ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಕರ್ನಾಟಕ ರಾಜ್ಯ ವೈಚಾರಿಕ ಚಿಂತಕರ ವೇದಿಕೆಯು ಎಂಐಟಿ ಪದವಿ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾಧಕರಿಗೆ ರಾಜ್ಯ ಜನಪದ ಸೇವಾ ರತ್ನ, ಯುವಕಲಾ ರತ್ನ ಪ್ರಶಸ್ತಿ ಪ್ರದಾನ ಮಾಡಿತು.ಜಾನಪದ ಸೇವಾರತ್ನ ಪ್ರಶಸ್ತಿಯನ್ನು ಸತ್ತೇಗಾಲ ಜಾನಪದ ಹಾಡುಗಾರ್ತಿ ಶಿವಮ್ಮ, ಬನ್ನೂರಿನ ಸೋಬಾನೆ ಹಾಡುಗಾರ್ತಿ ಮಂಚಮ್ಮ, ಮಾರಶೆಟ್ಟಹಳ್ಳಿಯ. ಕಂಸಾಳೆ ಕಲಾವಿದ ಮಾದೇವ, ಜಾನಪದ ಕ್ಷೇತ್ರದ ಕೊಡಗಿನ ಡಾ.ಕಾವೇರಿ ಪ್ರಕಾಶ್, ಜಾನಪದ ಸಾಹಿತ್ಯ ಕ್ಷೇತ್ರದ ಬೆಸೂರು ಮೋಹನ ಪಾಳೇಗಾರ್, ಜಾನಪದ ಸಂಘಟನೆಯ ರವಿಶಂಕರ್ ಜಿ. ಉಮ್ಮತ್ತೂರು, ಜಾನಪದ ಹಾಡುಗಾರ್ತಿಯರಾದ ಮೈಸೂರಿನ ಪನ್ನಗ ವಿಜಯಕುಮಾರ್, ತನುಜಾ ಅಶೋಕ್ ಹಾಗೂ ಗೀತಾ ಶ್ರೀಧರ್ ಅವರಿಗೆ ಪ್ರದಾನ ಮಾಡಲಾಯಿತು.ಜಾನಪದ ಯುವಕಲಾ ರತ್ನ ಪ್ರಶಸ್ತಿಯನ್ನು ಕೀಲಾರದ ಕೆ.ವಿ. ಶಂಕರಗೌಡ ಸ್ಮಾರಕ ಯುವಜನ ಸಂಘದ ಕೆ.ಎಸ್. ಮಹೇಶ, ಕೆ.ಎನ್. ಶಶಾಂಕ್, ಕೆ.ಎನ್. ರಶಿಪ್ರಕಾಶ್, ಕೆ.ಎಸ್. ಮಂಜುನಾಥ್, ಜಿ.ಬಿ. ಗೌತಮ್, ಕೆ.ಎಸ್. ಶಿವು, ಕೆ.ಎಸ್. ಯಶ್ವಂತ್, ಕೆ.ಎನ್. ಶಿವರುದ್ರ ಹಾಗೂ ಎಚ್.ಸಿ, ಚರಣ್ ಅವರಿಗೆ ಪ್ರದಾನ ಮಾಡಲಾಯಿತು. ಈ ತಂಡವು ರಾಷ್ಟ್ರ ಮಟ್ಟದಲ್ಲಿ ಜಾನಪದ ಗೀತಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ, ದ್ವಿತೀಯ ಸ್ಥಾನ ಗಳಿಸಿದೆ.ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಉದ್ಘಾಟಿಸಿದರು. ಮಹಾರಾಜ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಟಿ. ವಾಸುದೇವ್ ಅಧ್ಯಕ್ಷತೆ ವಹಿಸಿದ್ದರು.ಸಮಾಜ ಸೇವಕ ರಾಮಪ್ಪ ರಮೇಶ್ ಪ್ರಶಸ್ತಿ ಪ್ರದಾನ ಮಾಡಿದರು. ಎಂಐಟಿ ಪದವಿ ಕಾಲೇಜು ಪ್ರಾಂಶುಪಾಲ ಡಾ.