ಉಪಠಾಣೆ ಮೇಲ್ದರ್ಜೆಗೇರಿಸುವ ಭರವಸೆ

| Published : May 16 2025, 02:25 AM IST

ಸಾರಾಂಶ

ಗೃಹ ಸಚಿವ ಜಿ ಪರಮೇಶ್ವರ್‌ ಬುಕ್ಕಾಪಟ್ಟಣ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ಭೇಟಿ ಮಾಡಿ ಕುಶಲೋಪರಿ ಚರ್ಚಿಸಿದರು.

ಕನ್ನಡಪ್ರಭ ವಾರ್ತೆ ಶಿರಾ

ಗೃಹ ಸಚಿವ ಜಿ ಪರಮೇಶ್ವರ್‌ ಬುಕ್ಕಾಪಟ್ಟಣ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ಭೇಟಿ ಮಾಡಿ ಕುಶಲೋಪರಿ ಚರ್ಚಿಸಿದರು.

ನಂತರ ಬುಕ್ಕಾಪಟ್ಟಣ ಕಾಂಗ್ರೆಸ್ ಮುಖಂಡ ಬುಕ್ಕಾಪಟ್ಟಣ ಹೋಬಳಿ ಆರಾಧನಾ ಸಮಿತಿ ಸದಸ್ಯ ಬಿಡಿ ದ್ಯಾಮಣ್ಣ ಅವರು ಬುಕ್ಕಾಪಟ್ಟಣ ಪೊಲೀಸ್ ಉಪ ಠಾಣೆಯನ್ನು ಮೇಲ್ದರ್ಜೆಗೇರಿಸುವಂತೆ ಸಿಬ್ಬಂದಿ ಕೊರತೆ, ಪೊಲೀಸ್ ವಸತಿ ನಿಲಯಗಳ ಕೊರತೆ ಹಾಗೂ ಪೊಲೀಸ್ ಠಾಣೆ ನೂತನ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ ಸಚಿವರಲ್ಲಿ ಮನವಿ ಮಾಡಿಕೊಂಡರು ಈ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಈ ಕುರಿತು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಮುರುಳಿದರ ಹಾಲಪ್ಪ, ಹೊಸ ಪಾಳ್ಯ ಜೈಪ್ರಕಾಶ್, ಪ್ರಮೀಳಮ್ಮ, ಹುಳಿಯಾರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿಟಿ ಚಿಕ್ಕಣ್ಣ, ಪ್ರಭಾಕರ್, ಜಗನ್ನಾಥ್, ರಂಗಶಾಮಯ್ಯ, ಪ್ರಮೀಳಮ್ಮ ಸೇರಿದಂತೆ ಹಲವರು ಹಾಜರಿದ್ದರು.