ಮೇಕೆದಾಟು ಯೋಜನೆಗೆ ಅಗತ್ಯವಿರುವ ಅರಣ್ಯ ಭೂಮಿಗೆ ಪರ್ಯಾಯವಾಗಿ ಲ್ಯಾಂಡ್ ಕೊಡಬೇಕು. ಸುಮಾರು 12,500 ಎಕರೆ ಜಮೀನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ 13 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ.
ಮದ್ದೂರು: ಮೇಕೆದಾಟು ಯೋಜನೆ ವಿಚಾರವಾಗಿ ಕೇಂದ್ರ ಜಲ ಆಯೋಗದ ಉನ್ನತಾಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿ ಅವರ ಎಲ್ಲಾ ಸಂಶಯಗಳಿಗೆ ಸ್ಪಷ್ಟನೆ ನೀಡಿ ಬಗೆಹರಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ಅಗತ್ಯವಿರುವ ಅರಣ್ಯ ಭೂಮಿಗೆ ಪರ್ಯಾಯವಾಗಿ ಲ್ಯಾಂಡ್ ಕೊಡಬೇಕು. ಸುಮಾರು 12,500 ಎಕರೆ ಜಮೀನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.ಈ ಸಂಬಂಧ 13 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ಕಂದಾಯ ಮತ್ತು ಅರಣ್ಯ ಇಲಾಖೆಗಳು ಜಂಟಿಯಾಗಿ ಯೋಜನೆ ಸಂಬಂಧ ಪ್ರಮಾಣಪತ್ರ ಸಿದ್ಧಪಡಿಸಲಿವೆ. 20 ದಿನಗಳ ಒಳಗಾಗಿ ಪರ್ಯಾಯ ಜಮೀನಿನ ಪ್ರಕ್ರಿಯೆ ಅಂತಿಮಗೊಳಿಸಲು ಸೂಚನೆ ಕೊಟ್ಟಿದ್ದೇನೆ ಎಂದರು.
ಈಗಾಗಲೇ ಯೋಜನೆಯ ಡಿಪಿಆರ್ ಸಲ್ಲಿಕೆಯಾಗಿದೆ. ಪರ್ಯಾಯ ಜಮೀನಿನ ವಿಷಯ ಅಂತಿಮಗೊಂಡ ಬಳಿಕ ಕೇಂದ್ರ ಜಲ ಆಯೋಗದಿಂದ ಅಂತಿಮವಾಗಿ ಅನುಮೋದನೆ ಪಡೆಯಲಾಗುವುದು ಎಂದರು.ತಮಿಳುನಾಡಿಗೆ 30 ಟಿಎಂಸಿ ಮಾತ್ರ ನೀರು ಬಿಡುಗಡೆ: ಚಲುವರಾಯಸ್ವಾಮಿ
ಮದ್ದೂರು:ರಾಜ್ಯದಲ್ಲಿ ಎದುರಾಗಿರುವ ಮಳೆ ಕೊರತೆ, ಕಠಿಣ ಬರದ ಸಮಸ್ಯೆ ನಡುವೆಯೂ ತಮಿಳುನಾಡಿಗೆ ಇಲ್ಲಿಯವರೆಗೆ 30 ಟಿಎಂಸಿ ಮಾತ್ರ ನೀರು ಕೊಟ್ಟಿದ್ದೇವೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಠಿಣ ಬರ ಸಮಸ್ಯೆ ಎದುರಾಗಿದೆ. ಆದರೂ ಇಲ್ಲಿವರೆಗೂ ನಾವು ತಮಿಳುನಾಡಿಗೆ ಕೊಟ್ಟಿರುವುದು 30 ಟಿಎಂಸಿ ನೀರು ಮಾತ್ರ. 30-40 ವರ್ಷಗಳ ಇತಿಹಾಸದಲ್ಲೇ ಅತ್ಯಂತ ಕಡಿಮೆ ನೀರು ಈ ವರ್ಷ ತಮಿಳು ನಾಡಿಗೆ ಹರಿದು ಹೋಗಿದೆ ಎಂದರು.ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಕುರಿತು ರೈತರು, ಸಂಘಟನೆಗಳ ಹೋರಾಟಗಳನ್ನು ನಾವು ಗಮಸಿದ್ದೇವೆ. ಹೋರಾಟ ಮಾಡೋದು ತಪ್ಪಲ್ಲ. ಆದರೆ, ಹೆಚ್ಚಿನ ನೀರು ಬಿಡುಗಡೆ ವಿಚಾರವಾಗಿ ಸೆ.8ಕ್ಕೆ ಸಿಡಬ್ಲ್ಯೂಆರ್ ಸಿ ಸಭೆ ಇದೆ. ನೀರು ಬಿಡಲು ಆಗಲ್ಲ ಅಂತ ಒತ್ತಾಯ ಮಾಡ್ತಿದ್ದೇವೆ. ಅಂದು ಏನು ಆದೇಶ ಬರುತ್ತೆ ನೋಡೋಣ ಎಂದರು.
ಕಾವೇರಿ ನದಿ ನೀರಿನ ವಿಚಾರವಾಗಿ ಸುಪ್ರೀಂ ಕೋರ್ಟ್ ಕೇಸ್ ವಜಾ ಮಾಡಿಲ್ಲ. ಮಳೆ ಕೊರತೆಯಿಂದ ಬರ ಎದುರಾಗಿದೆ. ಸುಪ್ರೀಂ ಕೋರ್ಟ್ ಹಾಗೂ ಸಿಡಬ್ಲ್ಯೂಆರ್ ಸಿ ತೀರ್ಮಾನ ನೋಡಿ ಕ್ರಮ ವಹಿಸಲಾಗುವುದು ಎಂದರು.ಮಳೆಗಾಗಿ ಮೋಡ ಭಿತ್ತನೆಗೆ ಚಾಲನೆ ನೀಡಿ 60 ದಿನಗಳ ಟೈಮ್ ಕೊಟ್ಡಿದ್ದೇವೆ. ಐಎಂಡಿಸಿ ಟೆಕ್ನಿಕಲ್ ಟೀಮ್ ಮೋಡ ಭಿತ್ತನೆ ಮಾಡುತ್ತಾರೆ. ಈ ಬಗ್ಗೆ ಸಂಜೆ ವರದಿ ಕೊಡುತ್ತಾರೆ. ವರದಿ ನೋಡಿ ಈ ಬಗ್ಗೆ ಮಾಹಿತಿ ನೀಡುತ್ತೇನೆ ಎಂದರು.