-ಕರ ವಸೂಲಿ, ಎನ್.ಎಲ್.ಆರ್.ಎಂ ಯೋಜನೆಗಳ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

--

ಕನ್ನಡಪ್ರಭ ವಾರ್ತೆ ಹುಣಸಗಿ

ತಾಲೂಕಿನ ಕಾಮನಟಿಗಿ, ಬರದೇವನಾಳ ಹಾಗೂ ಜೋಗುಂಡಬಾವಿ ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾ ಪಂಚಾಯತಿ ಯೋಜನೆ ನಿರ್ದೇಶಕ ಸಿ. ಬಿ. ದೇವರಮನಿ ಅವರು ಭೇಟಿ ನೀಡಿ, ವಿಬಿಜಿ ರಾಮ್ ಜಿ, ಡಿಸಿಬಿ, ಕರ ವಸೂಲಿ ಹಾಗೂ ಎನ್ ಎಲ್ ಆರ್ ಎಂ ಯೋಜನೆಗಳ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಬೆಳವಣಿಗೆ ಹಾಗೂ ಭೌತಿಕ ಗುರಿಯನ್ನು ಪರಿಶೀಲನೆ ನಡೆಸಿದರು.

ವಿವಿಧ ಯೋಜನೆಗಳು ನಿಗದಿಪಡಿಸಿದ ಅವದಿಯಲ್ಲಿ ಗರಿಷ್ಠ ಕೆಲಸ ಮಾಡಬೇಕು ವಿಬಿಜಿ ರಾಮ್ ಜಿ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ ಹೆಚ್ಚಿನ ಜನರಿಗೆ ಕೆಲಸ ನೀಡಬೇಕು, ಮಾನವ ದಿನಗಳು ಸೃಜನೆಯಾಗಬೇಕು. ಯಾರು ಕೂಡ ಕೆಲಸ ಸಿಕ್ಕಿಲ್ಲ ಅಂತ ವಲಸೆ ಹೋಗಬಾರದು ಎಲ್ಲರಿಗೂ ಅವರ ಅವರ ವಾಸಸ್ಥಳದಲ್ಲೇ ಕೆಲಸ ದೊರೆಯಬೇಕು.


ಹಾಗಾಗಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಬಿಜಿ ರಾಮ್ ಜಿ ಯೋಜನೆಯನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಬೇಕಾಗಿದೆ ಎಂದು ತಿಳಿಸಿದರು.

ತದನಂತರ ಡಿಸಿಬಿ, ಕರ ವಸೂಲಿಯ ಪ್ರಗತಿಯನ್ನು ವೀಕ್ಷಿಸಿ ತೆರಿಗೆಯಿಂದ ಗ್ರಾಮಗಳು ಹಾಗೂ ಗ್ರಾಮದ ಮೂಲ ಸೌಕರ್ಯಗಳು ಅಭಿವೃದ್ಧಿಗೊಳ್ಳುತ್ತವೆ ತೆರಿಗೆಯನ್ನು ಗರಿಷ್ಠ ಮಟ್ಟದಲ್ಲಿ ವಸೂಲಿ ಮಾಡಿ ಗ್ರಾಮಗಳ ಅಭಿವೃದ್ಧಿಗೆ ಮತ್ತು ಮೂಲ ಸೌಕರ್ಯಗಳಿಗೆ ಬಳಸಿಕೊಂಡು ಗ್ರಾಮಗಳನ್ನು ಸುಸ್ಥಿರವಾಗಿ ಇಡಬೇಕು ಎಂದರು.

ಎನ್ ಎಲ್ ಆರ್ ಎಂ ಯೋಜನೆಯನ್ನು ಪರಿಶೀಲನೆ ಮಾಡಿದರು ಅವರು, ಗ್ರಾಮೀಣ ಪ್ರದೇಶಗಳಲ್ಲಿ ಎನ್ ಆರ್ ಎಲ್ ಎಂ ಯೋಜನೆ ಅತ್ಯಂತ ಉಪಯುಕ್ತವಾಗಿದ್ದು ಇದನ್ನು ಪಲಾನುಭವಿಗಳಿಗೆ ಯಶಸ್ವಿಯಾಗಿ ತಲುಪಿಸವೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು (ಗ್ರಾ. ಉ.) ಶ್ರೀಶೈಲ್ ಹಳ್ಳಿ, ಜಿಲ್ಲಾ ಎಂಐಸಿ ಸoಯೋಜಕ ರಾಘವೇಂದ್ರ, ಟಿಸಿ ಸುನೀಲ್ ಕುಮಾರ್, ತಾಂತ್ರಿಕ ಸಹಾಯಕ ಅರವಿಂದ್, ಪಿಡಿಓ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.

-

17ವೈಡಿಆರ್5

ಹುಣಸಗಿ ತಾಲೂಕಿನ ಕಾಮನಟಿಗಿ, ಬರದೇವನಾಳ ಹಾಗೂ ಜೋಗುಂಡಬಾವಿ ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾ ಪಂಚಾಯತಿ ಯೋಜನೆ ನಿರ್ದೇಶಕ ಸಿ. ಬಿ. ದೇವರಮನಿ ಅವರು ಭೇಟಿ ನೀಡಿದರು.