ಸಾರಾಂಶ
ಅಣಬೆ ಕೃಷಿ ತುಂಬಾ ಲಾಭದಾಯಕ ಮತ್ತು ಸ್ವ ಉದ್ಯೋಗಕ್ಕೆ ಒಂದು ದಾರಿಯಾಗಿದೆ. ಕಡಿಮೆ ಜಾಗದಲ್ಲಿ ಬೆಳೆಸಬಹುದಾದ ಒಂದು ಬೆಳೆ, ಇದು ಪೌಷ್ಟಿಕಾಂಶದ ದೃಷ್ಟಿಯಿಂದಲೂ ಮನುಷ್ಯನ ದೇಹಕ್ಕೆ ತುಂಬಾ ಆರೋಗ್ಯಕರ ವಾದ ಒಂದು ಆಹಾರ ಎಂದು ಶಿವಮೊಗ್ಗ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿ ಮನೋಜಿರಾವ್ ಮತ್ತು ನಿತೀಶ್ ಜಿ.ಬಿ. ಪ್ರಾತ್ಯಕ್ಷಿಕೆಯಲ್ಲಿ ತಿಳಿಸಿದರು.
ಕನ್ನಡಪ್ರಭ ವಾರ್ತೆ, ತರೀಕೆರೆ
ಅಣಬೆ ಕೃಷಿ ತುಂಬಾ ಲಾಭದಾಯಕ ಮತ್ತು ಸ್ವ ಉದ್ಯೋಗಕ್ಕೆ ಒಂದು ದಾರಿಯಾಗಿದೆ. ಕಡಿಮೆ ಜಾಗದಲ್ಲಿ ಬೆಳೆಸಬಹುದಾದ ಒಂದು ಬೆಳೆ, ಇದು ಪೌಷ್ಟಿಕಾಂಶದ ದೃಷ್ಟಿಯಿಂದಲೂ ಮನುಷ್ಯನ ದೇಹಕ್ಕೆ ತುಂಬಾ ಆರೋಗ್ಯಕರ ವಾದ ಒಂದು ಆಹಾರ ಎಂದು ಶಿವಮೊಗ್ಗ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿ ಮನೋಜಿರಾವ್ ಮತ್ತು ನಿತೀಶ್ ಜಿ.ಬಿ. ಪ್ರಾತ್ಯಕ್ಷಿಕೆಯಲ್ಲಿ ತಿಳಿಸಿದರು.ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಗ್ರಾಮೀಣ ಕೃಷಿ ಕಾರ್ಯನುಭವದಡಿ ಅಂತಿಮ ವರ್ಷದ ಬಿ.ಎಸ್ಸಿ (ಕೃಷಿ) ವಿದ್ಯಾರ್ಥಿಗಳಿಂದ ಬಾವಿಕೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಣಬೆ ಕೃಷಿ ಪ್ರಾತ್ಯ ಕ್ಷಿಕೆ ಯಲ್ಲಿ ಮಾಹಿತಿ ನೀಡಿದ ಅವರು, ಆದುದರಿಂದ ಮನೆ ಹೆಣ್ಣುಮಕ್ಕಳು ಇದನ್ನು ತಮ್ಮ ದೈನಂದಿನ ಕೆಲಸದೊಂದಿಗೆ ಈ ಅಣಬೆ ಕೃಷಿ ಸಹ ಮಾಡಬೇಕು. ಅಣಬೆ ಕೃಷಿಗೆ ಬೇಕಾಗುವ ಬೀಜ ಮತ್ತು ಬೇರೆ ಕಚ್ಚಾ ವಸ್ತುಗಳನ್ನು ವಿವರವಾಗಿ ತಿಳಿಸಿಕೊಟ್ಟು ಮನೆ ಹೆಣ್ಣು ಮಕ್ಕಳು ಇದನ್ನು ಅವಶ್ಯವಾಗಿ ತಮ್ಮ ಮನೆ ಮಟ್ಟಿಗಾದರೂ ಮಾಡಬೇಕೆಂದು ತಿಳಿಸಿದರು.
