ನಂಬಿಕೆ ಎಲ್ಲಕ್ಕಿಂತ ದೊಡ್ಡದು: ಕೆ. ರಘುರಾಂ

| Published : Jan 22 2024, 02:19 AM IST

ಸಾರಾಂಶ

ಮತ್ತೊಂದು ಹೆಸರೇ ಶ್ರೀರಾಮ. ಅಯೋಧ್ಯೆ ಎಂದರೆ ಯೋಧರಿಲ್ಲದ ಊರು ಎಂದರ್ಥ. ಅಂದರೆ ರಾಮರಾಜ್ಯದಲ್ಲಿ ಎಲ್ಲರೂ ಸುಖವಾಗಿದ್ದು, ಯಾವುದೇ ಸಂಘರ್ಷ ಇರಲಿಲ್ಲ ಎಂಬುದನ್ನು ಅದು ಸೂಚಿಸುತ್ತದೆ

ಕನ್ನಡಪ್ರಭ ವಾರ್ತೆ ಮೈಸೂರು

ನಂಬಿಕೆ ಮನುಷ್ಯನ ಗುಣಗಳಲ್ಲಿ ಎಲ್ಲಕ್ಕಿಂತ ದೊಡ್ಡದು ಎಂದು ಹಿರಿಯ ಸಮಾಜ ಸೇವಕ ಹಾಗೂ ಚಿಂತಕ ಕೆ. ರಘುರಾಂ ವಾಜಪೇಯಿ ತಿಳಿಸಿದರು.

ನಗರದ ವಿವಿ ಮೊಹಲ್ಲಾದ ಶ್ರೀ ವರಕೃಷ್ಣ ಅಪಾರ್ಟ್‌ ಮೆಂಟ್‌ ನಲ್ಲಿ ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗ ಆಯೋಜಿಸಿದ್ದ ಶ್ರೀ ರಾಮಮಂದಿರದ ಅಕ್ಷತೆ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀ ರಾಮ ಸರ್ವಗುಣಗಳ ಸಂಗಮವಾಗಿದ್ದು, ಸನಾತನ ಸಂಸ್ಕೃತಿಯ ಪ್ರತೀಕವೂ ಆಗಿದ್ದಾನೆ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬುದನ್ನು ಅಂದಿನ ದಿನಗಳಲ್ಲೇ ಪರಿಚಯಿಸಿದ ಕೀರ್ತಿ ಆತನದ್ದು ಎಂದರು.

ತಾನೇ ಎಲ್ಲವನ್ನೂ ಮಾಡಬಹುದಾಗಿದ್ದರೂ, ಹನುಮಂತ, ಜಾಂಬವಂತ, ಗುಹ, ವಾಲಿ, ಸುಗ್ರೀವ ಮತ್ತಿತರರನ್ನು ಮುನ್ನೆಲೆಗೆ ತಂದ ಹೆಗ್ಗಳಿಕೆ ಶ್ರೀರಾಮನದ್ದು. ನಂಬಿಕೆಗೆ ಮತ್ತೊಂದು ಹೆಸರೇ ಶ್ರೀರಾಮ. ಅಯೋಧ್ಯೆ ಎಂದರೆ ಯೋಧರಿಲ್ಲದ ಊರು ಎಂದರ್ಥ. ಅಂದರೆ ರಾಮರಾಜ್ಯದಲ್ಲಿ ಎಲ್ಲರೂ ಸುಖವಾಗಿದ್ದು, ಯಾವುದೇ ಸಂಘರ್ಷ ಇರಲಿಲ್ಲ ಎಂಬುದನ್ನು ಅದು ಸೂಚಿಸುತ್ತದೆ ಎಂದು ಅವರು ಹೇಳಿದರು.

ಉದ್ಯಮಿ ಶೃಂಗಾರ್ ಸಂಜೀವಶೆಟ್ಟಿ ಮಾತನಾಡಿ, ರಾಮನಾಮವೊಂದೇ ಎಲ್ಲ ಕಷ್ಟಗಳನ್ನು ಪರಿಹರಿಸುವ ಶಕ್ತಿ ಹೊಂದಿದೆ. ಶ್ರೀರಾಮಮಂದಿರ ನಿರ್ಮಾಣಕ್ಕೆ ಶ್ರಮಿಸಿದ ಪ್ರತಿಯೊಬ್ಬರನ್ನೂ ಈ ಸಂದರ್ಭದಲ್ಲಿ ಸ್ಮರಿಸಲೇಬೇಕು ಎಂದರು.

ಪತ್ರಾಗಾರ ಇಲಾಖೆ ನಿವೃತ್ತ ನಿರ್ದೇಶಕಿ ಜೆ.ವಿ. ಗಾಯತ್ರಿ, ಪತ್ರಕರ್ತ ರಂಗನಾಥ್ ಮೈಸೂರು, ಪೂಜಾ ಮಠದ್ ಮೊದಲಾದವರು ಇದ್ದರು.