ಪ್ರೊ. ಎಂಡಿಎನ್‌ ಹುಟ್ಟುಹಬ್ಬವನ್ನು ರೈತರ ಹೋರಾಟದ ದಿನವಾಗಿ ಆಚರಣೆ: ಹಳಿಯೂರು ಸೋಮಶೇಖರ್

| Published : Feb 14 2025, 12:34 AM IST

ಪ್ರೊ. ಎಂಡಿಎನ್‌ ಹುಟ್ಟುಹಬ್ಬವನ್ನು ರೈತರ ಹೋರಾಟದ ದಿನವಾಗಿ ಆಚರಣೆ: ಹಳಿಯೂರು ಸೋಮಶೇಖರ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಪ್ರೊಫೆಸರ್ ಎಂ. ಡಿ. ನಂಜುಂಡಸ್ವಾಮಿ ಅವರ ಹುಟ್ಟುಹಬ್ಬದ ಸವಿನೆನಪಿಗೆ ರೈತರ ಹೋರಾಟದ ದಿನವನ್ನಾಗಿ ಆಚರಿಸುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಹಳಿಯೂರು ಸೋಮಶೇಖರ್ ಹೇಳಿದರು.

ಪ್ರೊ. ಎಂ ಡಿ ನಂಜುಂಡಸ್ವಾಮಿಯವರ 89ನೇ ವರ್ಷದ ಜನುಮದಿನ ಆಚರಣೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಪ್ರೊಫೆಸರ್ ಎಂ. ಡಿ. ನಂಜುಂಡಸ್ವಾಮಿ ಅವರ ಹುಟ್ಟುಹಬ್ಬದ ಸವಿನೆನಪಿಗೆ ರೈತರ ಹೋರಾಟದ ದಿನವನ್ನಾಗಿ ಆಚರಿಸುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಹಳಿಯೂರು ಸೋಮಶೇಖರ್ ಹೇಳಿದರು.ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತರೀಕೆರೆ ತಾಲೂಕು ವತಿಯಿಂದ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ನಡೆದ ಪ್ರೊ. ಎಂ. ಡಿ. ನಂಜುಂಡಸ್ವಾಮಿ ಅವರ 89ನೇ ವರ್ಷದ ಜನುಮ ದಿನದ ಆಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿದರು. ಪ್ರೊ. ಎಂ. ಡಿ. ನಂಜುಂಡಸ್ವಾಮಿ ಈ ಯುಗದ ಜಗದ ರೈತ ಸಂಘವನ್ನು ಹುಟ್ಟು ಹಾಕಿದರು. ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರು ಪ್ರಶಸ್ತಿ, ಸನ್ಮಾನಕ್ಕೆ ಆಸೆ ಪಡದೆ ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡಿದರು. ನಮ್ಮ ರೈತರು ಬೆಳೆದ ವಿವಿಧ ಬೆಳೆಗಳಿಗೆ ಸಮರ್ಪಕ ಬೆಲೆ ಸಿಗುತ್ತಿಲ್ಲ. ರೈತರನ್ನು ಗೌರವ ದಿಂದ ನೋಡಬೇಕು. ದುಡಿಯುವ ವರ್ಗ, ಸ್ವಾಭಿಮಾನದಿಂದ ಬದುಕುವವರನ್ನು ಗೌರವಿಸಬೇಕು. ಒಳ್ಳೆಯವರ ಪರವಾಗಿ ಹೋರಾಡಬೇಕು. ಪ್ರೊ. ಎಂ. ಡಿ. ನಂಜುಂಡಸ್ವಾಮಿ ಹೆಸರು ಮತ್ತು ವಿಚಾರ ಶಾಶ್ವತವಾಗಿರುತ್ತದೆ ಎಂದರು

