋಕ ಶೆಟ್ಟರ, ಡಾ. ಶರಣಮ್ಮ ಗೊರೇಬಾಳ, ಪ್ರಭು ಕುಂದರಗಿ, ಇಮಾಮಸಾಬ್ ವಲ್ಲೆಪ್ಪನವರ, ಟ್ರಸ್ಟ್ ವ್ಯವಸ್ಥಾಪಕ ಪ್ರಕಾಶ ಬಾಳಿಕಾಯಿ ಇದ್ದರು.