ಅಣಬೆ ಬೀಜದ ಲಭ್ಯತೆ ಹಾಗೂ ಅಣಬೆ ಕೃಷಿ ಬಗ್ಗೆ ಹೆಚ್ಚಿನ ಮಾಹಿತಿ ಎಲ್ಲಿ ದೊರೆಯುತ್ತದೆ ಎಂಬ ಬಗ್ಗೆ ಪ್ರಾತ್ಯಕ್ಷಿಕೆಯಲ್ಲಿ ತಿಳಿಸಿದರು.ಅಣಬೆ ಕೃಷಿ ವಿಧಾನ: ಮೊದಲಿಗೆ ಒಣ ಬತ್ತದ ಹುಲ್ಲನ್ನು ಬೆರಳಿನ ಗಾತ್ರಕ್ಕೆ ಕತ್ತರಿಸಿ, ಹಿಂದಿನ ದಿನ ನೆನೆಸಿಟ್ಟು, ತಯಾರಿಸುವ ಎರಡು ಗಂಟೆ ಮೊದಲು ಕುದಿಯುವ ನೀರಿನಲ್ಲಿ 15 ನಿಮಿಷ ಬೇಯಿಸಿ ತಣ್ಣಗಾಗಿಸಬೇಕು, ನಂತರ ಒಂದು ಪ್ಲಾಸ್ಟಿಕ್ ಚೀಲದಲ್ಲಿ ತಯಾರಿಸಿದ ಹುಲ್ಲನ್ನು ಒಂದು ಪದರವಾಗಿ ಹಾಕಿ ಅದರ ಮೇಲಿನ ಬದಿಗಳಲ್ಲಿ ಅಣಬೆ ಬೀಜ ಹಾಕ ಬೇಕು, ಹೀಗೆ ಚೀಲ ತುಂಬುವವರೆಗೆ ಪದರವನ್ನು ಮಾಡಬೇಕು, ನಂತರ ಚೀಲವನ್ನು ಜೋರಾಗಿ ಒತ್ತಿ ಗಾಳಿಯನ್ನು ಆಚೆ ತೆಗೆದು ಗಟ್ಟಿಯಾಗಿ ಚೀಲವನ್ನು ಕಟ್ಟಿ ಚೀಲದಲ್ಲಿ ರಂಧ್ರಗಳನ್ನು ಮಾಡಬೇಕು ಹಾಗು ತಯಾರಿಸಿದ ಚೀಲವನ್ನು ಕತ್ತಲು ಕೋಣೆಯಲ್ಲಿ 18 ದಿನಗಳ ಕಾಲ ಇರಿಸಬೇಕು ನಂತರ ಇದನ್ನು ಬೆಳಕಿನಲ್ಲಿ ತಂದು ಬ್ಲೇಡ್ ನಿಂದ ಚೀಲವನ್ನು 4-5 ದಿಕ್ಕಿನಲ್ಲಿ ಸಣ್ಣದಾಗಿ ಹರಿದು ಇಟ್ಟು ಪ್ರತಿದಿನ ನೀರು ಚಿಮ್ಮಿಸಬೇಕು. ಹೀಗೆ ಮಾಡಿದ್ದಲ್ಲಿ ಐದು ದಿನದ ನಂತರ ಅಣಬೆ ಪಡೆಯಬಹುದಾಗಿದೆ ಎಂದು ತಿಳಿಸಲಾಯಿತು.ಪ್ರಾತ್ಯಕ್ಷಿಕೆಯಲ್ಲಿ ಲೆಕ್ಕ ಪರಿಶೋಧಕರಾದ ಭಾರತಿ, ಜ್ಞಾನವಿಕಾಸ ಧರ್ಮಸ್ಥಳ ಸಂಘದ ಮುಖ್ಯಸ್ಥೆ ನಂದಿನಿ, ಸಂಘದ ಸದಸ್ಯರು ಹಾಗೂ ಗ್ರಾಮೀಣ ಕೃಷಿ ಕಾರ್ಯನುಭವದ ವಿದ್ಯಾರ್ಥಿಗಳಾದ ಆದಿತ್ಯ, ಅನಿಂದ್ಯ ಪಾಲ್, ಭಾರತ್, ದೀಕ್ಷಿತ್, ರಾಜೇಂದ್ರ, ಶರತ್ ಮಾಳಗಿ, ಶರತ್ ಕುಮಾರ್, ಶ್ರೇಯಸ್, ಸುಷಾನ್, ವಿಶ್ವನಾಥ್ ಗೌಡ ಉಪಸ್ಥಿತರಿದ್ದರು.18ಕೆಟಿಆರ್.ಕೆ.1ಃಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಗ್ರಾಮೀಣ ಕೃಷಿ ಕಾರ್ಯನುಭವದಡಿ ಅಂತಿಮ ವರ್ಷದ ಬಿ.ಎಸ್ಸಿ (ಕೃಷಿ) ವಿದ್ಯಾರ್ಥಿಗಳಿಂದ ಬಾವಿಕೆರೆ ಗ್ರಾಮದಲ್ಲಿ ಅಣಬೆ ಕೃಷಿ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು.