ಸರ್ಕಾರದಿಂದಲೇ ಸಂಘಗಳ ಪ್ರಗತಿ: ಶಿವಾನಂದ ಹೆಬ್ಬಾರ

| Published : Sep 25 2024, 01:04 AM IST

ಸಾರಾಂಶ

ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ರಮೇಶ ಕತ್ತಿಯವರ ಮಾರ್ಗದರ್ಶನದಲ್ಲಿ ಅಂಕಲಗುಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪ್ರಗತಿಯತ್ತ ಮುನ್ನಡೆದಿದೆ ಎಂದು ಸಂಘದ ಅಧ್ಯಕ್ಷ ಶಿವಾನಂದ ಸಂಗಪ್ಪ ಹೆಬ್ಬಾಳ ಹೇಳಿದರು.

ಕನ್ನಡಪ್ರಭ ವಾರ್ತೆ ಯಮಕನಮರಡಿ

ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ರಮೇಶ ಕತ್ತಿಯವರ ಮಾರ್ಗದರ್ಶನದಲ್ಲಿ ಅಂಕಲಗುಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪ್ರಗತಿಯತ್ತ ಮುನ್ನಡೆದಿದೆ ಎಂದು ಸಂಘದ ಅಧ್ಯಕ್ಷ ಶಿವಾನಂದ ಸಂಗಪ್ಪ ಹೆಬ್ಬಾಳ ಹೇಳಿದರು.

ಅಂಕಲಗುಡಿಕ್ಷೇತ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿ, ಸದಸ್ಯರು ಸಕಾಲಕ್ಕೆ ಸಾಲ ಮರುಪಾವತಿಸಬೇಕು. ಸಹಕಾರಿ ಸಂಘಗಳ ಅಭಿವೃದ್ಧಿಗೆ ಆಡಳಿತ ಮಂಡಳಿಯವರ ನಿಸ್ವಾರ್ಥ ಸೇವೆ ಸಿಬ್ಬಂದಿ ಪ್ರಾಮಾಣಿಕತೆ ಮುಖ್ಯವಾಗಿದೆ ಎಂದು ಹೇಳಿದರು.

ಮುಖ್ಯ ಕಾರ್ಯನಿರ್ವಾಹಕ ಚಂದ್ರಪ್ಪ ಗಿಡ್ಡನ್ನವರ ಪ್ರಾಸ್ತಾವಿಕವಾಗಿ ಮಾತನಾಡಿ, ಒಟ್ಟು ಸದಸ್ಯ ಸಂಖ್ಯೆ 645 ಇದ್ದು, ₹34,32,705 ಷೇರು ಬಂಡವಾಳ ಇದೆ. 331 ಸದಸ್ಯರು ಸಾಲಗಾರರು ಇದ್ದು, ₹2,48,96,000 ಸಾಲವಿದೆ. ದುಡಿಯುವ ಬಂಡವಾಳ ₹2,98,58,619 ಇದೆ. ಪ್ರಸಕ್ತ ಸಾಲಿನಲ್ಲಿ ಸಂಘಕ್ಕೆ ನಿವ್ವಳ ಲಾಭ ₹2,70,837 ಇದೆ ಎಂದರು. ಈ ವೇಳೆಯಲ್ಲಿ ಮಾವನೂರ ಗ್ರಾಪಂ ಅಧ್ಯಕ್ಷ ಶಿವಲಿಂಗ ಹೆಬ್ಬಾಳ, ಸಭೆಯಲ್ಲಿ ಸಂಘದ ಉಪಾಧ್ಯಕ್ಷ ನಿಂಗಪ್ಪ ಅಪ್ಪಯ್ಯ ಖಾನಾಪೂರಿ, ನಿರ್ದೇಶಕರಾದ ಸತ್ತೆಪ್ಪ ಅಪ್ಪಯ್ಯ ಸನದಿ, ಬಾಳಪ್ಪ ಬಸಪ್ಪ ಹಂಚಿನಾಳ, ಶಿವಲಿಂಗ ಬಸಪ್ಪ ಹೆಬ್ಬಾಳ, ವಿಠ್ಠಲ ಚೆನ್ನಪ್ಪ ಮನಗುತ್ತಿ, ಮರೆಪ್ಪಾ ಅಡಿವೆಪ್ಪ ಮಾದರ, ಬಸವ್ವಾ ಸತ್ತೆಪ್ಪ ಹೆಬ್ಬಾಳ, ಸುಂದರವ್ವ ಸಿದ್ದಪ್ಪಾ ಸುಲಧಾಳ, ಬಸಪ್ಪ ನಾಗಪ್ಪ ಚೌಗಲಾ, ಹಾಗೂ ಸಿಬ್ಬಂದಿ ಇದ್ದರು. ಬಸವರಾಜ ಮಲ್ಲಪ್ಪ ಹಂಚಿನಾಳ ಸ್ವಾಗತಿಸಿದರು. ಸಿಬ್ಬಂದಿಗಳಾದ ಶ್ರೀಶೈಲ ನಾಗಪ್ಪ ಕೊಟಬಾಗಿ, ವಿನೋದ ಮಲ್ಲಿಕಾರ್ಜುನ ಯಮಕನಮರಡಿ ಇದ್ದರು.