ಸಾರಾಂಶ
ಶಹಾಪುರ: ಕಾಟಮನಹಳ್ಳಿ ಗ್ರಾಮದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಕೊಲೆಗೈದ ಘಟನೆ ನಡೆದಿದೆ. ಹತ್ಯೆಯಾದ ವ್ಯಕ್ತಿ ಸಿದ್ದಪ್ಪ ಪೂಜಾರಿ (56) ಎಂದು ಗುರುತಿಸಲಾಗಿದೆ. ಗ್ರಾಮದಲ್ಲಿ ಭಾನುವಾರ ರಾತ್ರಿ (ಫೆ.9) ಮನೆಯ ಮುಂದೆ ಜಗಳ ನಡೆದಾಗ, ಕಾಟಮನಹಳ್ಳಿಯ ಸಂಬಂಧಿಕರಾದ ನಿಂಗಪ್ಪ, ಸಿದ್ದಪ್ಪ, ದೇವಪ್ಪ, ಭೀಮಣ್ಣ, ನಿಂಗಪ್ಪ, ಏನಮ್ಮ, ಸಿದ್ದಪ್ಪ, ದೇವಪ್ಪ ಕಾಮತ್ಗೆರ, ಸೂಲಪ್ಪ ಕಮತಗೇರಾ ಗುಂಪು ಕಟ್ಟಿಕೊಂಡು ಕೊಡಲಿ, ಬಡಿಗೆಯಿಂದ ಹಲ್ಲೆ ಮಾಡಿದಾಗ ಗಾಯಗೊಂಡ ಸಿದ್ದಪ್ಪ ಅವರನ್ನು ಹೆಚ್ಚಿನ ಚಿಕಿತ್ಸೆಗೆ ರಾಯಚೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಸೋಮವಾರ ತಡರಾತ್ರಿ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ, ಮಂಗಳವಾರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಮಾಳಪ್ಪ ದೂರು ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆದಿದೆ ಎಂದು ಶಹಾಪುರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಎಸ್.ಎಂ. ಪಾಟೀಲ್ ತಿಳಿಸಿದ್ದಾರೆ. ಈ ಕುರಿತು ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
---12ವೈಡಿಆರ್2: ಸಿದ್ದಪ್ಪ ಮಲ್ಲಪ್ಪ ಪೂಜಾರಿ.