ಸಾರಾಂಶ
ಪೊನ್ನಂಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಹೊಸ ಆಡಳಿತ ಮಂಡಳಿಯ ಅಧ್ಯಕ್ಷೆಯಾಗಿ ಪ್ರೊ. ಇಟ್ಟಿರ ಕಮಲಾಕ್ಷಿ ಬಿದ್ದಪ್ಪ ಅವಿರೋಧವಾಗಿ ಆಯ್ಕೆಯಾದರು.
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಪೊನ್ನಂಪೇಟೆ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಹೊಸ ಆಡಳಿತ ಮಂಡಳಿಯ ಅಧ್ಯಕ್ಷೆಯಾಗಿ ಪ್ರೊ.ಇಟ್ಟೀರ ಕಮಲಾಕ್ಷಿ ಬಿದ್ದಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಕೊಡವ ಸಮಾಜದ ಅಧ್ಯಕ್ಷರಾದ ಕಾಳಿಮಾಡ ಮೋಟಯ್ಯ, ಗೌರವ ಕಾರ್ಯದರ್ಶಿ ಕೋಟೇರ ಕಿಶನ್ ಉತ್ತಪ್ಪ, ಉಪಾಧ್ಯಕ್ಷೆ ಮತ್ತು ಪೊಮ್ಮಕ್ಕಡ ಕೂಟದ ನಾಮ ನಿರ್ದೇಶಕರು ಚಿರಿಯಪಂಡ ಇಮ್ಮಿ ಉತ್ತಪ್ಪ, ನಿರ್ದೇಶಕರು ಮತ್ತು ನಾಮನಿರ್ದೇಶಕರಾದ ಮೂಕಳೇರ ಕಾವ್ಯ ಮಧು, ಸಮಾಜದ ನಿರ್ದೇಶಕಿ ಗುಮ್ಮಟ್ಟಿರ ಗಂಗಮ್ಮ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಆಕಾಂಕ್ಷಿಗಳಾದ ಪ್ರೊ:ಇಟ್ಟೀರ ಕಮಲಾಕ್ಷಿ ಬಿದ್ದಪ್ಪ ಮತ್ತು ಕೊಣಿಯಂಡ ಕಾವ್ಯ ಸೋಮಯ್ಯ ಇದ್ದರಿಂದ ಇಬ್ಬರಿಗೂ ತಲಾ ಒಂದೂವರೆ ವರ್ಷದ ಅಧಿಕಾರ ಅವಧಿಗೆ ತೀರ್ಮಾನ ಮಾಡಲಾಯಿತು.ಮೊದಲ ಅವಧಿಗೆ ಪ್ರೊ:ಇಟ್ಟೀರ ಕಮಲಾಕ್ಷಿ ಬಿದ್ದಪ್ಪ ,ಎರಡನೇ ಅವಧಿಗೆ ಕೊಣಿಯಂಡ ಕಾವ್ಯ ಸೋಮಯ್ಯ ಅವರನ್ನು ಅಧ್ಯಕ್ಷರಾಗಿ ಆಯ್ಕೆಮಾಡಲಾಯಿತು.
ಆಡಳಿತ ಮಂಡಳಿಯ ಪದಾಧಿಕಾರಿಗಳಾಗಿ ಉಪಾಧ್ಯಕ್ಷೆಯಾಗಿ ಮೀದೇರಿರ ಕವಿತ ರಾಮು, ಗೌರವ ಕಾರ್ಯದರ್ಶಿ, ಬಲ್ಲಡಿಚಂಡ ಕಸ್ತೂರಿ ಸೋಮಯ್ಯ,ಜಂಟಿ ಕಾರ್ಯದರ್ಶಿಯಾಗಿ ಮೂಕಳೇರ ಆಶಾ ಪೂಣಚ್ಚ, ಖಜಾಂಚಿಯಾಗಿ ಮೂಕಳೇರ ಲೀಲಾವತಿ (ಪಟ್ಟು), ನಿರ್ದೇಶಕರುಗಳಾಗಿ
ಕೊಟ್ಟಂಗಡ ವಿಜು ದೇವಯ್ಯ, ಚೆಕ್ಕೇರ ವಾಣಿ ಸಂಜು, ಮಾಣಿಯಪಂಡ ಪಾರ್ವತಿ ಜೋಯಪ್ಪ, ಬಲ್ಯಮೀದೇರಿರ ಆಶಾ ಶಂಕರ್ ಆಯ್ಕೆಮಾಡಲಾಯಿತು.