ಸಾರಾಂಶ
ನಮ್ಮ ಆರೋಗ್ಯ ಕೈ ತೋಟದಲ್ಲಿ ಉತ್ತಮ ಆರೋಗ್ಯ - ಸಾವಯವ ಆಹಾರದಿಂದ ಕಾರ್ಯಕ್ರಮ ಹಳೆಯಂಗಡಿಯ ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ಸಭಾಭವನದಲ್ಲಿ ಸೆ. 28 ರಂದು ಬೆಳಗ್ಗೆ 10 ಗಂಟೆಗೆ ಜರುಗಲಿದೆ.
ಕನ್ನಡಪ್ರಭವಾರ್ತೆ ಮೂಲ್ಕಿ
ನಮ್ಮ ಆರೋಗ್ಯ ಕೈ ತೋಟದಲ್ಲಿ ಉತ್ತಮ ಆರೋಗ್ಯ - ಸಾವಯವ ಆಹಾರದಿಂದ ಕಾರ್ಯಕ್ರಮ ಹಳೆಯಂಗಡಿಯ ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ಸಭಾಭವನದಲ್ಲಿ ಸೆ. 28 ರಂದು ಬೆಳಗ್ಗೆ 10 ಗಂಟೆಗೆ ಜರುಗಲಿದೆ.ಪಡುಪಣಂಬೂರು ಸಹಕಾರಿ ವ್ಯವಸಾಯಿಕ ಸಂಘ ಹಳೆಯಂಗಡಿ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಳೆಯಂಗಡಿಯ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ, ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಜಂಟಿ ಆಶ್ರಯದಲ್ಲಿ ಹಳೆಯಗಂಡಿಯ ಶ್ರೀ ವಿದ್ಯಾವಿನಾಯಕ ರಜತ ಸೇವಾ ಟ್ರಸ್ಟ್ , ಕಿಶೋರ- ಕಿಶೋರಿ ಸಂಘ, ಶ್ರೀ ವಿದ್ಯಾವಿನಾಯಕ ಯುವಕ ಮಂಡಲ, ಯುವತಿ ಮತ್ತು ಮಹಿಳಾ ಮಂಡಲ, ಹಳೆಯಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಳೆಯಂಗಡಿಯ ಶ್ರೀ ನಾರಾಯಣ ಸನಿಲ್ ಸರ್ಕಾರಿ ಪದವಿ ಪೂರ್ವ ಕಾಲೇಜು ಸಹಕಾರದಲ್ಲಿ ನಡೆಯಲಿದೆ.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಪಡುಪಣಂಬೂರು ಸಹಕಾರಿ ವ್ಯವಸಾಯಿಕ ಸಂಘ ಹಳೆಯಂಗಡಿಯ ಅಧ್ಯಕ್ಷ ಎಸ್.ಎಸ್. ಸತೀಶ್ ಭಟ್ ಹಳೆಯಂಗಡಿ ವಹಿಸಲಿದ್ದು ಕಾರ್ಯಕ್ರಮವನ್ನು ಪದ್ಮಶ್ರೀ ಪುರಸ್ಕೃತ ಸಾಲು ಮರದ ತಿಮ್ಮಕ್ಕ ಅಭಿಮಾನಿ ಬಳಗ, ಪಕ್ಷಿಕೆರೆಯ ಮುಖ್ಯಸ್ತ ವಾಲ್ಟರ್ ಡಿಸೋಜಾ ಉದ್ಘಾಟಿಸಲಿದ್ದಾರೆ. ಸಾವಯವ ಕೃಷಿಕ ಗ್ರಾಹಕ ಬಳಗ ದ ಅಧ್ಯಕ್ಷ ಜಿ. ಆರ್. ಪ್ರಸಾದ್ , ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿಯ ಪ್ರಾಂಶುಪಾಲ ಡಾ. ಜಗದೀಶ್ ಎಸ್., ಶ್ರೀ ನಾರಾಯಣ ಸನಿಲ್ ಸರ್ಕಾರಿ ಪದವಿ ಪೂರ್ವ ಕಾಲೇಜು ಹಳೆಯಂಗಡಿಯ ಪ್ರಾಂಶುಪಾಲೆ ಜಯಶ್ರೀ ಪಿ., ಹಳೆಯಂಗಡಿಯ ವಿದ್ಯಾವಿನಾಯಕ ಯುವಕ ಮಂಡಲ ನ ಅಧ್ಯಕ್ಷ ನಾಗೇಶ್ ಟಿ.ಜಿ. ಪಡುಪಣಂಬೂರು ಸಹಕಾರಿ ವ್ಯವಸಾಯಿಕ ಸಂಘ ಹಳೆಯಂಗಡಿಯ ಕಾರ್ಯ ನಿರ್ವಹಣಾಧಿಕಾರಿ ಹಿಮಕರ್ ಉಪಸ್ಥಿತರಿರುವರು.ವಿವಿಧ ತರಕಾರಿ ಬೀಜಗಳ ಉಚಿತ ವಿತರಣೆ, ಬೆಳಗ್ಗೆ 10ರಿಂದ ಸಂಜೆ 5 ರ ವರೆಗೆ ಸ್ವಾವಲಂಬಿ ಸಂತೆ ಮತ್ತು ಗೃಹ ಉದ್ಯಮದ ವಿವಿಧ ವಸ್ತುಗಳ (ಉಪ್ಪಿನಕಾಯಿ,ಬಿದಿರಕ್ಕಿ, ಖಾದಿ ಶರ್ಟ್, ವಿವಿಧ ತರಕಾರಿ ಬೀಜ. ಗೋವಿನ ಮೌಲ್ಯ ವರ್ಧಿತ ಉತ್ಪನ್ನ, ವಿವಿಧ ಮಾರ್ಜನ ಸೊಪು, ಹಪ್ಪಳ, ಸೆಂಡಿಗೆ )ಮಾರಾಟ ಮತ್ತು ಪ್ರದರ್ಶನ ನಡೆಯಲಿದೆ. ನಮ್ಮ ಮನೆಯ ಅಲಂಕಾರಿಕ ಗಿಡಗಳ ಬಗ್ಗೆ ಸಾವಯವ ಕೃಷಿಕ ಗ್ರಾಹಕ ಬಳಗದ ಟ್ರಸ್ಟ್ನ ನಿರ್ದೇಶಕಿ ಸ್ವಪ್ನ ಅವಿನಾಶ್, ನಮ್ಮ ಮನೆಯ ವಿವಿಧ ತರಕಾರಿಗಳನ್ನು ನಾವೇ ಬೇಸಾಯ ಹೇಗೆ ಮಾಡಬಹುದು ಎಂಬುದರ ಕುರಿತು ಸಾವಯವ ಕೃಷಿಕ ಗ್ರಾಹಕ ಬಳಗದ ಟ್ರಸ್ಟ್ ನ ನಿರ್ದೇಶಕಿ ದಾಕ್ಷಾಯಿಣಿ ವಿಶ್ವೇಶ್ವರ ಮಾಹಿತಿ ನೀಡಲಿದ್ದಾರೆಂದು ಪ್ರಕಟಣೆ ತಿಳಿಸಿದೆ.