ಸೈಕಲ್ ಬಳಕೆಯಿಂದ ಆರೋಗ್ಯ ವೃದ್ಧಿ: ವಿಜಯ ಅಂಗಡಿ

| Published : Mar 02 2024, 01:47 AM IST

ಸೈಕಲ್ ಬಳಕೆಯಿಂದ ಆರೋಗ್ಯ ವೃದ್ಧಿ: ವಿಜಯ ಅಂಗಡಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿನಿತ್ಯ ಸೈಕಲ್ ಬಳಸುವುದರಿಂದ ಆರೋಗ್ಯ ವೃದ್ಧಿ ಆಗುವುದಲ್ಲದೇ ಮಾಲಿನ್ಯ ತಡೆಗಟ್ಟಿ ವಾತಾವರಣವನ್ನು ಸಮತೋಲನದಲ್ಲಿ ಇಡಬಹುದು ಹಾಗೂ ಹಣ ಉಳಿತಾಯವಾಗಲಿದೆ ಎಂದು ಆಕಾಶವಾಣಿ ಮುಖ್ಯಸ್ಥ ಡಾ. ವಿಜಯ ಅಂಗಡಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಹಾಸನಪ್ರತಿನಿತ್ಯ ಸೈಕಲ್ ಬಳಸುವುದರಿಂದ ಆರೋಗ್ಯ ವೃದ್ಧಿ ಆಗುವುದಲ್ಲದೇ ಮಾಲಿನ್ಯ ತಡೆಗಟ್ಟಿ ವಾತಾವರಣವನ್ನು ಸಮತೋಲನದಲ್ಲಿ ಇಡಬಹುದು ಹಾಗೂ ಹಣ ಉಳಿತಾಯವಾಗಲಿದೆ ಎಂದು ಆಕಾಶವಾಣಿ ಮುಖ್ಯಸ್ಥ ಡಾ. ವಿಜಯ ಅಂಗಡಿ ಅಭಿಪ್ರಾಯಪಟ್ಟರು.

