ಸಾರಾಂಶ
ಬೆಂಗಳೂರು : ಬಿಬಿಎಂಪಿಯು ಕಳೆದ 2024-25ನೇ ಸಾಲಿನಲ್ಲಿ ವಲಯವಾರು ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಸಾಧನೆ ಆಧಾರದಲ್ಲಿ ಬಿಬಿಎಂಪಿಯ 8 ವಲಯಗಳಿಗೆ ರ್‍ಯಾಂಕಿಂಗ್ ನೀಡಲಾಗಿದೆ.
ಬಿಬಿಎಂಪಿಯು 2024-25ನೇ ಸಾಲಿನಲ್ಲಿ ₹5,210 ಕೋಟಿ ಸಂಗ್ರಹಿಸುವ ಗುರಿ ಹಾಕಿಕೊಂಡಿದ್ದ ಬಿಬಿಎಂಪಿಯು, ದಾಖಲೆಯ ಬರೋಬ್ಬರಿ ₹4,927 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದ್ದು, ಈ ಮೂಲಕ ಮೊದಲ ಬಾರಿಗೆ ಆಸ್ತಿ ತೆರಿಗೆ ಸಂಗ್ರಹದಲ್ಲಿ ₹4 ಸಾವಿರ ಕೋಟಿ ದಾಟಿದೆ. ಕಳೆದ 2023-24ನೇ ಸಾಲಿನಲ್ಲಿ ₹3,900 ಕೋಟಿ ಸಂಗ್ರಹಿಸಿದ ಮೊತ್ತಕ್ಕೆ ಹೋಲಿಸಿದರೆ ₹1,027 ಸಾವಿರ ಕೋಟಿ ಹೆಚ್ಚಿನ ಸಂಗ್ರಹವಾಗಿದೆ. ಈ ಸಾಧನೆಗೆ ಶ್ರಮಿಸಿದ ಅಧಿಕಾರಿಗಳಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಬಿಬಿಎಂಪಿಯ 8 ವಲಯಗಳಿಗೆ ನೀಡಲಾದ ಗುರಿ ಸಾಧನೆ ಆಧಾರದಲ್ಲಿ ರ್‍ಯಾಂಕಿಂಗ್ ನೀಡಲಾಗಿದೆ.
ಯಲಹಂಕ ವಲಯವು ನೀಡಲಾದ ಗುರಿ ಮೊತ್ತಕ್ಕಿಂತ ಹೆಚ್ಚಿನ ಮೊತ್ತ ಸಂಗ್ರಹಿಸುವ ಮೂಲಕ ಪ್ರಥಮ ರ್‍ಯಾಂಕ್ ಗಳಿಸಿದೆ. ಉಳಿದಂತೆ ಮಹದೇವಪುರ 2ನೇ ರ್‍ಯಾಂಕ್, ದಕ್ಷಿಣ ವಲಯ 3ನೇ ರ್‍ಯಾಂಕ್, ಪೂರ್ವ 4ನೇ ರ್‍ಯಾಂಕ್, ದಾಸರಹಳ್ಳಿ 5ನೇ ರ್‍ಯಾಂಕ್, ಪಶ್ಚಿಮ ವಲಯ 6ನೇ ರ್‍ಯಾಂಕ್, ಆರ್.ಆರ್ ನಗರ ವಲಯ 7ನೇ ರ್‍ಯಾಂಕ್ ಹಾಗೂ ಬೊಮ್ಮನಹಳ್ಳಿ ವಲಯ 8ನೇ ರ್‍ಯಾಂಕ್ ಪಡೆದಿದೆ.
ವಲಯವಾರು ಆಸ್ತಿ ತೆರಿಗೆ ಸಂಗ್ರಹ ವಿವರ
ವಲಯಗುರಿ(ಕೋಟಿ ರು.) ಸಂಗ್ರಹ(ಕೋಟಿ ರು.)ಶೇಕಡಾರ್‍ಯಾಂಕ್
ಯಲಹಂಕ445.24464.66104.361
ಮಹದೇವಪುರ1309.041037.6899.902
ದಕ್ಷಿಣ769.50733.6595.343
ಪೂರ್ವ891.89834.1493.524
ದಾಸರಹಳ್ಳಿ164.95152.9492.725
ಪಶ್ಚಿಮ610.39562.6192.176
ಆರ್‌ಆರ್‌ನಗರ434.35381.7587.897
ಬೊಮ್ಮನಹಳ್ಳಿ585.11490.0383.758
ಒಟ್ಟು52104927.4694.57