ಆಳಂದ: ಕೇಂದ್ರ ಸರ್ಕಾರದ ಯೋಜನೆಗಳ ಪ್ರಚಾರ

| Published : Jan 15 2024, 01:49 AM IST

ಆಳಂದ: ಕೇಂದ್ರ ಸರ್ಕಾರದ ಯೋಜನೆಗಳ ಪ್ರಚಾರ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನ ಮಂತ್ರಿ ಉಜ್ವಲ್‌ ಯೋಜನೆ ಅಡಿಯಲ್ಲಿ ಬಡ ಹೊಸ ಗ್ರಾಹಕರು ಅಗತ್ಯ ದಾಖಲೆ ಒದಗಿಸಿದರೆ ಉಚಿತವಾಗಿ ಒಲೆ ಮತ್ತು ಸಿಲಿಂಡರ್ ಗ್ಯಾಸ್ ನೀಡಲಾಗುತ್ತಿದೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಆಳಂದ

ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆರ್ಥಿಕ ಸ್ವಾವಲಂಬಿಗೆ ಕೇಂದ್ರ ಸರ್ಕಾರ ಜಾರಿಗೆ ತಂದ ಹಲವು ಯೋಜನೆಗಳ ಲಾಭವನ್ನು ಪಡೆದುಕೊಳ್ಳಬೇಕು ಎಂದು ಕಲಬುರಗಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗೋಪಾಲ ಕುಲಕರ್ಣಿ ಅವರು ಹೇಳಿದರು.

ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ಕೇಂದ್ರ ಸರ್ಕಾರದ ವಿಕಸಿತ ಭಾರತ ಸಂಕಲ್ಪಯಾತ್ರಾ ಕಾರ್ಯಕ್ರಮದಲ್ಲಿ ಪ್ರಚಾರದ ಡೈರಿ ಮತ್ತು ಕ್ಯಾಲೆಂಡರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸೋನಾ ಗ್ಯಾಸ್ ಏಜನ್ಸಿ ಮಾಲೀಕ ಸಚೀನ ರಾಠೋಡ ಮಾತನಾಡಿ, ಪ್ರಧಾನ ಮಂತ್ರಿ ಉಜ್ವಲ್‌ ಯೋಜನೆ ಅಡಿಯಲ್ಲಿ ಬಡ ಹೊಸ ಗ್ರಾಹಕರು ಅಗತ್ಯ ದಾಖಲೆ ಒದಗಿಸಿದರೆ ಉಚಿತವಾಗಿ ಒಲೆ ಮತ್ತು ಸಿಲಿಂಡರ್ ಗ್ಯಾಸ್ ನೀಡಲಾಗುತ್ತಿದೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮಾಹಿತಿ ಒದಗಿಸಿದರು.

ಸ್ಥಳೀಯ ಎಸ್‌ಬಿಐ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಅವಿನಾಶ ಗುರು ಮಾತನಾಡಿದರು. ಇದೇ ವೇಳೆ ಕೇಂದ್ರ ಸರ್ಕಾರದಿಂದ ಪ್ರಾರಂಭಿಸಿದ ವಿಕಸಿತ ಭಾರತ ಸಂಕಲ್ಪಯಾತ್ರೆಯ ವಾಹನದಿಂದ ವಿವಿಧ ಯೋಜನೆ ಪ್ರಚಾರದ ವಿಡಿಯೋ ಪ್ರದರ್ಶನವನ್ನು ನಾಗರಿಕರು ವೀಕ್ಷಿಸಿದರು.

ಬೀದಿ ವ್ಯಾಪಾರಕ್ಕೆ ಸಾಲ, ಸ್ವಯಂ ಉದ್ಯೋಗ ಮತ್ತು ಉದ್ಯಮೆ ಸ್ಥಾಪನೆಗೆ, ಮನೆ ನಿರ್ಮಾಣಕ್ಕೆ ಬ್ಯಾಂಕ್ ಸಾಲ ನೀಡಲಾಗುವುದು. ಉಜ್ವಲಾ ಯೋಜನೆಯ ಅಡಿ ಉಚಿತ ಗ್ಯಾಸ್ ಸಂಪರ್ಕ ಸೇರಿ ಹಲವು ಯೋಜನೆಗಳ ಲಾಭವನ್ನು ಪಡೆಯಬಹುದಾಗಿದೆ. ಪ್ರಧಾನಮಂತ್ರಿ ಜನಧನ ಯೋಜನೆ, ಬೀದಿ ಬದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಸಾಲ, ಮನೆ ನಿರ್ಮಾಣಕ್ಕೆ ಸಹಾಯಧನಗಳಂತ ಯೋಜನೆಯ ಲಾಭವನ್ನು ಕುರಿತು ನಾಗರಿಕರಲ್ಲಿ ಮಾಹಿತಿ ಒದಗಿಸಲಾಯಿತು.

ಇದೇ ವೇಳೆ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಯೋಜನೆಗಳ ಪ್ರಚಾರ ನಡೆಸಿ ಕ್ಯಾಲೆಂಡರ್ ಬಿಡುಗಡೆ ನಡೆಯಿತು. ನಾಗರಿಕ ಮಲ್ಲಿನಾಥ ಪಾತಾಳೆ, ಜಯಪ್ರಕಾಶ ಕುಂಬಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.