ನಗರದ ಚನ್ನಪಟ್ಟಣ ವೃತ್ತದ ಬಳಿ ಇರುವ ಗೋಮತಿ ಕಲ್ಯಾಣ ಮಂಟಪದಲ್ಲಿ ನಡೆದ ಹಾಸನ ಲಯನ್ಸ್ ಕ್ಲಬ್ ಸದಸ್ಯರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಮಾಲಿನ್ಯ ಆಗದಂತೆ ತಡೆಗಟ್ಟಲು ಹೊರ ದೇಶದಲ್ಲಿ ಕಾಳಜಿ ವಹಿಸಿ ಹೆಚ್ಚಿನ ರೀತಿ ಸೈಕಲ್ ಬಳಕೆ ಮಾಡಲಾಗುತ್ತಿದೆ. ಆದರೇ ನಮ್ಮ ದೇಶದಲ್ಲಿ ಒಂದೊಂದು ಮನೆಯಲ್ಲಿ ಮೂರ್‍ನಾಲ್ಕು ಕಾರುಗಳು, ಬೈಕ್ ಗಳ ಕಾಣಬಹುದು. ಇದರಿಂದ ನಾನಾ ರೀತಿ ಅನುಕೂಲ, ಅನಾನುಕೂಲಗಳನ್ನು ಕಂಡಿದ್ದೇವೆ. ಸೈಕಲ್ ನಿಂದ ಆರೋಗ್ಯ ವೃದ್ಧಿ ಆಗುವುದಲ್ಲದೇ ದೇಹವನ್ನು ಸಮತೋಲನದಲ್ಲಿ ಇಡಬಹುದು ಎಂದರು. ಇವೆಲ್ಲವನ್ನು ಗಮನಿಸಿ ಸೈಕಲ್ ಬಳಸಿ ಸುಖ ಗಳಿಸಿ ಎನ್ನುವ ಪುಸ್ತಕ ಬರೆಯಲು ಮುಂದಾಗಿದ್ದೇನೆ. ನಾವು ಚಿಕ್ಕವರಿದ್ದಾಗ ಸೈಕಲನ್ನು ಬಹಳ ಪ್ರೀತಿಯಿಂದ ಅದನ್ನು ಬಳಕೆ ಮಾಡುತ್ತಿದ್ದೇವು. ಆಗೇ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಕೊಡಿಸಿದ್ದೇವೆ. ಆಗೇ ಅನೇಕ ಮನೆಗಳನ್ನು ಸೈಕಲನ್ನು ಕಾಣಬಹುದು. ಬೈಕು, ಕಾರು ಬಳಸುವುದರಿಂದ ಯಾವ ರಾಷ್ಟ್ರ ಪ್ರಶಸ್ತಿ ಸಿಗುವುದಿಲ್ಲ. ಸೈಕಲ್ ಬಳಕೆ ಮಾಡುವುದರಿಂದ ಹಣ ಉಳಿತಾಯ, ಆರೋಗ್ಯ ವೃದ್ಧಿ ಸೇರಿದಂತೆ ನಾನಾ ಲಾಭಗಳಿವೆ ಎಂದು ಕಿವಿಮಾತು ಹೇಳಿದರು. ನಾನು ಸೈಕಲ್ ಬಳಕೆ ಮಾಡುತ್ತಿರುವುದರಿಂದ ಲಕ್ಷಾಂತರ ರು.ಗಳ ಉಳಿತಾಯ ಆಗಿದೆ. ಒಂದು ಪ್ರಶಸ್ತಿ ಸಿಗುತ್ತದೆ ಎಂದರೇ ಸಾವಿರಾರು ಜನ ಅರ್ಜಿ ಹಾಕುತ್ತಾರೆ. ಹಣ, ಬಂಗಾರ ಸಿಗುತ್ತದೆ ಎಂದು ಅರ್ಜಿ ಹಾಕುತ್ತಾರೆ. ಏನು ಲಾಭ ಇಲ್ಲ ಇದರಲ್ಲಿ ಎಂದರೇ ಯಾರು ಅರ್ಜಿ ಹಾಕಲು ಮುಂದೆ ಬರುವುದಿಲ್ಲ. ಜೀವನದಲ್ಲಿ ಸರಳವಾಗಿ ಬದುಕುತ್ತೇವೆ ಎಂದು ಹೋದರೇ ಲಕ್ಷಾಂತರ ರು. ಗಳ ಹಣ ಉಳಿತಾಯ ಮಾಡಬಹುದು ಎಂದು ಸಲಹೆ ನೀಡಿದರು. ಪ್ರತಿನಿತ್ಯ ಬಳಸುವ ಆಹಾರದಲ್ಲಿ ಆರೋಗ್ಯಕರ ಆಹಾರ ಸೇವಿಸಿದರೇ ಆರೋಗ್ಯ ಉತ್ತಮವಾಗಿರುತ್ತದೆ. ಅಕ್ಕಿಗಿಂತ ಹೆಚ್ಚಿನ ರೀತಿ ರಾಗಿ ಬಳಸಿದರೇ ಹೆಚ್ಚಿನ ಕ್ಯಾಲ್ಸಿಯಂ ಪಡೆಯಬಹುದು. ಇದು ಅತ್ಯಂತ ಆರೋಗ್ಯಕರವಾಗಿದೆ. ಇನ್ನು ಮಾಂಸಹಾರಿ ಮತ್ತು ಮದ್ಯ ಸೇವನೆ ಯಾವುದೇ ಆಗಿರಲಿ ಮಿತವಾಗಿರಲಿ. ಹೆಚ್ಚಿನ ರೀತಿ ಸೇವಿಸಿದರೇ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದರು. ಇದೆ ವೇಳೆ ಮಾಜಿ ಅಧ್ಯಕ್ಷರ ದಿನವಾಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಾಜಿ ರಾಜ್ಯಪಾಲ ಬಿ.ವಿ. ಹೆಗಡೆ ಮತ್ತು ಹೆಚ್.ಎಸ್. ಮಂಜುನಾಥ್ ಮೂರ್ತಿ ಇವರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಹೆಚ್.ಕೆ. ನಾಗೇಶ್, ಕಾರ್ಯದರ್ಶಿ ಸಿ.ಕೆ. ಕಿರಣ್ ಕುಮಾರ್, ಲಿಯೋ ಕ್ಲಬ್ ಕಾರ್ಯದರ್ಶಿ ಸುವರ್ಚಲಾ, ವಲಯ ಅಧ್ಯಕ್ಷ ಹೆಚ್.ಪಿ. ಪ್ರಕಾಶ್, ಮಾಜಿ ಅಧ್ಯಕ್ಷ ಬಿ.ಎಸ್. ಸೋಮಶೇಖರ್, ಐ.ಜೆ. ರಮೇಶ್ ಮತ್ತಿತರರು ಉಪಸ್ಥಿತರಿದ್ದರು.