ಬಿ. ಮಂಜು ಸ್ವಾಗತಿಸಿದರು. ವೇದಿಕೆಯ ಅಧ್ಯಕ್ಷ ಕ್ಯಾತನಹಳ್ಳಿ ಎಚ್. ಪ್ರಕಾಶ್ ಪ್ರಾಸ್ತಾವಿಕ ಭಾಷಣ ಮಾಡಿದರು. ಎಂಐಟಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ, ಜಿ.ಡಿ. ಶಿವರಾಜ್ ವಂದಿಸಿದರು. ವೀಕ್ಷಾ ಹುಲಗಾರು ಕಾರ್ಯಕ್ರಮ ನಿರೂಪಿಸಿದರು.ಓಂ ಶ್ರೀ ಸಾಯಿ ಟ್ರಸ್ಟ್ ಅಧ್ಯಕ್ಷೆ ಎಚ್.ಪಿ. ರಾಣಿಪ್ರಭಾ, ಎಂಐಟಿ ಆಡಳಿತಾಧಿಕಾರಿ ಅನಿರುದ್ಧ್, ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಕೆ.ಎಂ. ಮಹದೇವ, ಉಷಾ. ವೈಚಾರಿಕ ವೇದಿಕೆಯ ಎ.ಎಲ್. ಸುರೇಶ್ಚಂದ್ರ, ದೊರೆಸ್ವಾಮಿ, ಶಾಂತಿ, ವಸಂತಾ, ವೀರೇಶ್, ರಾಧಮ್ಮ ಇದ್ದರು.ರಂಜಿಸಿದ ಜನಪದ ಗೀತಗಾಯನಶಿವಮ್ಮ, ಮಂಚಮ್ಮ, ಕಂಸಾಳೆ ಮಹದೇವ, ಪನ್ನಗ ವಿಜಯಕುಮಾರ್, ತನುಜಾ ಅಶೋಕ್, ಗೀತಾ ಶ್ರೀಧರ್ ಅವರ ಜಾನಪದ ಗೀತಗಾಯನ ನಡೆಸಿಕೊಟ್ಟರು. ಮಲೆಮಹದೇಶ್ವರರನ್ನು ಕುರಿತ ಹಾಡುಗಳು, ಕಂಸಾಳೆ ಅಪಾರ ಮೆಚ್ಚುಗೆಗೆ ಪಾತ್ರವಾದವು.
ಕೋಟ್‌ಜಾನಪದ ಕಲೆ ಮರೆಯಾಗುತ್ತಿದೆ. ಜೊತೆಗೆ ಕುಲಕಸುಬುಗಳು ಕೂಡ ಕಣ್ಮರೆಯಾಗುತ್ತಿವೆ. ಯುವಪೀಳಿಗೆ ಇವುಗಳನ್ನು ಉಳಿಸಿ, ಬೆಳೆಸುವ ಕಡೆಗೆ ಗಮನ ನೀಡಬೇಕು.- ಡಾ.ಟಿ. ವಾಸುದೇವ್, ಕಾರ್ಯದರ್ಶಿ, ಎಂಐಟಿ--ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಜನಪದ ಕಲಾವಿದರನ್ನು ಗುರುತಿಸಿ, ಪ್ರಶಸ್ತಿ ನೀಡಬೇಕು.- ಕ್ಯಾತನಹಳ್ಳಿ ಎಚ್. ಪ್ರಕಾಶ್, ಅಧ್ಯಕ್ಷರು, ರಾಜ್ಯ ವೈಚಾರಿಕ ಚಿಂತಕರ ವೇದಿಕೆ---ಎಲ್ಲಾ ಸಾಹಿತ್ಯಕ್ಕೂ ಜನಪದವೇ ಮೂಲಬೇರು. ಇತರೆ ಕಲಾಪ್ರಕಾರಗಳಿಗಿಂತ ಜಾನಪದ ಹಾಡುಗಳು ಎಂಥವರನ್ನು ತಮ್ಮತ್ತ ಆಕರ್ಷಿಸಬಲ್ಲವು. ಚಲನಚಿತ್ರಗಳಲ್ಲಿ ಅಳವಡಿಸಿರುವ ಜನಪದ ಹಾಡುಗಳು ಸೂಪರ್ ಹಿಟ್ ಆಗಿವೆ. ಜನುಮದ ಜೋಡಿಯ ಕೋಲುಮಂಡೆ ಜಂಗಮದೇವ... ಇದಕ್ಕೆ ನಿದರ್ಶನ.- ಅಂಶಿ ಪ್ರಸನ್ನಕುಮಾರ್, ಹಿರಿಯ ಪತ್ರಕರ್ತ