ನವಭಾರತ ನಿರ್ಮಾಣ ಟ್ರಸ್ಟ್ ನಿಂದ 29 ರಂದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಸಾಧಕರಿಗೆ ಸತ್ಕಾರ

| Published : Jun 29 2024, 12:36 AM IST

ನವಭಾರತ ನಿರ್ಮಾಣ ಟ್ರಸ್ಟ್ ನಿಂದ 29 ರಂದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಸಾಧಕರಿಗೆ ಸತ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಜೂ. 29ರ ಶನಿವಾರ ಸಂಜೆ 5ಕ್ಕೆ ವಿಜಯನಗರ ರೈಲ್ವೆ ಲೇಔಟ್ ಬಡಾವಣೆಯ ಇಂದಿರಾ ನರ್ಸಿಂಗ್ ಹೋಮ್ ಮುಂಭಾಗದ ರಂಗಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ನವಭಾರತ ನಿರ್ಮಾಣ ಟ್ರಸ್ಟ್ ಆಶ್ರಯದಲ್ಲಿ 2023-24ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜೂ. 29 ರಂದು ಸಾಧಕರಿಗೆ ಸತ್ಕಾರ ಎಂಬ ಹೆಸರಿನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿದೆ.

ಜೂ. 29ರ ಶನಿವಾರ ಸಂಜೆ 5ಕ್ಕೆ ವಿಜಯನಗರ ರೈಲ್ವೆ ಲೇಔಟ್ ಬಡಾವಣೆಯ ಇಂದಿರಾ ನರ್ಸಿಂಗ್ ಹೋಮ್ ಮುಂಭಾಗದ ರಂಗಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಿದೆ.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಉದ್ಘಾಟಿಸುವರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಭಾ ಪುರಸ್ಕಾರ ಪ್ರಧಾನ ಮಾಡುವರು. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ವಾಗ್ಮಿಗಳಾದ ಪ್ರೊ.ಎಂ. ಕೃಷ್ಣೇಗೌಡ, ಸುಧಾ ಬರಗೂರು ಮುಖ್ಯಅತಿಥಿಗಳಾಗಿರುವರು. ಶಾಸಕ ಕೆ. ಹರೀಶ್ ಗೌಡ ಅಧ್ಯಕ್ಷತೆ ವಹಿಸಲಿದ್ದು, ನವಭಾರತ ನಿರ್ಮಾಣ ಟ್ರಸ್ಟ್ ಅಧ್ಯಕ್ಷರಾದ, ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ. ಶ್ರೀಧರ್ ನೇತೃತ್ವ ವಹಿಸುವರು. ನಿತಿನ್ ರಾಜಾರಾಮ ಶಾಸ್ತ್ರಿ ಹಾಗೂ ತಂಡವದರು ಸುಗಮ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಲಿದ್ದಾರೆ.