ಶ್ರೀಗಂಧ ಬಳೆಗಾರ ಟಿ.ಎನ್. ವಿಶುಕುಮಾರ್ ಮಾತನಾಡಿ ರಾಜ್ಯದಲ್ಲಿ ಮೊದಲ ಬಾರಿಗೆ ನಾನು ಮುಕ್ತವಾಗಿ ಶ್ರೀಗಂಧ ಬೆಳೆದಿದ್ದೇನೆ. ಮೂರು ಮುಕ್ಕಾಲು ಎಕರೆ ಪ್ರದೇಶದಲ್ಲಿ ಶ್ರೀಗಂಧ ಬೆಳೆದಿದ್ದೇನೆ. ವಸತಿಗೃಹಗಳ ಬಡಾವಣೆಯಲ್ಲಿ ಶ್ರೀಗಂಧ ಬೆಳೆದಿದ್ದೇನೆ. ಅರಣ್ಯ ಇಲಾಖೆ ನಮಗೆ ಮಾತೃ ಇಲಾಖೆ, ಎಕರೆಗೆ 400 ಗಿಡ ಬೆಳೆಸಬೇಕು ಎಂದು ಹೇಳುತ್ತಾರೆ. ಶ್ರೀಗಂಧ ಬೆಳಸುವುದಕ್ಕೆ ಮತ್ತು ದರ ನಿಗದಿಗೆ ಇಡೀ ರಾಜ್ಯದಲ್ಲಿ ಏಕಮಾನ ದಂಡ ಇರಬೇಕು ಎಂದು ಹೇಳಿದರು.ರೈತ ಮುಖಂಡ ಮೂಡ್ಲಗಿರಿಯಪ್ಪ ಮಾತನಾಡಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಒಡನಾಟದಲ್ಲಿ ಅನೇಕ ಚಳುವಳಿ ಮಾಡಿದ್ದೇವೆ. ಅವರು ಅತ್ಯಂತ ಕಠೋರವಾದ ನಿರ್ಧಾರ ಕೈಗೊಂಡು ಹೋರಾಟ ಮಾಡಿದ್ದಾರೆ. ಅವರ ಜೊತೆ ಹೋರಾಟ ದಲ್ಲಿ ಭಾಗವಹಿಸಿದ್ದು ನನ್ನ ಪುಣ್ಯ. ಮುಂದಿನ ದಿನಗಳಲ್ಲಿ ಕೃಷಿ ಕೂಲಿ ಕಾರ್ಮಿಕರಿಗೆ ಬಡವರಿಗೆ ಅನ್ಯಾಯವಾದಾಗ ಅವರ ಪರವಾಗಿ ನಿಲ್ಲಲು ಸದಾ ಸಿದ್ಧವಾಗಿರುತ್ತೇನೆ ಎಂದು ಹೇಳಿದರು.

ರೈತ ಮುಖಂಡ ಮನೋಹರ್ ಮಾತನಾಡಿ ಹೋರಾಟಗಾರರು ಅಜರಾಮರ ಎಂದರು. ಷಣ್ಮುಖಪ್ಪ, ಗುಳ್ಳದಮನೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ತೀರ್ಧೇಶಪ್ಪ, ಕಡೂರು ತಾಲೂಕು ರೈತ ಸಂಘದ ಅಧ್ಯಕ್ಷ ಬಾಸೂರು ರವಿ, ಭಾವಿಕೆರೆ ಕುಮಾರ್, ಶ್ರೀನಿವಾಸ್ , ಜಯರಾಮ್, ಧರ್ಮರಾಜ್, ಹೇಮಂತ್, ಮಹೇಶ್, ಸೋಮಶೇಖರಪ್ಪ ಮುದುಗುಂಡಿ ಲಿಂಗಾರಾಧ್ಯ, ಗೇರಮರಡಿ ಬಸವರಾಜ್ ಮತ್ತಿತರರು ಭಾಗವಹಿಸಿದ್ದರು.

13ಕೆಟಿಆರ್.ಕೆ.18ಃ

ತರೀಕೆರೆಯಲ್ಲಿ ನಡೆದ ಪ್ರೊ. ಎಂ ಡಿ ನಂಜುಂಡಸ್ವಾಮಿಯವರ 89ನೇ ವರ್ಷದ ಜನುಮದಿನ ಆಚರಣೆ ಕಾರ್ಯ ಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಹಳಿಯೂರು ಸೋಮಶೇಖರ್, ಶ್ರೀಗಂಧ ಬೆಳೆಗಾರರಾದ ಟಿ.ಎನ್.ವಿಶುಕುಮಾರ್ ಮತ್ತಿತರರು ಇದ್ದರು.