ಗಾಂಧೀಜಿ, ಸತ್ಯ, ಅಹಿಂಸೆ, ಸತ್ಯಾಗ್ರಹ ಪ್ರತಿಪಾದಕರು: ಮಹದೇವಪ್ಪ ಕಂಬಳಿ

| Published : Mar 05 2024, 01:36 AM IST

ಸಾರಾಂಶ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಸತ್ಯ, ಅಹಿಂಸೆ, ಅಸ್ಪೃಶ್ಯತೆ, ಸತ್ಯಾಗ್ರಹ ಪರಿಕಲ್ಪನೆಗಳ ಪ್ರತಿಪಾದಕರಾಗಿದ್ದಾರೆ. ದೇಶಪ್ರೇಮ, ಸ್ವದೇಶಿ, ಸರ್ವಧರ್ಮ ಸಹಿಷ್ಣತೆಗಳ ಮೂಲಕ ಭಾರತೀಯ ನಾಗರಿಕ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಮಹಾಚೇತನ ಎ೦ದು ಮಹದೇವಪ್ಪ ಕಂಬಳಿ ಅಭಿಪ್ರಾಯ ವ್ಯಕ್ತಪಡಿಸಿದರು.

ನರೇಗಲ್ಲ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಸತ್ಯ, ಅಹಿಂಸೆ, ಅಸ್ಪೃಶ್ಯತೆ, ಸತ್ಯಾಗ್ರಹ ಪರಿಕಲ್ಪನೆಗಳ ಪ್ರತಿಪಾದಕರಾಗಿದ್ದಾರೆ. ದೇಶಪ್ರೇಮ, ಸ್ವದೇಶಿ, ಸರ್ವಧರ್ಮ ಸಹಿಷ್ಣತೆಗಳ ಮೂಲಕ ಭಾರತೀಯ ನಾಗರಿಕ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಮಹಾಚೇತನ ಎ೦ದು ಮಹದೇವಪ್ಪ ಕಂಬಳಿ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಸಮೀಪದ ಅಬ್ಬಿಗೇರಿಯಲ್ಲಿಂದು ಕಾಂಗ್ರೆಸ್ ಕಮಿಟಿ ವತಿಯಿಂದ ನಡೆದ ಮಹಾತ್ಮ ಗಾಂಧೀಜಿ ರೋಣ ತಾಲೂಕು ಜಕ್ಕಲಿಗೆ ಭೇಟಿ ನೀಡಿದ ೯೧ನೇ ವರ್ಷಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಹಾತ್ಮಾ ಗಾಂಧೀಜಿ ಜನಾಂದೋಲನ, ಅಹಿಂಸೆ, ಅಸ್ಪೃಶ್ಯತೆ ನಿವಾರಣೆ, ಸತ್ಯಾಗ್ರಹ ಪರಿಕಲ್ಪನೆಗಳನ್ನು ವಿಶ್ವಕ್ಕೆ ಮೊದಲ ಬಾರಿಗೆ ಪರಿಚಯಿಸಿದ ಮಹನೀಯರು ಎಂದು ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕವಾಗಿ ಮಾತನಾಡಿದ ಚಂದ್ರಶೇಖರ ಕಾಳಗಿ, ಜಕ್ಕಲಿಯ ಅಂದಾನಪ್ಪ ದೊಡ್ಡಮೇಟಿಯವರ ಮನವಿಯ ಮೇರೆಗೆ ಮಾರ್ಚ್ ೩, ೧೯೩೪ರಂದು ಅಸ್ಪೃಶ್ಯತಾ ನಿವಾರಣಾ ಕಾರ್ಯಕ್ರಮಕ್ಕಾಗಿ ಜಕ್ಕಲಿಗೆ ಗಾಂಧೀಜಿಯವರ ಆಗಮನವಾಗಿತ್ತು. ಆಗಿನ ಸಮಾರಂಭವನ್ನು ಜಕ್ಕಲಿಯ ದೇಶ ಸೇವಾ ಸಂಘದವರು ಆಯೋಜಿಸಿದ್ದರು. ದೇಶಾದ್ಯಾಂತ ನಡೆದ ಹರಿಜನರ ಅಭಿವೃದ್ಧಿಗೆ ಕೈಕೊಂಡ ಕಾರ್ಯಕ್ರಮಕ್ಕೆ ನಿಧಿ ಸಂಗ್ರಹಿಸಲು ಮಹಾತ್ಮಾ ಗಾಂಧೀಜಿಯವರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆಗಿನ ಕಾಲದಲ್ಲಿಯೇ ಸಾವಿರಾರು ರುಪಾಯಿಗಳ ಧನ ಸಂಗ್ರಹವಾಗಿತ್ತು ಎಂದರು.

ಈ ವೇಳೆಯಲ್ಲಿ ಸುರೇಶ ಬಸವರಡ್ಡೇರ, ಗುರಣ್ಣ ಅವರಡ್ಡಿ, ಮಂಜು ಅಂಗಡಿ, ಬಸವರಾಜ ಪಲ್ಲೇದ ,ಭೀಮಣ್ಣ ಚಿಕ್ಕೇನಕೊಪ್ಪ, ನಿಂಗನಗೌಡ ಬೂದಿಹಾಳ, ಮಾರುತಿ ಬಂಡಿವಡ್ಡರ, ಬಸವರಾಜ ತಳಬಾಳ, ಬಸವರಾಜ ಮಲ್ಲಾಪೂರ, ಶಿವಣ್ಣ ಗುಗ್ಗರಿ, ಎಚ್.ಟಿ ದ್ವಾಸಲ, ಬಾಬು ಬನ್ನಿಕೊಪ್ಪ, ಜಗದೀಶ ಅವರಡ್ಡಿ, ಮಂಜು ಚಿತ್ತರಗಿ, ಕುಮಾರ ಬಸವರಡ್ಡೇರ, ತಿಮ್ಮರಡ್ಡಿ ಇಮ್ರಾಪುರ, ಸಿದ್ದು ಹನುಮನಾಳ, ಬಸವರಾಜ ತಳವಾರ, ಅಜ್ಜಪ್ಪಗೌಡ ಪಾಟೀಲ, ಸೋಮು ಶಿರೋಳ, ಬಸವರಾಜ ಇನಾಮತಿ, ಶಿವು ಕಮ್ಮಾರ, ಮಹಾಂತೇಶ ಇಮ್ರಾಪೂರ, ಚನ್ನಬಸು ಹೂಗಾರ, ಎಂ.ಎಸ್. ಬಸವರಡ್ಡೇರ, ರಾಜು ಅವರಡ್ಡಿ ಬಾಬು ಯಾಲಕ್ಕಿ, ಬಸವರಾಜ ಬಾರಕೇರ ಇನ್ನು ಮುಂತಾದವರು ಉಪಸ್ಥಿತರಿದ್ದರು.